Englishहिन्दीമലയാളംதமிழ்తెలుగు

ಪಾಕ್ ವಿರುದ್ಧದ ಸರಣಿ : ಭಾರತ ತಂಡ ಪ್ರಕಟ

Posted by:
Updated: Sunday, December 23, 2012, 15:44 [IST]
 

ಪಾಕ್ ವಿರುದ್ಧದ ಸರಣಿ : ಭಾರತ ತಂಡ ಪ್ರಕಟ
 

ಮುಂಬೈ, ಡಿ. 23 : ಐದು ವರ್ಷಗಳ ನಂತರ ಭಾರತದಲ್ಲಿ ಕ್ರಿಕೆಟ್ ಸರಣಿ ಆಡುತ್ತಿರುವ ಪಾಕಿಸ್ತಾನದ ವಿರುದ್ಧದ ಕ್ರಿಕೆಟ್ ಸರಣಿಗಾಗಿ ಭಾರತ ತಂಡವನ್ನು ಭಾನುವಾರ ಆಯ್ಕೆ ಮಂಡಳಿ ಘೋಷಿಸಿದ್ದು, ಗಾಯದಿಂದ ಬಳಲುತ್ತಿರುವ ಹಿರಿಯ ಆಟಗಾರ ಜಾಹೀರ್ ಖಾನ್ ಅವರನ್ನು ಕಡೆಗಣಿಸಲಾಗಿದೆ.

ಇದೇ ದಿನ ಸಚಿನ್ ತೆಂಡೂಲ್ಕರ್ ಅವರು ಏಕದಿನ ಪಂದ್ಯಗಳಿಗೆ ತಮ್ಮ ನಿವೃತ್ತಿಯನ್ನು ಘೋಷಿಸಿದ್ದರಿಂದ ಅವರನ್ನು ಪರಿಗಣಿಸಲಾಗಿಲ್ಲ. ಈ ಮೊದಲು ಅವರು ಏಕದಿನ ಪಂದ್ಯಗಳಿಗೆ ಲಭ್ಯವಿರುವುದಾಗಿ ಹೇಳಿದ್ದರು. ಆದರೆ, ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ತಂಡವನ್ನು ಘೋಷಿಸುವ ಮೊದಲೇ ತಮ್ಮ ನಿವೃತ್ತಿಯನ್ನು ಪ್ರಕಟಿಸಿದರು.

ತಂಡಕ್ಕೆ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರು ಮರಳಿದ್ದರೆ, ಭುವನೇಶ್ವರ್ ಕುಮಾರ್ ಮತ್ತು ಶಾಮಿ ಅಹ್ಮದ್ ಹೊಸಮುಖಗಳು. ಜಾಹೀರ್ ಖಾನ್ ಅವರನ್ನು ಏಕದಿನ ಮತ್ತು ಟಿ20 ಪಂದ್ಯಗಳಿಗೂ ನಿರ್ಲಕ್ಷಿಸಲಾಗಿದೆ. ಟಿ20 ತಂಡದಲ್ಲಿ ಮತ್ತೊಂದು ಬದಲಾವಣೆಯಾಗಿದ್ದು, ಕರ್ನಾಟಕದ ಅಭಿಮನ್ಯು ಮಿಥುನ್ ಅವರನ್ನು ಕೈಬಿಡಲಾಗಿದ್ದು, ಇಶಾಂತ್ ಶರ್ಮಾ ಅವರನ್ನು ತೆಗೆದುಕೊಂಡಿದ್ದಾರೆ. ವಿಶ್ವಕಪ್ ಗೆದ್ದ ನಂತರ ಯುವರಾಜ್ ಸಿಂಗ್ ಏಕದಿನ ತಂಡಕ್ಕೆ ಮರಳುತ್ತಿದ್ದಾರೆ.

