Englishहिन्दीമലയാളംதமிழ்తెలుగు

ಯುವಿ, ಜಹೀರ್, ಭಜ್ಜಿಗೆ ಕೊಕ್

Written by:
Updated: Thursday, December 13, 2012, 14:09 [IST]
 

ಯುವಿ, ಜಹೀರ್, ಭಜ್ಜಿಗೆ ಕೊಕ್
 

ಕೋಲ್ಕತ್ತಾ, ಡಿ.9: ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಿರುವ ಹಿರಿಯ ಆಟಗಾರರಿಗೆ ಬಿಸಿಸಿಐ ಆಯ್ಕೆ ಸಮಿತಿ ಕೊಕ್ ನೀಡಿದೆ. ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಿರುವ ತಂಡದಿಂದ ಜಹೀರ್ ಖಾನ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಅವರನ್ನು ಕೈಬಿಡಲಾಗಿದೆ.

ಭಾನುವಾರ(ಡಿ.9) ಸಭೆ ಸೇರಿದ ಸಂದೀಪ್ ಪಾಟೀಲ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ. ಡಿ.13ರಿಂದ ನಾಗಪುರದಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯ ಹಾಗೂ ಟಿ20 ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದೆ.

ದೇಶಿ ಕ್ರಿಕೆಟ್ ನಲ್ಲಿ ಉತ್ತಮ ಸಾಧನೆ ತೋರಿರುವ ವೇಗಿ ಪರ್ವೀಂದರ್ ಅವಾನಾ ಸ್ಥಾನ ಪಡೆದಿರುವುದು ನಿರೀಕ್ಷಿತವಾಗಿದೆ.

ಆದರೆ, ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರು ಬಂಪರ್ ಅವಕಾಶ ಪಡೆದಿದ್ದು, ಟೆಸ್ಟ್ ಹಾಗೂ ಟಿ20 ತಂಡಕ್ಕೆ ಆಯ್ಕೆಯಾಗಿದ್ದಾರೆ.

ಉಳಿದಂತೆ ರಹಾನೆ, ಮುರಳಿ ವಿಜಯ್ ಹಾಗೂ ಅಶೋಕ್ ದಿಂಡಾ ಅವರನ್ನು ತಂಡದಲ್ಲಿ ಮುಂದುವರೆಸಲಾಗಿದೆ.

ನಾಗಪುರ ಟೆಸ್ಟ್ ತಂಡ: ಎಂಎಸ್ ಧೋನಿ(ನಾಯಕ) ಗೌತಮ್ ಗಂಭೀರ್, ವೀರೇಂದರ್ ಸೆಹ್ವಾಗ್, ಚೇತೇಶ್ವರ್ ಪೂಜಾರಾ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಇಶಾಂತ್ ಶರ್ಮ, ಆರ್ ಅಶ್ವಿನ್, ಪ್ರಗ್ನಾನ್ ಓಜಾ, ಪಿಯೂಶ್ ಚಾವ್ಲಾ, ಪರ್ವಿಂದರ್ ಅವಾನಾ, ಅಶೋಕ್ ದಿಂಡಾ, ಅಜಿಂಕ್ಯ ರಹಾನೆ, ಮುರಳಿ ವಿಜಯ್

ಟಿ20 ಪಂದ್ಯಕ್ಕೆ ತಂಡ: ಎಂಎಸ್ ಧೋನಿ( ನಾಯಕ, ವಿಕೆಟ್ ಕೀಪರ್) ಗೌತಮ್ ಗಂಭೀರ್, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ಯುವರಾಜ್ ಸಿಂಗ್, ಮನೋಜ್ ತಿವಾರಿ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಪಿಯೂಶ್ ಚಾವ್ಲಾ, ಅಶೋಕ್ ದಿಂಡಾ, ಭುವನೇಶ್ವರ್ ಕುಮಾರ್, ಲಕ್ಷ್ಮಿಪತಿ ಬಾಲಾಜಿ, ಪರ್ವೀಂದರ್ ಅವಾನಾ

Story first published:  Sunday, December 9, 2012, 16:16 [IST]
English summary
Zaheer Khan, Harbhajan Singh and Yuvraj Singh have been dropped from India squad for fourth and final Test against England in Nagpur.
ಅಭಿಪ್ರಾಯ ಬರೆಯಿರಿ