Englishहिन्दीമലയാളംதமிழ்తెలుగు

ದೆಹಲಿ ODI ಪಂದ್ಯದ ಆಕರ್ಷಕ ಚಿತ್ರಗಳು

Posted by:
Updated: Monday, January 7, 2013, 17:56 [IST]
 

ನವದೆಹಲಿ, ಜ.7: ಬಹುಶಃ ಇದೇ ಮೊದಲ ಬಾರಿಗೆ ಈ ಪರಿ ಚಳಿಯಲ್ಲಿ ಆಡಿದ್ದಕ್ಕೋ ಏನೋ ಟೀಂ ಇಂಡಿಯಾ ಹುಡುಗರು ಬದ್ಧ ಎದುರಾಳಿ ಪಾಕಿಸ್ತಾನದ ಮೇಲೆ ಸಕತ್ 'ಹಾಟ್' ಗೆಲುವು ಸಾಧಿಸಿಬಿಟ್ಟರು.

ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಜ.6 ರಂದು ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆಟಗಾರರು ಅಕ್ಷರಶಃ ಫ್ರೀಜ್ ಆಗಿಬಿಟ್ಟಿದ್ದರು. ಸ್ವಲ್ಪ ಮಳೆ, ಬಿರುಗಾಳಿ ಎದ್ದರೂ ಪೆವಿಲಿಯನ್ ಗೆ ಓಡಿ ಹೋಗುವ ಪರಿಸ್ಥಿತಿ ಕ್ರಿಕೆಟ್ ನಲ್ಲಿ ಮಾಮೂಲಿ. ಆದರೆ, ಪಾಕಿಸ್ತಾನ ಹಾಗೂ ಟೀಂ ಇಂಡಿಯಾ ಆಟಗಾರರು ಕೊರೆಯುವ ಚಳಿಯಲ್ಲಿ ಉತ್ತಮ ಆಟ ಪ್ರದರ್ಶಿಸಿ ಪ್ರೇಕ್ಷಕರಿಗೆ ಕಿಚ್ಚು ಹಬ್ಬಿಸಿದರು.

ಸತತ ಎರಡು ಪಂದ್ಯ ಸೋತಿದ್ದ ಭಾರತ ತಂಡ ಸುಮಾರು 1.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಅದ್ಭುತ ಫೀಲ್ಡಿಂಗ್ ಮಾಡಿ ಪಂದ್ಯ ಗೆದ್ದಿದ್ದು ಸಾಮಾನ್ಯದ ಮಾತಲ್ಲ. ಪುಣ್ಯಕ್ಕೆ ಮಂಜು ಕವಿದ ವಾತಾವರಣದಿಂದ ದೆಹಲಿಗೆ ಸ್ವಲ್ಪ ಬಿಡುವು ಸಿಕ್ಕಿತ್ತು. ಹೀಗಾಗಿ ಹಾಗೂ ಹೀಗೂ ಕ್ರಿಕೆಟ್ ಪಂದ್ಯ ಅಚ್ಚುಕಟ್ಟಾಗಿ ಆಡಲು ಸಾಧ್ಯವಾಯಿತು.

ದೆಹಲಿ ಅಲ್ಲದೆ, ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್, ಬಿಹಾರ ಹಾಗೂ ಜಮ್ಮು ಕಾಶ್ಮೀರದಲ್ಲಿ ಉಷ್ಣಾಂಶ ಒಂದಂಕಿಯಲ್ಲೇ ಮುಂದುವರೆದಿದೆ.

ಚಳಿಯಲ್ಲಿ ಮೈ ಕೈ ಮರಗಟ್ಟುತ್ತಿದ್ದರೂ ಹಾಟ್ ವಾಟರ್ ಕವರ್ ಬಳಸುತ್ತಾ, ಆಗಾಗ ಕೈ ಉಜ್ಜುತ್ತಾ ಶಾಖ ಹೆಚ್ಚಿಸಿಕೊಳ್ಳುತ್ತಾ ಪರದಾಡುತ್ತಿದ್ದ ಆಟಗಾರರು ಕೆಮೆರಾ ಕಣ್ಣಿಗೆ ಬಿದ್ದಿದ್ದು ಹೀಗೆ.. ಮುಂದಿನ ದೃಶ್ಯಾವಳಿಯಲ್ಲಿ ಕ್ರಿಕೆಟರ್ ಗಳು ಚಳಿಯಲ್ಲಿ ಒದ್ದಾಟ ನಡೆಸಿದ್ದನ್ನು ನೋಡಿ ಕಣ್ತುಂಬಿಕೊಳ್ಳಿ.

