Englishहिन्दीമലയാളംதமிழ்తెలుగు

ಇಂಗ್ಲೆಂಡ್ ಸರಣಿಗೆ ತಂಡ ಪ್ರಕಟ, ಸೆಹ್ವಾಗ್ ಔಟ್

Posted by:
Updated: Sunday, January 6, 2013, 21:13 [IST]
 

ನವದೆಹಲಿ, ಜ.6: ಪ್ರವಾಸಿ ಇಂಗ್ಲೆಂಡ್ ವಿರುದ್ಧ 5 ಏಕದಿನ ಪಂದ್ಯ ಸರಣಿಯ ಪೈಕಿ ಮೊದಲ 3 ಪಂದ್ಯಗಳಿಗೆ ಟೀಂ ಇಂಡಿಯಾವನ್ನು ಬಿಸಿಸಿಐ ಆಯ್ಕೆ ಸಮಿತಿ ಭಾನುವಾರ(ಜ.6) ಪ್ರಕಟಿಸಿದೆ.

ಪ್ರವಾಸಿ ಪಾಕಿಸ್ತಾನ ವಿರುದ್ಧ ಮೂರನೇ ಏಕದಿನ ಪಂದ್ಯ ಗೆದ್ದು ಬೀಗುತ್ತಿರುವ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಆರಂಭಿಕ ಆಟಗಾರ ಸೆಹ್ವಾಗ್ ಅವರನ್ನು ಇಂಗ್ಲೆಂಡ್ ಸರಣಿಯಿಂದಲೂ ಕೈ ಬಿಡಲಾಗಿದೆ.

ಇಂಗ್ಲೆಂಡ್ ಸರಣಿಗೆ ತಂಡ ಪ್ರಕಟ, ಸೆಹ್ವಾಗ್ ಔಟ್

ಉಳಿದಂತೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಚೇತೇಶ್ವರ್ ಪೂಜಾರಾ ಅವರನ್ನು ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ.

ಉಳಿದಂತೆ ರೋಹಿತ್ ಶರ್ಮ, ಅಮಿತ್ ಮಿಶ್ರಾ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಪಾಕಿಸ್ತಾನ ವಿರುದ್ಧ ಮೂರನೇ ಏಕದಿನ ಪಂದ್ಯವಾಡಿ ಅದ್ಭುತ ಪ್ರದರ್ಶನ ನೀಡಿದ ವೇಗಿ ಶಮಿ ಅಹ್ಮದ್ ಅವರು ಕೂಡಾ ಇಂಗ್ಲೆಂಡ್ ವಿರುದ್ಧ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.

ತಂಡ ಇಂತಿದೆ: ಎಂಎಸ್ ಧೋನಿ(ನಾಯಕ, ವಿಕೆಟ್ ಕೀಪರ್), ಗೌತಮ್ ಗಂಭೀರ್,ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಯುವರಾಜ್ ಸಿಂಗ್, ಸುರೇಶ್ ರೈನಾ, ಅಶ್ವಿನ್, ರವೀಂದ್ರ ಜಡೇಜ, ಅಮಿತ್ ಮಿಶ್ರಾ, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮ, ಅಶೋಕ್ ದಿಂಡಾ, ಶಮಿ ಅಹಮದ್

ಸೆಹ್ವಾಗ್ ಗೆ ಮಾತ್ರ ಕೊಕ್: ಸುರೇಶ್ ರೈನಾ, ರೋಹಿತ್ ಶರ್ಮ, ಗೌತಮ್ ಗಂಭೀರ್ ಸತತ ವೈಫಲ್ಯದ ನಡುವೆಯೂ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.

ಇತ್ತೀಚೆಗೆ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ಪರ ಆಡಿದ ಚೇತೇಶ್ವರ್ ಪೂಜಾರಾ ಅವರು ಮಧ್ಯಪ್ರದೇಶದ ವಿರುದ್ಧ ದ್ವಿಶತಕ ಸಿಡಿಸಿದ್ದರು.

150 ರನ್ ನಿಂದ 200 ರನ್ ಗಡಿ ದಾಟಲು ಕೇವಲ 17 ಎಸೆತ ಮಾತ್ರ ತೆಗೆದುಕೊಂಡಿದ್ದು ಆಯ್ಕೆದಾರರ ಗಮನ ಸೆಳೆಯಲು ಕಾರಣ ಎನ್ನಬಹುದು. ಆದರೆ, ಮೊಳಕಾಲು ನೋವಿನಿಂದ ಬಳಲುವ ಪೂಜಾರಾ ಏಕದಿನ ಪಂದ್ಯದ ಮಾದರಿಗೆ ಹೊಂದಿಕೊಳ್ಳುವರೇ? ಎಂದು ಕ್ರಿಕೆಟ್ ಪಂಡಿತರು ಪ್ರಶ್ನಿಸಿದ್ದಾರೆ.

ಭಾರತ ವಿರುದ್ಧ ಟೆಸ್ಟ್ ಸರಣಿ ಗೆದ್ದು ಡಿ.22 ರಂದು ಇಂಗ್ಲೆಂಡ್ ತಂಡ ಸ್ವದೇಶಕ್ಕೆ ಮರಳಿತ್ತು. ಮತ್ತೆ ಜನವರಿ 3 ಕ್ಕೆ ಭಾರತಕ್ಕೆ ಆಗಮಿಸಿತು. 5 ಪಂದ್ಯಗಳ ಏಕದಿನ ಸರಣಿ ಜ.11, 2013 ರಿಂದ ರಾಜ್ ಕೋಟ್ ನಲ್ಲಿ ಆರಂಭಗೊಳ್ಳಲಿದೆ. ಎರಡನೇ ಪಂದ್ಯ ಜ.15 ರಂದು ಕೊಚ್ಚಿಯಲ್ಲಿ ನಡೆಯಲಿದೆ.

ಜ.19ರಂದು ರಾಂಚಿಯಲ್ಲಿ, ಜ.23 ರಂದು ಧರ್ಮಶಾಲ, ಜ.27ರಂದು ಮೊಹಾಲಿಯಲ್ಲಿ ಉಳಿದ ಏಕದಿನ ಪಂದ್ಯಗಳು ನಡೆಯಲಿದೆ.

ಆಯ್ಕೆದಾರರ ಕೃಪೆ: ರೋಹಿತ್ ಶರ್ಮ ಅವರು ಕಳೆದ 6 ODI ಇನ್ನಿಂಗ್ಸ್ ನಲ್ಲಿ 5,0,0,4,4 ಹಾಗೂ 4 ರನ್ ಮಾತ್ರ ಗಳಿಸಿದ್ದಾರೆ. ಪಾಕಿಸ್ತಾನ ವಿರುದ್ಧದ 2 ಪಂದ್ಯಗಳಲ್ಲಿ ಸೆಹ್ವಾಗ್ 35 ರನ್ ಮಾತ್ರ ಗಳಿಸಿದ್ದರು.

Story first published:  Sunday, January 6, 2013, 20:52 [IST]
English summary
BCCI selection committee today(Jan.6) announced India squad for first three ODI internationals against touring England. Virender Sehwag has been dropped, Pujara called up, and Rohit retained, Shami inclued
ಅಭಿಪ್ರಾಯ ಬರೆಯಿರಿ