Englishहिन्दीമലയാളംதமிழ்తెలుగు

ಶಿಲ್ಪಾ ಶೆಟ್ಟಿ, ಕುಂದ್ರಾ ತಂಡಕ್ಕೆ 100 ಕೋಟಿ ದಂಡ

Posted by:
Updated: Tuesday, February 5, 2013, 14:21 [IST]
 

ಮುಂಬೈ, ಫೆ.4: ಆಟಗಾರರ ಹರಾಜು ಪ್ರಕ್ರಿಯೆ ಮುಗಿಸಿ ಮನೆಗೆ ತೆರಳಿದ್ದ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರ ಜೋಡಿಗೆ 100 ಕೋಟಿ ರು ಪಾವತಿಸುವಂತೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ.

ಶಿಲ್ಪಾ ಶೆಟ್ಟಿ ಒಡೆತನದ ರಾಜಸ್ಥಾನ್ ರಾಯಲ್ಸ್ ತಂಡ ಫೆಮಾ(FEMA) ಕಾಯ್ದೆ ಉಲ್ಲಂಘಿಸಿದೆ. ಹೀಗಾಗಿ 100 ಕೋಟಿ ರು ದಂಡ ವಿಧಿಸಲಾಗಿದೆ. 45 ದಿನಗಳಲ್ಲಿ ದಂಡ ಮೊತ್ತ ಪಾವತಿಸುವಂತೆ ಕೋರಲಾಗಿದೆ ಎಂದು ಟ್ರೈಮ್ಸ್ ನೌ ಸುದ್ದಿ ವಾಹಿನಿ ಪ್ರಸಾರ ಮಾಡಿದೆ.

ಶಿಲ್ಪಾ ಶೆಟ್ಟಿ, ಕುಂದ್ರಾ ತಂಡಕ್ಕೆ 100 ಕೋಟಿ ದಂಡ

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಜಾರಿ ನಿರ್ದೇಶನಾಲಯ ನೀಡಿರುವ ಶೋಕಾಸ್ ನೋಟಿಸ್ ಕಪ್ಪು ಚುಕ್ಕೆಯಾಗಿದೆ ಹಾಗೂ ತಂಡದ ಮಾಲೀಕರು ಹಾಗೂ ಹೂಡಿಕೆ ದಾರರು ಕೂಡಾ ಜಾರಿ ನಿರ್ದೇಶನಾಲಯದ ಹದ್ದಿನ ಕಣ್ಣಿಗೆ ಬೀಳಲಿದ್ದಾರೆ.

ಇಂಡಿಯನ್ ಪ್ರಿಮಿಯರ್ ಲೀಗ್ ನ ರಾಜಸ್ಥಾನ ರಾಯಲ್ಸ್ ಮೂಲಕ ವಿದೇಶಿ ಬಂಡವಾಳ ಹೂಡಿಕೆ ಅವ್ಯವಹಾರಗಳು ಎಗ್ಗಿಲ್ಲದೆ ನಡೆದಿದೆ. ಐಪಿಎಲ್ ಗೂ ಮುನ್ನವೇ ವಿದೇಶಿಯರಿಂದ ಹೂಡಿಕೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ತಂಡದ ಹೆಸರಿನಲ್ಲಿ ಸಂಗ್ರಹವಾದ ಹೂಡಿಕೆ ಹಂಚಿಕೆ ಹಾಗೂ ಷೇರುಗಳ ವಿವರ ಗೊಂದಲಮಯವಾಗಿದೆ.ಫೆಮಾ ಕಾಯ್ದೆಯ ಯಾವುದೇ ನಿಯಮಗಳನ್ನು ರಾಜಸ್ಥಾನ್ ರಾಯಲ್ಸ್ ತಂಡ ಪಾಲಿಸಿಲ್ಲ.

ಈ ಬಗ್ಗೆ ಏಪ್ರಿಲ್ 2011ರಲ್ಲೇ ಜೈಪುರದ ಐಪಿಎಲ್ ತಂಡಕ್ಕೆ ಹಲವು ಬಾರಿ ಶೋಕಾಸ್ ನೋಟಿಸ್ ನೀಡಲಾಗಿತ್ತು. ನೋಟಿಸ್ ಗೆ ಯಾವುದೇ ಉತ್ತರ ಬಂದಿಲ್ಲ. ಫೆಮಾ ನಿಯಮ ಉಲ್ಲಂಘನೆ ಆರೋಪದ ಮೇಲೆ 100 ಕೋಟಿ ರು ದಂಡ ವಿಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಜೈಪುರ ಐಪಿಎಲ್‌ಕ್ರಿಕೆಟ್ ಪ್ರೈ ಲಿಮಿಟೆಡ್ ಹಾಗೂ ಅದರ ನಿರ್ದೇಶಕರು, ರಾಜಸ್ಥಾನ ರಾಯಲ್ಸ್ ಮಾಲಕರಿಗೆ 50 ಕೋಟಿ ರೂ. ದಂಡ ಹಾಗೂ ಇಎಂ ಸ್ಪೋರ್ಟಿಂಗ್ ಹೋಲ್ಡಿಂಗ್‌ಗೆ 34 ಕೋಟಿ ರೂ. ಪೆನಾಲ್ಟಿಯನ್ನು ವಿಧಿಸಿದೆ.

ಎನ್‌ಡಿ ಇನ್ವೆಸ್ಟ್‌ಮೆಂಟ್, ಯುಎಸ್‌ಎ ವಿರುದ್ಧ 14.5 ಕೋಟಿ ರೂ. ದಂಡ ವಿಧಿಸಿ ನೋಟಿಸ್ ಜಾರಿಗೊಳಿಸಲಾಗಿದೆ. ಈ ಮೂರು ಕಂಪೆನಿಗಳು ತಮಗೆ ವಿಧಿಸಿರುವ ದಂಡದ ವಿರುದ್ಧ ಫೆಮಾಕ್ಕೆ ಮೇಲ್ಮನವಿಯನ್ನು ಸಲ್ಲಿಸಬಹುದಾಗಿದೆ.

Story first published:  Monday, February 4, 2013, 16:29 [IST]
English summary
Shilpa Shetty, Raj Kundra's IPL team Rajasthan Royals has been penalised Rs 100 crore under FEMA contraventions, according to a TV report.
ಅಭಿಪ್ರಾಯ ಬರೆಯಿರಿ