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ಭಾರತದ ಅಪ್ರತಿಮ ಫೀಲ್ಡಿಂಗ್ ವೀರರಾದ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ ಕೈ ಗೆ ಉಫ್ ಉಫ್ ಮಾಡಿ ಶಾಖ ಬರೆಸಿಕೊಳ್ಳುತ್ತಿದ್ದಾರೆ.

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ನಮ್ಮೂರ ಚಳಿ ನನಗೆ ಇಷ್ಟು ಕಾಟ ಕೊಡ್ತಾ ಇದ್ದೀಯಲ್ಲ

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ಬಿಸಿ ನೀರಿನ ಬಾಟಲ್ ಗಳ ಬಳಸಿದರೂ ಶಾಖ ಸಾಲುತ್ತಿಲ್ಲ. ಕಿವಿಗೂ ಸ್ವಲ್ಪ ಬಿಸಿ ತಟ್ಟಲಿ ಎಂದ ರೈನಾ ಯುವಿ ಜೊತೆ ಬ್ರೇಕ್ ನಲ್ಲಿ

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ಯಪ್ಪಾ ಚಳಿಯಲ್ಲೂ ಯುವಿ ಜೋಕ್ ಮಾಡ್ತಾನಪ್ಪ

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ದೆಹಲಿಯ ಒಂದು ಭಾಗದಲ್ಲಿ ಇದೇ ಸಮಯದಲ್ಲಿ ಚಳಿ ಕಾಯಿಸುತ್ತಿರುವ ಬಾಲಕರು

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ಅಲಹಾಬಾದಿನಲ್ಲಿ ಕುಂಭಮೇಳ ಸಿದ್ಧತೆಯ ನಡುವೆ ಚಳಿ ಕಾಯಿಸುವಿಕೆ

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ಬ್ಯಾಕ್ ಟು ದಿ ಫೀಲ್ಡ್ ಆಲ್ಲಲ್ಲ. ಕೊಹ್ಲಿ ಬ್ಯಾಕ್ ಟು ದಿ ಪೆವಿಲಿಯನ್

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

7 ಅಡಿ ವೇಗಿ ಇರ್ಫಾನ್ ಆರಂಭಿಕ ಆಟಗಾರ ಗಂಭೀರರನ್ನು ಗುರಾಯಿಸಿದ್ದು ಹೀಗೆ

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ಬ್ಯಾಟಿಂಗ್ ಸ್ಥಿರತೆ ಕಾಯ್ದುಕೊಂಡ ಸುರೇಶ್ ರೈನಾ ಆಕರ್ಷಕ ಭಂಗಿಯಲ್ಲಿ

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ನಾಯಕನ ಆಟವಾಡಿದ ಎಂಎಸ್ ಧೋನಿ ಆಕರ್ಷಕ ಹೊಡೆತ

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ಓಡು ರೈನಾ ಓಡು ಎರಡು ರನ್ ಕದಿಯೋಣ: ಧೋನಿ

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ಥುತ್ ! ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಹೊರಟ ಕ್ಯಾಪ್ಟನ್ ಕೂಲ್

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ಭಾರತದ ವಿರುದ್ಧ ಶ್ರೇಷ್ಠ ಪ್ರದರ್ಶನ ನೀಡಿದ ಆಫ್ ಸ್ಪಿನ್ನರ್ ಸೈಯದ್ ಅಜ್ಮಲ್

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ಶ್ರೇಷ್ಠ ಪ್ರದರ್ಶನ ನೀಡಿದ ಅಜ್ಮಲ್ ವಿಕೆಟ್ ಕಿತ್ತಾಗ ಸಂಭ್ರಮಿಸಿದ್ದು ಹೀಗೆ

