Englishहिन्दीമലയാളംதமிழ்తెలుగు

ರಣಜಿಯಲ್ಲಿ ತೆಂಡೂಲ್ಕರ್ ತಿವಿಕ್ರಮ ಸಾಧನೆ

Posted by:
Updated: Monday, January 21, 2013, 16:45 [IST]
 

ಬೆಂಗಳೂರು, ಜ.21: ಇದೇ ಮೊದಲ ಬಾರಿಗೆ ರಣಜಿ ಫೈನಲ್ ಪ್ರವೇಶಿಸಿರುವ ಸೌರಾಷ್ಟ್ರದ ವಿರುದ್ಧ ರಣಜಿ ಕಿಂಗ್ ಗಳಾದ ಮುಂಬೈ ತಂಡ ಜ.26ರಂದು ಸೆಣಸಾಡಲಿದೆ. ಈ ಬಾರಿ ರಣಜಿ ಫೈನಲ್ ನಲ್ಲಿ ಆಡುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಲು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಜ್ಜಾಗಿದ್ದಾರೆ.

ಪ್ರಸಕ್ತ ರಣಜಿ ಋತುವಿನಲ್ಲಿ ಮುಂಬೈ ಪರ ಸಚಿನ್, ರೈಲ್ವೇಸ್ ವಿರುದ್ಧ ಲೀಗ್ ಪಂದ್ಯ, ಕ್ವಾಟರ್ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳಲ್ಲಿ ಆಡಿದ್ದರು. ಈ ಮೂಲಕ ಕಿರಿಯ ಆಟಗಾರರಿಗೆ ಸಚಿನ್ ಹುರುಪು ತುಂಬಿದ್ದರು. ಈ ವರೆಗೂ ಸಚಿನ್ 5 ಫೈನಲ್ಸ್ ನಲ್ಲಿ ಆಡಿದ್ದು ಮುಂಬೈ ತಂಡ ನಾಲ್ಕು ಬಾರಿ ಗೆದ್ದಿದ್ದು 1 ಬಾರಿ ಮಾತ್ರ ಸೋಲು ಕಂಡಿದೆ.

ಸೋಮವಾರ(ಜ.19) ಬೆಳಗ್ಗೆ ಸರ್ವೀಸಸ್ ತಂಡವನ್ನು ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಮುಂಬೈ ತಂಡ ಸೋಲಿಸಿತು. ಈ ಮೂಲಕ ದಾಖಲೆಯ 44ನೇ ಬಾರಿಗೆ ಫೈನಲ್ ಪ್ರವೇಶ ಪಡೆಯಿತು.

ಸಚಿನ್ ಸಾಧನೆ: ರಣಜಿ ಫೈನಲ್ ಪಂದ್ಯಗಳಲ್ಲಿ ಸಚಿನ್ ಅವರು 10 ಇನ್ನಿಂಗ್ಸ್ ನಲ್ಲಿ 75 ರನ್ ಸರಾಸರಿಯಂತೆ 755 ರನ್ ಚೆಚ್ಚಿದ್ದಾರೆ (4 ಶತಕ, 2 ಅರ್ಧ ಶತಕ)

ಕಳೆದ ಬಾರಿ ಮುಂಬೈ ತಂಡ 2009ರಲ್ಲಿ ಉತ್ತರ ಪ್ರದೇಶ ವಿರುದ್ಧ ರಣಜಿ ಫೈನಲ್ ಆಡಿತ್ತು. ಆದರೆ, ಸಚಿನ್ ಅವರ ಸಾಧನೆ ಉತ್ತಮವಾಗಿರಲಿಲ್ಲ. ಎರಡು ಇನ್ನಿಂಗ್ಸ್ ನಲ್ಲಿ ೦ ಹಾಗೂ 4 ರನ್ ಗಳಿಸಿ ಔಟಾಗಿದ್ದರು. ಅದರೆ, ಪಂದ್ಯವನ್ನು ಮುಂಬೈ ತಂಡ 243 ರನ್ ಗಳ ಬೃಹತ್ ಅಂತರದಿಂದ ಗೆದ್ದು ಬೀಗಿತ್ತು.

