Englishहिन्दीമലയാളംதமிழ்తెలుగు

ಕೋಲ್ಕತಾದಲ್ಲೇ ಏಕದಿನ ಸರಣಿ ಬಾಚಿದ ಪಾಕಿಸ್ತಾನ

Posted by:
Updated: Friday, January 4, 2013, 14:02 [IST]
 

ಕೋಲ್ಕತ್ತಾ, ಜ.3: ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇಪ್ರವಾಸಿ ಪಾಕಿಸ್ತಾನ ತಂಡ  ಸಾಂಪ್ರದಾಯಿಕ ಎದುರಾಳಿ ಅತಿಥೇಯ ಭಾರತದ ವಿರುದ್ಧದ ಏಕದಿನ ಸರಣಿಯನ್ನು ಭರ್ಜರಿಯಾಗಿ 2-0 ಅಂತರದಿಂದ ಬಾಚಿಕೊಂಡಿದೆ. ಕೋಲ್ಕತ್ತಾನಲ್ಲಿ ಗುರುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತವನ್ನು 85 ರನ್ ಗಳಿಂದ ಸೋಲಿಸಿದೆ.

ಸ್ಕೋರ್ ಕಾರ್ಡ್

ಕೋಲ್ಕತ್ತಾದ ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ಭಾರತದ ಸೋಲಿನ ಸರಣಿ ಮುಂದುವರೆದಿದೆ. 1987ರಿಂದ ಸತತವಾಗಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ 4 ಪಂದ್ಯವನ್ನು ಸೋತಿದೆ.

2005ರ ನಂತರ ಪಾಕಿಸ್ತಾನ ಮೊದಲ ಬಾರಿಗೆ ಭಾರತದಲ್ಲಿ ಅತಿಥೇಯರ ವಿರುದ್ಧ ಏಕದಿನ ಸರಣಿ ಗೆಲುವು ಸಾಧಿಸಿದೆ. ಒಟ್ಟಾರೆ ಮೂರು ಏಕದಿನ ಸರಣಿಯನ್ನು ಭಾರತದಲ್ಲಿ ಪಾಕಿಸ್ತಾನ ಸಾಧಿಸಿದೆ.

ಪ್ರಸಕ್ತ ಸರಣಿಯಲ್ಲಿ ಚೆನ್ನೈನಲ್ಲಿ ನಡೆದ ಮೊದಲ ಪಂದ್ಯವನ್ನು ಪಾಕಿಸ್ತಾನ 5 ವಿಕೆಟ್ ಗಳಿಂದ ಗೆದ್ದಿತ್ತು. ಸರಣಿಯ ಕೊನೆಯ ಪಂದ್ಯ ದೆಹಲಿಯಲ್ಲಿ ಜ.6 ಭಾನುವಾರ ನಡೆಯಲಿದೆ.

ಭಾರತದ ಇನ್ನಿಂಗ್ಸ್: ಭಾರತ ಆರಂಭ ಎಂದಿನಂತೆ ಸಪ್ಪೆಯಾಗಿತ್ತು. ಗೌತಮ್ ಗಂಭೀರ್ 11 ರನ್ ಗಳಿಸಿ ಜುನೈದ್ ಗೆ ಬೋಲ್ಡ್ ಆದರೆ, ಸೆಹ್ವಾಗ್ 31 ರನ್ ಗಳಿಸಿ ಗುಲ್ ಗೆ ವಿಕೆಟ್ ಒಪ್ಪಿಸಿದರು.

ಮಧ್ಯಮ ಕ್ರಮಾಂಕ ಸಂಪೂರ್ಣ ವೈಫಲ್ಯ ಕಂಡಿತು. ಕೊಹ್ಲಿ 6, ಯುವರಾಜ್ ಸಿಂಗ್ 9, ಸುರೇಶ್ ರೈನಾ 18 ರನ್ (42 ಎಸೆತ) ಗಳಿಸಿ ಔಟಾದರು.

ಧೋನಿ ಮತ್ತೊಂದು ಬದಿಯಲ್ಲಿ ನಿಂತು ವಿಕೆಟ್ ಉದುರುವುದನ್ನು ನೋಡುತ್ತಾ ನಿಂತು ನಾಟೌಟ್ ಆಗಿ 54 ರನ್(89 ಎಸೆತ, 4 ಬೌಂಡರಿ, 1 ಸಿಕ್ಸರ್) ಗಳಿಸಿದ್ದು ಮಹಾನ್ ಸಾಧನೆ.