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ವೇಗಿ ಭುವನೇಶ್ವರ್ ಕುಮಾರ್ ವಿಕೆಟ್ ಉದುರಿಸಿದಾಗ ಅಜಿಂಕ್ಯರಿಂದ ಅಪ್ಪುಗೆ

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ವಿಕೆಟ್ ಕಿತ್ತು ಮೇಲಕ್ಕೆ ಹಾರಿದ ಅಶ್ವಿನ್, ಕೈ ಎತ್ತಿ ಸಂಭ್ರಮಿಸಿದ ಧೋನಿ, ಯಸ್ ಎಂದು ಚೀರಿದ ಕೊಹ್ಲಿ

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ಅಜಿಂಕ್ಯ ರಹಾನೆ ಚಳಿಯಲ್ಲಿ ನಡುಗುತ್ತಾ ಪಾಕಿಸ್ತಾನ ನಾಯಕ ಹಫೀಜ್ ಕ್ಯಾಚ್ ಕೈ ಚೆಲ್ಲಿದ ದೃಶ್ಯ

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ಪಾಕ್ ವೇಗಿ ಉಮರ್ ಗುಲ್ ಏನೋ ವಿಚಿತ್ರ ಶಾಟ್ ಹೊಡೆಯಲು ಯತ್ನಿಸಿ ಸೋತಿದ್ದು

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ಅಬ್ಬಾ ಅಂತೂ ಮಾನ ಮರ್ಯಾದೆ ಉಳಿತು,ವಿಕೆಟ್ ಕಿತ್ತು ಸಂಭ್ರಮಿಸಿದ ಪಂದ್ಯಶ್ರೇಷ್ಠ ಧೋನಿ

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ಕೊನೆ ವಿಕೆಟ್ ಕ್ಯಾಚು ಹಿಡಿದ ಯುವರಾಜ ಮೈದಾನದಲ್ಲಿ ಓಟಕಿತ್ತು ಸಂಭ್ರಮಿಸಿದ ಕ್ಷಣ

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ಗೌತಮ್ ಗಂಭೀರ್ ನಾಯಕ ಧೋನಿಗೆ ಕೈ ಕುಲುಕಲು ಮುಂದಾದಾಗ

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ಭಾರತ ವಿರುದ್ಧ ಏಕದಿನ ಸರಣಿಯನ್ನು 2-1ರ ಅಂತರದಿಂದ ಗೆದ್ದ ಪಾಕಿಸ್ತಾನಕ್ಕೆ ಒಲಿದ ಕಪ್ ಹಿಡಿದ ನಾಯಕ ಮಿಸ್ಬ ಉಲ್ ಹಕ್

ಕೊರೆಯುವ ಚಳಿಯಲ್ಲಿ ಮೈಮರಿಸಿದ ಗೆಲುವು

ಪ್ರವಾಸಿ ಪಾಕಿಸ್ತಾನ ತಂಡದ ಶ್ರೇಷ್ಠ ಸಾಧನೆ, ಪಾಕ್ ಏಕದಿನ ತಂಡದ ಗ್ರೂಪ್ ಫೋಟೋ


Saeed Ajmal
Recent Matches Played
  • ಬಾಂಗ್ಲಾದೇಶ ಜಯ ಸಾಧಿಸಿದೆ 7 ವಿಕೆಟ್‌ಗಳು
  • ಬಾಂಗ್ಲಾದೇಶ ಜಯ ಸಾಧಿಸಿದೆ 7 ವಿಕೆಟ್‌ಗಳು
  • ಬಾಂಗ್ಲಾದೇಶ ಜಯ ಸಾಧಿಸಿದೆ 79 ರನ್‌ಗಳು

Story first published:  Monday, January 7, 2013, 15:59 [IST]
English summary
After facing defeat in two consecutive matches, Team India finally managed to get first point with a victory over Pakistan Team at Feroz Shah Kotla stadium in Delhi on Sunday, Jan 6. However, it was not easy for the cricketers to play at a time when the minimum temperature dipped to 1.9 degree Celsius.
ಅಭಿಪ್ರಾಯ ಬರೆಯಿರಿ