Englishहिन्दीമലയാളംதமிழ்తెలుగు

ಜಡೇಜ ಅದ್ಭುತ ಪ್ರದರ್ಶನ, ಭಾರತಕ್ಕೆ ಭರ್ಜರಿ ಜಯ

Posted by:
Updated: Tuesday, January 15, 2013, 21:43 [IST]
 

ಕೊಚ್ಚಿ, ಜ.15: ರವೀಂದ್ರ ಜಡೇಜ ಅವರ ಆಲ್ ರೌಂಡರ್ ಆಟ, ರೈನಾ, ನಾಯಕ ಧೋನಿ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ಎರಡನೇ ಏಕದಿನ ಪಂದ್ಯವನ್ನು 127 ರನ್ ಗಳಿಂದ ಸುಲಭವಾಗಿ ಗೆದ್ದುಕೊಂಡಿದೆ. ಈ ಮೂಲಕ 5 ಪಂದ್ಯಗಳ ಸರಣಿ ಈಗ 1-1 ಸಮಬಲವಾಗಿದೆ.

ಕೆವಿನ್ ಪೀಟರ್ಸನ್ 42, ರೂಟ್ 32 ಜೊತೆ ನಾಟೌಟ್ ಆಗಿ ಉಳಿದ ಸಮಿತ್ ಪಟೇಲ್ 30 ರನ್ ಹೊಡೆದಿದ್ದು ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.

ಭಾರತದ ಪರ ಜಡೇಜ 7 ಓವರ್ ಗಳಲ್ಲಿ 12 ರನ್ನಿತ್ತು 2 ವಿಕೆಟ್ ಕಿತ್ತರು. ಭುವನೇಶ್ವರ್ ಕುಮಾರ್ 29ಕ್ಕೆ 3, ಅಶ್ವಿನ್ 7 ಓವರ್ ಗಳಲ್ಲಿ 39ಕ್ಕೆ 3 ವಿಕೆಟ್ ಕಬಳಿಸಿ ಇಂಗ್ಲೆಂಡ್ ಕಥೆ ಮುಗಿಸಿದರು. ಶಮಿ ಅಹ್ಮದ್ ಗೆ ದಿನ ಚೆನ್ನಾಗಿರಲಿಲ್ಲ 4 ಓವರ್ ಗಳಲ್ಲಿ 24 ರನ್ ಚೆಚ್ಚಿಸಿಕೊಂಡರೆ, ಅನುಭವಿ ವೇಗಿ ಇಶಾಂತ್ ನಾನೇನು ಕಮ್ಮಿ ಎನ್ನುತ್ತಾ 4 ಓವರ್ ಗಳಲ್ಲಿ 28 ರನ್ ಬಾರಿಸಿಕೊಂಡರು. ಅಂತಿಮವಾಗಿ ಇಂಗ್ಲೆಂಡ್ ತಂಡ 158 ರನ್ ಗಳಿಸಿ ಆಲೌಟ್ ಆಯಿತು.

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಧೋನಿ ಪಡೆ ಎಂದಿನಂತೆ ಉತ್ತಮ ಆರಂಭ ಪಡೆಯದೆ ಒದ್ದಾಡಿತು. ರಹಾನೆ 4, ಗಂಭೀರ್ 8 ರನ್ ಗಳಿಸಿ ಔಟಾದರು. ವಿರಾತ್ ಕೊಹ್ಲಿ ತಾಳ್ಮೆಯಾಟವಾಡಿ 37 ರನ್ ಹಾಗೂ ಯುವರಾಜ್ ಸಿಂಗ್ 32 ರನ್ ಕಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು.

ನಂತರ ಸುರೇಶ್ ರೈನಾ 78 ಎಸೆತದಲ್ಲಿ 55 ರನ್ ಗಳಿಸಿದರೆ, ಏಕದಿನ ಕ್ರಿಕೆಟ್ ನ ವೀರ ಎಂಎಸ್ ಧೋನಿ 55 ರನ್(78 ಎಸೆತ, 2 ಬೌಂಡರಿ, 2 ಸಿಕ್ಸರ್) ಸಿಡಿಸಿದರು. ರವೀಂದ್ರ ಜಡೇಜ 37 ಎಸೆತದಲ್ಲಿ 61 ರನ್ ಚೆಚ್ಚಿ ಔಟಾಗದೆ ಉಳಿದು (8 ಬೌಂಡರಿ, 2 ಸಿಕ್ಸರ್) ಬಾರಿಸಿ ತಂಡದ ಮೊತ್ತವನ್ನು 285ಕ್ಕೇರಿಸಿದರು.

Story first published:  Tuesday, January 15, 2013, 19:18 [IST]
English summary
Ravindra Jadeja was the star performer for India in Kochi on Tuesday. The left-hander's outstanding all-round display (61 not out and 2/12) helped India thrash England by 127 runs and draw level at 1-1 in the five-match series.
ಅಭಿಪ್ರಾಯ ಬರೆಯಿರಿ