Englishहिन्दीമലയാളംதமிழ்తెలుగు

ರಣಜಿ ಕ್ವಾಟರ್ ಫೈನಲ್ ನಲ್ಲಿ ಆಡಲಿರುವ ಸಚಿನ್

Posted by:
Updated: Thursday, January 3, 2013, 18:01 [IST]
 

ಮುಂಬೈ, ಜ.2: ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ಮೇಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಇದೇ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಬುಧವಾರ (ಜ.2)ಮಾತನಾಡಿದ್ದಾರೆ. ಮುಂಬೈ ಪರ ರಣಜಿಯಲ್ಲಿ ಕ್ವಾಟರ್ ಫೈನಲ್ ಪಂದ್ಯ ಆಡುವುದು ಗ್ಯಾರಂಟಿ ಎಂದು ಸಚಿನ್ ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನ ಹಾಗೂ ಭಾರತ ಏಕದಿನ ಸರಣಿಯನ್ನು ಸ್ವಾಗತಿಸಿದ ಸಚಿನ್, ಭಾರತ ತಂಡ ಸಮತೋಲನದಿಂದ ಕೂಡಿದೆ. ಆದರೆ, ಪಾಕಿಸ್ತಾನದ ವಿರುದ್ಧ ಹೆಚ್ಚಿನ ಸಂಘಟಿತ ಹೋರಾಟ ಅಗತ್ಯ. ನಾನು ತಂಡದಲ್ಲಿಲ್ಲದಿದ್ದರೂ ನನ್ನ ಹೃದಯ ಸದಾ ಟೀಂ ಇಂಡಿಯಾದ ಜೊತೆಗಿರುತ್ತದೆ ಎಂದು ಸಚಿನ್ ಭಾವುಕರಾಗಿ ಹೇಳಿದರು.

ಡಿ.23ರಂದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಗುಡ್ ಬೈ ಹೇಳಿದ ಸಚಿನ್ ಅವರು ತಮ್ಮ ಸಂಸಾರ ಸಮೇತ ಮಸ್ಸೌರಿಗೆ ತೆರಳಿದ್ದರು.

ಜ.6 ರಿಂದ ಆರಂಭವಾಗಲಿರುವ ರಣಜಿ ಉಪಾಂತ್ಯ ಪಂದ್ಯದಲ್ಲಿ ಸಚಿನ್ ಆಟ ನೋಡುವ ಸೌಭಾಗ್ಯ ಮುಂಬೈ ಅಭಿಮಾನಿಗಳಿಗೆ ಲಭಿಸಲಿದೆ. ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಎರಡನೇ ಏಕದಿನ ಪಂದ್ಯ ಕೂಡಾ ಜ.6 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆಯಲಿದೆ. [ಪಾಕಿಸ್ತಾನ ತಂಡದ ಭಾರತ ಪ್ರವಾಸದ ವೇಳಾಪಟ್ಟಿ]

ರಣಜಿ ಪಂದ್ಯಗಳು: ಪಂಜಾಬ್, ಮುಂಬೈ, ಕರ್ನಾಟಕ, ಉತ್ತರಪ್ರದೇಶ, ಬರೋಡಾ, ಸೌರಾಷ್ಟ್ರ, ಸರ್ವೀಸಸ್ ಹಾಗೂ ಜಾರ್ಖಂಡ್ ತಂಡಗಳು ಪ್ರಸಕ್ತ ರಣಜಿ ಋತುವಿನ ನಾಕೌಟ್ ಹಂತ ತಲುಪಿದ ತಂಡಗಳಾಗಿದೆ.

27 ತಂಡಗಳ ಪೈಕಿ ಈಗ 8 ತಂಡಗಳು ಕಣದಲ್ಲಿ ಉಳಿದಿದೆ. ಎ ಗುಂಪಿನಲ್ಲಿ ಉತ್ತರಪ್ರದೇಶ 33 ಅಂಕಗಳೊಂದಿಗೆ ಟಾಪ್ ಸ್ಥಾನ ಪಡೆದಿದ್ದರೆ, ಬಿ ಗುಂಪಿನಲ್ಲಿ ಪಂಜಾಬ್ 32 ಅಂಕಗಳಿಸಿದೆ. ಸಿ ಗುಂಪಿನಲ್ಲಿ ಸರ್ವೀಸಸ್ 26 ಅಂಕ ಪಡೆದಿದೆ.

* ಮುಂಬೈ vs ಬರೋಡಾ
* ಕರ್ನಾಟಕ vs ಸೌರಾಷ್ಟ್ರ
* ಉತ್ತರಪ್ರದೇಶ vs ಸರ್ವೀಸಸ್
* ಪಂಜಾಬ್ vs ಜಾರ್ಖಂಡ್

ಕ್ವಾಟರ್ ಫೈನಲ್ ಪಂದ್ಯಗಳು ಜನವರಿ 6 ರಿಂದ ಆರಂಭಗೊಳ್ಳಲಿದೆ. ಸೆಮಿ ಫೈನಲ್ ಪಂದ್ಯಗಳು ಜ.16 ರಿಂದ ಶುರುವಾಗಲಿದೆ. ಫೈನಲ್ಸ್ ಜ.26ಕ್ಕೆ ಆರಂಭವಾಗಲಿದೆ.

Story first published:  Wednesday, January 2, 2013, 15:20 [IST]
English summary
The Ranji Trophy 2012-13 has entered the quarter-finals' stage. The league phase ended on Tuesday, January 1 and 8 teams from three groups have progressed to the knockout stage. Sachin today(Jan.2) confirmed he is playing for Mumbai in Ranji QF.
ಅಭಿಪ್ರಾಯ ಬರೆಯಿರಿ