Englishहिन्दीമലയാളംதமிழ்తెలుగు

ಕರ್ನಾಟಕಕ್ಕೆ ರೋಚಕ ಜಯ, ಉಪಾಂತ್ಯಕ್ಕೆ ಎಂಟ್ರಿ

Posted by:
Updated: Tuesday, January 1, 2013, 21:25 [IST]
 

ಕರ್ನಾಟಕಕ್ಕೆ ರೋಚಕ ಜಯ, ಉಪಾಂತ್ಯಕ್ಕೆ ಎಂಟ್ರಿ
 

ಪುಣೆ, ಜ.1: ಕರ್ನಾಟಕದ ಸ್ಟುವರ್ಟ್ ಬಿನ್ನಿ ಪಡೆ ಹೊಸ ವರ್ಷದ ದಿನ ಭರ್ಜರಿ ಶುಭಾರಂಭ ಮಾಡಿದ್ದಾರೆ. ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ರೋಚಕ ಜಯ ದಾಖಲಿಸಿ ಮಂಗಳವಾರ (ಜ.1) ಕ್ವಾಟರ್ ಫೈನಲ್ ಹಂತ ತಲುಪಿದ್ದಾರೆ.

13 ಓವರ್ ಗಳಲ್ಲಿ 89 ರನ್ ಟಾರ್ಗೆಟ್ ಪಡೆದ ಕರ್ನಾಟಕ ತಂಡ ಎರಡು ವಿಕೆಟ್ ಕಳೆದುಕೊಂಡು 11.4 ಓವರ್ ಗಳಲ್ಲಿ 92 ರನ್ ಗಳಿಸಿ ಅಮೋಘ ಜಯ ದಾಖಲಿಸಿ ಉಪಾಂತ್ಯಕ್ಕೆ ಅರ್ಹತೆ ಗಳಿಸಿತು.

ಬಿ ಗುಂಪಿನಿಂದ 3ನೇ ತಂಡವಾಗಿ ಕ್ವಾಟರ್ ಫೈನಲ್ ಪ್ರವೇಶಿಸಿದೆ. ಗೆಲ್ಲಲು ಬೇಕಿದ್ದ 89 ರನ್ ಬೆನ್ನಟ್ಟಿದ ಬಿನ್ನಿ ಪಡೆ, ತಂಡದ ಮೊತ್ತ 21 ರನ್ ಆಗಿದ್ದಾಗ ಮೊದಲ ವಿಕೆಟ್ ಕಳೆದುಕೊಂಡಿತು. ಕುನಾಲ್ ಕಪೂರ್ 8 ರನ್ ಗಳಿಸಿ ಔಟಾದರು.

25 ರನ್ ಗಳಿಸಿ ಔಟಾದ ನಾಯಕ ಸ್ಟುವರ್ಟ್ ಬಿನ್ನಿ, ಕೆಎಲ್ ರಾಹುಲ್ ಜೊತೆ ಉತ್ತಮ ಜೊತೆಯಾಟವಾಡಿದರು. ರಾಹುಲ್ 34 ಎಸೆತದಲ್ಲಿ 5 ಬೌಂಡರಿ ಬಾರಿಸಿ 42 ರನ್ ಗಳಿಸಿ ಔಟಾಗದೆ ಉಳಿದು ಜಯ ತಂದರು.

ರಾಹುಲ್ ಗೆ ಮೊದಲ ಇನ್ನಿಂಗ್ಸ್ ಹೀರೋ ಸಿ.ಎಂ ಗೌತಮ್ 16 ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಪ್ರಸಕ್ತ ಋತುವಿನಲ್ಲಿ ಕರ್ನಾಟಕ ತಂಡದ ಆಲ್ ರೌಂಡ್ ಪ್ರದರ್ಶನ ಕಂಡು ಬಂದಿದ್ದು ಈ ಪಂದ್ಯದಲ್ಲೇ ಎನ್ನಬಹುದು.

ಜ.6 ರಿಂದ 10 ರವರೆಗೆ ರಾಜ್ ಕೋಟ್ ನಲ್ಲಿ ನಡೆಯಲಿರುವ ಕ್ವಾಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಸೌರಾಷ್ಟ್ರವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್ :
ಕರ್ನಾಟಕ ಮೊದಲ ಇನ್ನಿಂಗ್ಸ್ : 579/9 (158.5 ಓವರ್ )
* ಸಿ.ಎಂ ಗೌತಮ್ 264 ರನ್ ನಾಟೌಟ್ (464 ಎಸೆತ, 32 ಬೌಂಡರಿ, 1 ಸಿಕ್ಸರ್)
* ಎಸ್.ಟಿ. ಬಿನ್ನಿ 168 ರನ್(272 ಎಸೆತ, 19 ಬೌಂಡರಿ, 2 ಸಿಕ್ಸರ್)
* ಫಲ್ಲಾ 82/2, ಚೌಧುರಿ 102/2

ಮಹಾರಾಷ್ಟ್ರ ಮೊದಲ ಇನ್ನಿಂಗ್ಸ್ : 99/10 (29.1 ಓವರ್ )
* ಖಾದಿವಾಲೆ 38 ರನ್
* ಎ ಮಿಥುನ್ 36ಕ್ಕೆ 6 ವಿಕೆಟ್, ಬಿನ್ನಿ 37ಕ್ಕೆ 4

ಮಹಾರಾಷ್ಟ್ರ ಎರಡನೇ ಇನ್ನಿಂಗ್ಸ್ :
561/10 (149.2 ಓವರ್ )
* ಖಾದಿವಾಲೆ 136 ರನ್ (19 ಬೌಂಡರಿ, 1 ಸಿಕ್ಸರ್)
* ಎ.ಆರ್ ಬಾವ್ನೆ 155 ರನ್ ನಾಟೌಟ್ (24 ಬೌಂಡರಿ, 1 ಸಿಕ್ಸರ್)
* ಶರತ್ ಶಿವಲಿಂಗಯ್ಯ 100ಕ್ಕೆ 4, ಮಿಥುನ್ 122ಕ್ಕೆ3

ಕರ್ನಾಟಕ ಮೊದಲ ಇನ್ನಿಂಗ್ಸ್ : 92/2 (11.4 ಓವರ್)
* ರಾಹುಲ್ 42 ರನ್

Story first published:  Tuesday, January 1, 2013, 18:32 [IST]
English summary
Ranji 2012: Karnataka beat Maharashtra in a thriller and enter Quarter finals as a 3rd team from B group. Karnataka needed 89 runs for victory in 13 Overs. Karnataka achieved the target with losing 2 wickets.
ಅಭಿಪ್ರಾಯ ಬರೆಯಿರಿ