ಟೀಂ ಇಂಡಿಯಾ 48 ಓವರ್ ಗಳಲ್ಲಿ 165 ರನ್ ಗಳಿಸಿ ಸೋತು ಶರಣಾಯಿತು. ಪಾಕಿಸ್ತಾನ ತಂಡ 18 ಇತರೆ ರನ್ ಗಳ ಕೊಡುಗೆ ಸಹ ಈ ಮೊತ್ತದಲ್ಲಿ ಸೇರಿದೆ.

ಪಾಕಿಸ್ತಾನ ಇನ್ನಿಂಗ್ಸ್ : ಹಫೀಜ್ 74 ಎಸೆತದಲ್ಲಿ 76 ರನ್ (10 ಬೌಂಡರಿ) ಚೆಚ್ಚಿದರು.. ಜೆಮ್ಶೆಡ್ 124 ಎಸೆತದಲ್ಲಿ 106 ರನ್(12 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾದರು.

ಅಜರ್ ಅಲಿ ಮತ್ತೊಮ್ಮೆ ವಿಫಲರಾಗಿ 2 ರನ್ ಗಳಿಸಿ ರನೌಟ್ ಆದರು. ಯೂನಿಸ್ ಖಾನ್ 10 ರನ್, ಮಿಸ್ಬಾ ಉಲ್ ಹಕ್ 2 ರನ್ ಗಳಿಸಿ ಔಟಾದರು.

ಪಾಕಿಸ್ತಾನ 48.3 ಓವರ್ ಗಳಲ್ಲಿ 250 ರನ್ ಗಳಿಸಿ ಆಲೌಟ್ ಆಯಿತು. ಭಾರತದ ಪರ ಜಡೇಜ, ಇಶಾಂತ್ ತಲಾ 3, ರೈನಾ, ಅಶ್ವಿನ್, ಕುಮಾರ್ ತಲಾ 1 ವಿಕೆಟ್ ಉರುಳಿಸಿದರು.

ಚೆನ್ನೈ ಪಂದ್ಯದಲ್ಲಿ ಗಾಯಗೊಂಡಿದ್ದ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ರವೀಂದ್ರ ಜಡೇಜ ಕೂಡಾ ಆಡುತ್ತಿದ್ದಾರೆ. 1987ರಿಂದ ಇಲ್ಲಿವರೆಗೂ ಈಡನ್ ಗಾರ್ಡನ್ಸ್ ನಲ್ಲಿ ಪಾಕಿಸ್ತಾನ ವಿರುದ್ಧ ಆಡಿರುವ ಮೂರು ಪಂದ್ಯಗಳನ್ನು ಟೀಂ ಇಂಡಿಯಾ ಸೋತಿದೆ.

ಭಾರತ: ಎಂಎಸ್ ಧೋನಿ, ವೀರೆಂದರ್ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮ, ಅಶೋಕ್ ದಿಂಡಾ, ರವೀಂದ್ರ ಜಡೇಜ

ಪಾಕಿಸ್ತಾನ: ಮಿಸ್ಬಾ ಉಲ್ ಹಕ್(ನಾಯಕ), ಮಹಮ್ಮದ್ ಹಫೀಜ್, ನಸೀರ್ ಜಮ್ಶೆಡ್, ಅಜರ್ ಅಲಿ, ಯೂನಿಸ್ ಖಾನ್, ಶೋಯಿಬ್ ಮಲಿಕ್, ಕಮ್ರಾನ್ ಅಕ್ಮಲ್, ಜುನೈದ್ ಖಾನ್, ಉಮರ್ ಗುಲ್, ಸಯೀದ್ ಅಜ್ಮಲ್, ಮಹಮ್ಮದ್ ಇರ್ಫಾನ್,

ಅಂಪೈರ್: ಬಿಲ್ಲಿ ಬೌಡನ್ ಹಾಗೂ ವಿನೀತ್ ಕುಲಕರ್ಣಿ

Story first published:  Thursday, January 3, 2013, 12:41 [IST]
English summary
Pakistan produced yet another superb all-round performance to defeat India by 85 runs and take an unassailable 2-0 lead in the three-match One Day Internationals' series. With this, Pakistan remained unbeaten against India at Eden Gardens, making it four in a row since 1987.
ಅಭಿಪ್ರಾಯ ಬರೆಯಿರಿ