Englishहिन्दीമലയാളംதமிழ்తెలుగు

ಯುವಿ ಭರ್ಜರಿ ಆಟ, ಭಾರತದ ಗೆಲುವಿನ ಓಟ

Posted by:
Updated: Friday, December 21, 2012, 10:17 [IST]
 

ಪುಣೆ, ಡಿ.20: ಆಲ್ ರೌಂಡರ್ ಯುವರಾಜ್ ಸಿಂಗ್(3/19 38 ರನ್(21 ಎಸೆತ, 2 ಬೌಂಡರಿ, 3 ಸಿಕ್ಸರ್) ಭರ್ಜರಿ ಆಟದ ನೆರವಿನಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಸುಲಭವಾಗಿ 5 ವಿಕೆಟ್ ಗಳಿಂದ ಗೆದ್ದಿದೆ.

ಇಲ್ಲಿನ ಸುಬ್ರತೋ ರಾಯ್ ಸ್ಟೇಡಿಯಂ ನಲ್ಲಿ ನಡೆದ ಪ್ರಪ್ರಥಮ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಧೋನಿ ಪಡೆ ಆಂಗ್ಲರ ಪಡೆಯನ್ನು 157/6 ಮೊತ್ತಕ್ಕೆ ಕಟ್ಟಿ ಹಾಕಿತು.

ಸ್ಕೋರ್ ಕಾರ್ಡ್ ನೋಡಿ

ಯುವಿ ಭರ್ಜರಿ ಆಟ, ಭಾರತದ ಗೆಲುವಿನ ಓಟ

ನಂತರ ರನ್ ಚೇಸ್ ನಲ್ಲಿ ಆಗಾಗ ವಿಕೆಟ್ ಉದುರಿಸಿಕೊಂಡರೂ ಅಂತಿಮವಾಗಿ 5 ವಿಕೆಟ್ ಕಳೆದುಕೊಂಡು 17.5 ಓವರ್ ಗಳಲ್ಲಿ ಗೆಲುವಿನ ಗುರಿ ಮುಟ್ಟಿದರು. ಭಾರತದ ಗೆಲುವಿನ ಮೊತ್ತ ಇಂಗ್ಲೆಂಡ್ ತಂಡ 14 ಇತರೆ ರನ್ ಕೊಡುಗೆ ನೀಡಿದ್ದು ಗಮನಾರ್ಹ.

ಯುವರಾಜ್ ಸಿಂಗ್ 5ನೇ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿದರು. ಈ ಮೂಲಕ ಟ್ವೆಂಟಿ20 ಕ್ರಿಕೆಟ್ ಮಾದರಿಯಲ್ಲಿ ಈವರೆಗೂ ಭಾರತದ ಪರ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ ಎನಿಸಿದರು.

ಭಾರತ ಇನ್ನಿಂಗ್ಸ್ : ಗೌತಮ್ ಗಂಭೀರ್ (16), ಅಜಿಂಕ್ಯ ರಹಾನೆ (19) ಮೊದಲ ವಿಕೆಟ್ ಗೆ 4.3 ಓವರ್ ಗಳಲ್ಲಿ 42 ರನ್ ಚೆಚ್ಚಿದರು. ಆದರೆ, 6 ಓವರ್ ಗಳಲ್ಲಿ 52/2 ಸ್ಕೋರ್ ಗಳಿಸಿತು.

17 ಎಸೆತದಲ್ಲಿ 21 ರನ್ ಗಳಿಸಿ ಔಟಾದ ವಿರಾಟ್ ಕೊಹ್ಲಿ ಹಾಗೂ ಸಿಕ್ಸ್ ಮೇಲೆ ಸಿಕ್ಸ್ ಸಿಡಿಸುತ್ತಿದ್ದ ಯುವಿ ತಂಡವನ್ನು ಜಯದ ಹೊಸ್ತಿಲಲ್ಲಿ ನಿಲ್ಲಿಸಿದರು.

ಸುರೇಶ್ ರೈನಾ(26), ಧೋನಿ (24), ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಇಂಗ್ಲೆಂಡ್ ಇನ್ನಿಂಗ್ಸ್: ಯುವರಾಜ್ ಸಿಂಗ್ ಅತ್ಯುತ್ತಮ ಬೌಲಿಂಗ್ ಬಿಟ್ಟರೆ ಉಳಿದ ಬೌಲರ್ ಗಳು ಉತ್ತಮ ಸಾಧನೆ ತೋರಲಿಲ್ಲ. ಜೋಸ್ ಬಟ್ಲರ್ ನಾಟೌಟ್ ಆಗಿ 33 ರನ್ ಗಳಿಸಿ 150 ರನ್ ಗಡಿ ದಾಟಿಸಿದರು.

ಆರಂಭಿಕ ಆಟಗಾರ ಹೇಲ್ 35 ಎಸೆತದಲ್ಲಿ 56 ರನ್(7 ಬೌಂಡರಿ, 2 ಸಿಕ್ಸರ್) ಚೆಚ್ಚಿ ಭಾರತಕ್ಕೆ ಆತಂಕ ಮೂಡಿಸಿದ್ದರು. ಲೂಕ್ ರೈಟ್ ಉತ್ತಮ ಸಾಥ್ ನೀಡಿ 3 ಬೌಂಡರಿ, 1 ಸಿಕ್ಸರ್ ಇದ್ದ 21 ಎಸೆತದಲ್ಲಿ 34 ರನ್ ಹೊಡೆದರು. ನಾಯಕ ಇಯಾನ್ ಮಾರ್ಗನ್ ಕೇವಲ 5 ರನ್ ಗಳಿಸಿ ಯುವರಾಜ್ ಸಿಂಗ್ ಗೆ ಬಲಿಯಾದರು.

Story first published:  Thursday, December 20, 2012, 22:39 [IST]
English summary
Yuvraj Singh's fine all-round performance (3/19 and 21-ball 38, 2x4, 3x6) powered India to a 5-wicket win over England in the first Twenty20 International here on Thursday night.
ಅಭಿಪ್ರಾಯ ಬರೆಯಿರಿ