Englishहिन्दीമലയാളംதமிழ்తెలుగు

ಟಿ20 ಶ್ರೇಯಾಂಕ: 3ನೇ ಸ್ಥಾನ ಉಳಿಸಿಕೊಂಡ ಭಾರತ

Posted by:
Published: Friday, January 25, 2013, 13:28 [IST]
 

ಬೆಂಗಳೂರು, ಜ.25: ಅಂತಾರಾಷ್ಟ್ರೀಯ ಟ್ವೆಂಟಿ20 ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲೇ ಉಳಿದಿದೆ. ವಿರಾಟ್ ಕೊಹ್ಲಿ ಶ್ರೇಯಾಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ ಸಾಧನೆ ಮಾಡಿದ್ದಾರೆ.

ಕೊಹ್ಲಿ ಒಟ್ಟು 730 ಪಾಯಿಂಟ್ ಕಲೆಹಾಕಿ ಐದನೇ ಸ್ಥಾನಗಳಿಸಿದ್ದಾರೆ. ಟಾಪ್ 10 ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಮತ್ತೊಬ್ಬ ಆಟಗಾರ ಸುರೇಶ್ ರೈನಾ ಕೂಡಾ ಇದ್ದಾರೆ. ರೈನಾ 718 ಪಾಯಿಂಟ್‌ಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ)ಪ್ರಕಟಿಸಿರುವ ನೂತನ ಶ್ರೇಯಾಂಕ ಪಟ್ಟಿಯಂತೆ ಯುವರಾಜ್ ಸಿಂಗ್ 13 ನೇ ಮತ್ತು ಆರಂಭ ಆಟಗಾರ ಗೌತಂ ಗಂಭೀರ್ 17ನೇ ಸ್ಥಾನ ಪಡೆದಿದ್ದಾರೆ.

ಟ್ವೆಂಟಿ20 ಬ್ಯಾಟಿಂಗ್ ಕ್ರಮಾಂಕದಲ್ಲಿ ಅಗ್ರಸ್ಥಾನ ಆಸ್ಟ್ರೇಲಿಯಾದ ಶೇನ್ ವಾಟ್ಸನ್ (798 ಪಾಯಿಂಟ್) ಅವರ ಪಾಲಾಗಿದೆ. ನಂತರದ ಸ್ಥಾನ ವೆಸ್ಟ್ ಇಂಡೀಸ್ ನ ಆಕ್ರಮಣಕಾರಿ ಆರಂಭ ಆಟಗಾರ ಕ್ರಿಸ್ ಗೇಲ್ (792) ಪಡೆದಿದ್ದಾರೆ. ಬ್ರೆಂಡನ್ ಮೆಕ್ಕಲಂ (787), ಶ್ರೀಲಂಕಾದ ಮಹೇಲ ಜಯವರ್ಧನೆ (759) ನಂತರ ದ ಸ್ಥಾನದಲ್ಲಿದ್ದಾರೆ.

ಟ್ವೆಂಟಿ20 ತಂಡಗಳ ಪೈಕಿ ಭಾರತ ಒಂದು ರೇಟಿಂಗ್ ಪಾಯಿಂಟ್ ಕಳೆದುಕೊಂಡಿದ್ದರೂ 119 ಪಾಯಿಂಟ್ ಗಳೊಂದಿಗೆ ಮೂರನೇ ಸ್ಥಾನವನ್ನು ಕಾಪಾಡಿಕೊಂಡಿದೆ. ಶ್ರೀಲಂಕಾ 172 ಪಾಯಿಂಟ್ ಕಲೆ ಹಾಕಿ ಮೊದಲ ಸ್ಥಾನದಲ್ಲಿದೆ. ಹಾಲಿ ಟ್ವೆಂಟಿ20 ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ (122) ಎರಡನೇ ಸ್ಥಾನ ತನ್ನದಾಗಿಸಿಕೊಂಡಿದೆ.

ಬೌಲಿಂಗ್ ವಿಭಾಗದಲ್ಲಿ ಅಗ್ರ 20 ಸ್ಥಾನದ ಪೈಕಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 16 ನೇಯವರಾಗಿದ್ದು ಪಟ್ಟಿಯಲ್ಲಿರುವ ಭಾರತದ ಏಕೈಕ ಬೌಲರ್ ಆಗಿದ್ದಾರೆ. ಪಾಕಿಸ್ಥಾನದ ಸಯೀದ್ ಅಜ್ಮಲ್ 756 ಪಾಯಿಂಟ್ ಗಳೊಂದಿಗೆ ಮೊದಲಿಗರಾಗಿದ್ದಾರೆ. ನಂತರದ ಕ್ರಮವಾಗಿ ಶ್ರೀಲಂಕಾದ ಅಜಂತ ಮೆಂಡಿಸ್ (746) ಹಾಗೂ ಇಂಗ್ಲೆಂಡಿನ ಗ್ರೇಮ್ ಸ್ವಾನ್ (720) ಪಾಲಾಗಿದೆ.

English summary
At fifth, Virat Kohli is the highest placed Indian in the ICC rankings for Twenty20 batsmen, while India have managed to retain their third position in the team rankings issued on Thursday(Jan.25).
ಅಭಿಪ್ರಾಯ ಬರೆಯಿರಿ