ಪಾಕಿಸ್ತಾನ ಭಾರತದ ವಿರುದ್ಧ 3 ಏಕದಿನ ಪಂದ್ಯ ಮತ್ತು 2 ಟಿ20 ಪಂದ್ಯಗಳನ್ನು ಆಡಲಿದೆ. ಟಿ20 ಸರಣಿಯ ಮೊದಲ ಪಂದ್ಯ ಡಿ.25ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಶ್ರೀರಾಮ ಸೇನೆಯ ಪ್ರತಿರೋಧದಿಂದಾಗಿ ಈ ಪಂದ್ಯಕ್ಕೆ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಎರಡನೇ ಪಂದ್ಯ ಡಿ.28ರಂದು ಅಹ್ಮದಾಬಾದ್‌ನಲ್ಲಿ ನಡೆಯಲಿದೆ. ಎರಡೂ ಪಂದ್ಯಗಳು ಸಂಜೆ 7 ಗಂಟೆಗೆ ಆರಂಭವಾಗಲಿವೆ.

ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರನ್ನು ಟಿ20 ಪಂದ್ಯಗಳಿಗೆ ಪರಿಗಣಿಸಿಲ್ಲ, ಆದರೆ, ಏಕದಿನ ಪಂದ್ಯಗಳಿಗೆ ಆರಂಭಿಕ ಆಟಗಾರನಾಗಿ ತೆಗೆದುಕೊಳ್ಳಲಾಗಿದೆ. ಏಕದಿನ ಸರಣಿ ಡಿ.30ರಿಂದ ಚೆನ್ನೈನಲ್ಲಿ ಆರಂಭವಾಗಲಿದೆ. ಎರಡನೇ ಪಂದ್ಯ ಜ.3ರಂದು ಕೋಲ್ಕತಾದ ಈಡನ್ ಗಾರ್ಡನ್‌ನಲ್ಲಿ ಮತ್ತು ಮೂರನೇ ಪಂದ್ಯ ಜ.6ರಂದು ದೆಹಲಿಯಲ್ಲಿ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯಲಿದೆ.

ಟಿ20 ತಂಡ : ಎಂಎಸ್ ಧೋನಿ (ನಾಯಕ), ಗೌತಮ್ ಗಂಭೀರ್, ಅಜಿಂಕ್ಯಾ ರಹಾನೆ, ಯುವರಾಜ್ ಸಿಂಗ್, ರೋಹಿತ್ ಶರ್ಮಾ, ಸುರೇಶ್ ರೈನಾ, ವಿರಾಟ್ ಕೋಹ್ಲಿ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಅಶೋಕ್ ದಿಂಡಾ, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್, ಪರವಿಂದರ್ ಅವಾನಾ, ಪಿಯೂಶ್ ಚಾವ್ಲಾ, ಅಂಬಾಟಿ ರಾಯುಡು.

ಏಕದಿನ ತಂಡ : ಎಂಎಸ್ ಧೋನಿ (ನಾಯಕ), ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೋಹ್ಲಿ, ಯುವರಾಜ್ ಸಿಂಗ್, ರೋಹಿತ್ ಶರ್ಮಾ, ಸುರೇಶ್ ರೈನಾ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಇಶಾಂತ್ ಶರ್ಮಾ, ಅಜಿಂಕ್ಯಾ ರಹಾನೆ, ಅಶೋಕ್ ದಿಂಡಾ, ಭುವನೇಶ್ವರ್ ಕುಮಾರ್, ಶಾಮಿ ಅಹ್ಮದ್, ಅಮಿತ್ ಮಿಶ್ರಾ.

Story first published:  Sunday, December 23, 2012, 13:07 [IST]
English summary
Legspinner Amit Mishra has made a comeback to India One Day International team for Pakistan series while Bhunveshwar Kumar and Shami Ahmed are the new faces in the squad announced on Sunday. The selectors have ignored Zaheer Khan for both Twenty20 Internationals and ODIs.
ಅಭಿಪ್ರಾಯ ಬರೆಯಿರಿ