Englishहिन्दीമലയാളംதமிழ்తెలుగు

ಕರ್ನಾಟಕದ ಆಸೆಗೆ ಪೂಜಾರಾ ಕೊಡಲಿ ಪೆಟ್ಟು

Posted by:
Updated: Thursday, January 10, 2013, 18:55 [IST]
 

ರಾಜ್ ಕೋಟ್, ಜ.10: ಕರ್ನಾಟಕ ಕೊನೆಗೂ ರಣಜಿ ಸೆಮಿಸ್ ಪ್ರವೇಶಿಸಲು ಆಗದೆ ಹೊರ ಬಿದ್ದಿದೆ. ಸೌರಾಷ್ಟ್ರ ತಂಡ ಮೊದಲ ಇನ್ನಿಂಗ್ಸ್ ಮುನ್ನಡೆ ಗಳಿಸಿದ್ದರಿಂದ ಸುಲಭವಾಗಿ ಗುರುವಾರ(ಜ.10) ಸೆಮಿಫೈನಲ್ ಪ್ರವೇಶಿಸಿದೆ.

ಮೊದಲ ಇನ್ನಿಂಗ್ಸ್ ನಲ್ಲಿ 469 ರನ್ ಚೆಚ್ಚಿದ್ದ ಸೌರಾಷ್ಟ್ರ ನಂತರ ಕರ್ನಾಟಕವನ್ನು 396 ರನ್ ಗಳಿಗೆ ನಿಯಂತ್ರಿಸಿ ಗೆಲುವಿನ ಕನಸು ಕಂಡಿತ್ತು. ಆದರೆ, ಎರಡನೇ ಇನ್ನಿಂಗ್ಸ್ ನಲ್ಲಿ 718 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿ ಪಂದ್ಯ ಡ್ರಾ ಮಾಡಿಕೊಂಡು ಕರ್ನಾಟಕದ ಆಟಗಾರರು ಬೆವರಿಳಿಸುವಂತೆ ಮಾಡಿಬಿಟ್ಟಿತು.

ಪೂಜಾರಾ ಭರ್ಜರಿ ಆಟ: ಪೂಜಾರಾ ಪ್ರಥಮ ದರ್ಜೆ ಕ್ರಿಕೆಟ್ ಜೀವನದ ಎರಡನೇ ತ್ರಿಶತಕ ದಾಖಲಿಸಿದರು. ಪೂಜಾರಾ 352 ರನ್(427 ಎಸೆತ, 49 ಬೌಂಡರಿ, 1 ಸಿಕ್ಸರ್) ಜಾಕ್ಸನ್ 117 ರನ್ ಬಾರಿಸಿದರು.ರವೀಂದ್ರ ಜಡೇಜಾ ಅವರ 331 ರನ್ ದಾಟಿದ ಪೂಜಾರ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

Cheteshwar Pujara ‏@chetupujara2012 : Had a brilliant day, by scoring 352 runs in #Ranji against Karnataka, btw tomorrow is big day for me, hope to show my best.ಎಂದು ಟ್ವೀಟ್ ಮಾಡಿದ್ದಾರೆ.

ಸೆಮಿಸ್ ನಲ್ಲಿ ಸೌರಾಷ್ಟ್ರ ತಂಡ ಪಂಜಾಬ್ ಅನ್ನು ಎದುರಿಸಲಿದೆ. ಮುಂಬೈ ತಂಡ ಸರ್ವೀಸಸ್ ತಂಡ ವಿರುದ್ಧ ಸೆಣಸಲಿದೆ.

ಸಂಕ್ಷಿಪ್ತ ಸ್ಕೋರ್: ಸೌರಾಷ್ಟ್ರ : 469 ಹಾಗೂ 718ಕ್ಕೆ 9(ಪೂಜಾರಾ 352, ಜಾಕ್ಸನ್ 117, ಗೌತಮ್ 4/206) ಕರ್ನಾಟಕ 396( ಮನೀಶ್ ಪಾಂಡೆ 177 ರನ್)

ರಣಜಿ ಸ್ಟಾರ್ ಗಳು: ಪ್ರಸಕ್ತ ಋತುವಿನಲ್ಲಿ ನಾಯಕ ವಿನಯ್ ಕುಮಾರ್ ಮಹತ್ವದ ಪಂದ್ಯಗಳಿಗೆ ಲಭ್ಯರಿರಲಿಲ್ಲ. ಅನೇಕ ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆ ಕೊಟ್ಟಿದ್ದು ಕರ್ನಾಟಕಕ್ಕೆ ಮುಳುವಾಯಿತು.

* ವಿಕೆಟ್ ಕೀಪರ್ ಸಿಎಂ ಗೌತಮ್ 943 ರನ್ 117.37 ಸರಾಸರಿ
* 19 ವರ್ಷದ ವೇಗಿ ಎಚ್ ಎಸ್ ಶರತ್ 7 ಪಂದ್ಯಗಳಿಂದ 24 ವಿಕೆಟ್
* ಸ್ಟುವರ್ಟ್ ಬಿನ್ನಿ 612 ರನ್ ಹಾಗೂ 19 ವಿಕೆಟ್
ಜೊತೆಗೆ 20 ವರ್ಷದ ಕೆಎಲ್ ರಾಹುಲ್ ಕೂಡಾ ಗಮನ ಸೆಳೆಯುವ ಪ್ರದರ್ಶನ ನೀಡಿದರು. ಮನೀಶ್ ಪಾಂಡೆ ಕ್ವಾಟರ್ ಫೈನಲ್ ನಲ್ಲಿ ಶತಕ ಸಿಡಿಸಿದ್ದು ಫಲ ನೀಡಲಿಲ್ಲ. ಒಟ್ಟಾರೆ, ಕರ್ನಾಟಕದ ರಣಜಿ ತಂಡ ಶಕ್ತಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದು ಸುಳ್ಳಲ್ಲ.

Story first published:  Thursday, January 10, 2013, 18:43 [IST]
English summary
Saurashtra on Thursday entered the semi-final of Ranji Trophy on virtue of their first innings lead over rival Karnataka.
ಅಭಿಪ್ರಾಯ ಬರೆಯಿರಿ