ಆದರೆ, ಶೂನ್ಯ ಸಂಪಾದನೆ ಕೂಡಾ ದಾಖಲೆಯಾಗಿದೆ. ರಣಜಿ ವೃತ್ತಿ ಜೀವನದಲ್ಲಿ ಡಕ್ ಔಟ್ ಮಾಡಿದ ಸಾಧನೆ ಮೆರೆದಿದ್ದು, ಇತ್ತೀಚೆಗೆ ಟೀಂ ಇಂಡಿಯಾ ಸೇರಿರುವ ಯುವ ಪ್ರತಿಭೆ ಭುವನೇಶ್ವರ್ ಕುಮಾರ್.

1991ರಲ್ಲಿ ಮೊದಲ ಬಾರಿಗೆ ರಣಜಿ ಅಂಗಳಕ್ಕೆ ಕಾಲಿರಿಸಿದ ಸಚಿನ್ ತೆಂಡೂಲ್ಕರ್ ಅವರು 1995ರಲ್ಲಿ ಪಂಜಾಬ್ ವಿರುದ್ಧ ಎರಡೂ ಇನ್ನಿಂಗ್ಸ್ ನಲ್ಲಿ ಭರ್ಜರಿ ಶತಕ ಬಾರಿಸಿದ್ದರು. ಸಚಿನ್ ಹೊಡೆದ 140 ಹಾಗೂ 139 ರನ್ ಗಳು ಇಂದಿಗೂ ಶ್ರೇಷ್ಠ ರಣಜಿ ಇನ್ನಿಂಗ್ಸ್ ಆಗಿ ಪರಿಗಣಿಸಲ್ಪಟ್ಟಿದೆ.

ನಂತರ, 2000,2007 ಹಾಗೂ 2009ರ ಫೈನಲ್ ನಲ್ಲಿ ಸಚಿನ್ ಆಡಿದ್ದರು. ಸಚಿನ್ ಶತಕ ಹೊಡೆದರೆ ಮುಂಬೈಗೆ ರಣಜಿ ಕಿರೀಟ ಎಂಬ ಮಾತು ಹುಟ್ಟಿಕೊಂಡಿತು.

ರಣಜಿ ಫೈನಲ್ ಗಳಲ್ಲಿ ಸಚಿನ್ ಸಾಧನೆ ಪಟ್ಟಿ ಇಲ್ಲಿದೆ ನೋಡಿ

* ಮೇ 3-7, 1991 (ವಾಖೆಂಡೆ ಸ್ಟೇಡಿಯಂ) vs ಹರ್ಯಾಣ (ಸಚಿನ್ : 47 ಮತ್ತು 96) ಮುಂಬೈ ಗೆ 2 ರನ್ ಗಳ ಸೋಲು
* ಮಾರ್ಚ್ 27-31, 1995 (ವಾಖೆಂಡೆ ಸ್ಟೇಡಿಯಂ) vs ಪಂಜಾಬ್ (ಸಚಿನ್: 140 ಹಾಗೂ 139) ಮುಂಬೈಗೆ ಗೆಲುವು
* ಏಪ್ರಿಲ್ 19-23, 2000 (ವಾಖೆಂಡೆ ಸ್ಟೇಡಿಯಂ) vs ಹೈದರಾಬಾದ್ (ಸಚಿನ್ : 53 ಹಾಗೂ 128) ಮುಂಬೈಗೆ 297 ರನ್ ಗಳ ಗೆಲುವು
* ಫೆ 2-6, 2007 (ವಾಖೆಂಡೆ ಸ್ಟೇಡಿಯಂ) vs ಬೆಂಗಾಳ (ಎಲೈಟ್ ಗ್ರೂಪ್) (ಸಚಿನ್: 105 ಹಾಗೂ 43) ಮುಂಬೈಗೆ 132ರನ್ ಗಳಿಂದ ಜಯ
* ಜನವರಿ 12-16, 2009 (ರಾಜೀವ್ ಗಾಂಧಿ ಸ್ಟೇಡಿಯಂ, ಹೈದರಾಬಾದ್) vs ಉತ್ತರ ಪ್ರದೇಶ (ಸಚಿನ್ : 0 ಮತ್ತು 4) ಮುಂಬೈಗೆ 243ರನ್ ಗಳ ಜಯ

ದಟ್ಸ್ ಕ್ರಿಕೆಟ್

Story first published:  Monday, January 21, 2013, 16:28 [IST]
English summary
Sachin Tendulkar is set to make his sixth Ranji Trophy final appearance for Mumbai, against Saurashtra in Mumbai from January 26.
ಅಭಿಪ್ರಾಯ ಬರೆಯಿರಿ