Englishहिन्दीമലയാളംதமிழ்తెలుగు

ಇಂಗ್ಲೆಂಡಿಗೆ ಜಯ; ನಾಯಕತ್ವ ಬಿಡಲಾರೆ ಎಂದ ಧೋನಿ

Posted by:
Published: Sunday, December 9, 2012, 12:34 [IST]
 

ಕೋಲ್ಕತ್ತಾ, ಡಿ.9: ನಾನಂತೂ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಲಾರೆ. ಬ್ಯಾಟ್ಸ್ ಮನ್ ಗಳು ಕೈ ಕೊಟ್ಟಿದ್ದೆ ಸೋಲಿಗೆ ಕಾರಣ, ನಾಯಕತ್ವದ ಬಗ್ಗೆ ಬಿಸಿಸಿಐ ನಿರ್ಧರಿಸಲಿ ಎಂದು ನಾಯಕ ಎಂಎಸ್ ಧೋನಿ ಹೇಳಿದ್ದಾರೆ.

ಪ್ರವಾಸಿ ಇಂಗ್ಲೆಂಡ್ ತಂಡ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದಿದ್ದ ಮೂರನೇ ಟೆಸ್ಟ್ ನಲ್ಲಿ ಭಾರತ ತಂಡವನ್ನು 7 ವಿಕೆಟ್ ಗಳಿಂದ ಸುಲಭವಾಗಿ ಸೋಲಿಸಿ ಸರಣಿಯಲ್ಲಿ 2-1ರ ಮುನ್ನಡೆ ಪಡೆದಿದೆ.

ಇಂಗ್ಲೆಂಡಿಗೆ ಜಯ; ನಾಯಕತ್ವ ಬಿಡಲಾರೆ ಎಂದ ಧೋನಿ

ಗೆಲ್ಲಲು ಬೇಕಿದ್ದ 41 ರನ್ ಗಳನ್ನು ಸ್ವಲ್ಪ ತಿಣುಕಾಡಿದರೂ ಸುಲಭವಾಗಿ ಇಂಗ್ಲೆಂಡ್ ತಂಡ ಗಳಿಸಿದೆ. ನಾಯಕ ಕುಕ್ 1, ಟ್ರಾಟ್ 3, ಕೆವಿನ್ ಪೀಟರ್ಸನ್ 0 ರನ್ ಗಳಿಸಿ ಔಟಾದರೂ ನಿಕ್ ಕಾಂಪ್ಟನ್ 9 ಹಾಗೂ ಇಯಾನ್ ಬೆಲ್ 28 ರನ್ ಗಳಿಸಿ ಔಟಾಗದೆ ಉಳಿದು ಜಯಭೇರಿ ಬಾರಿಸಿದರು. [ಸ್ಕೋರ್ ಕಾರ್ಡ್ ನೋಡಿ]

ಇದಕ್ಕೂ ಮುನ್ನ ಶತಕದ ಹೊಸ್ತಿಲಲ್ಲಿದ್ದ ಆರ್ ಅಶ್ವಿನ್ ಅವರ ಶತಕದ ಅಸೆ ಭಗ್ನಗೊಂಡಿತು. ಆರ್ ಅಶ್ವಿನ್ 91 ರನ್ (157 ಎಸೆತ, 15 ಬೌಂಡರಿ) ಗಳಿಸಿ ಔಟಾಗದೆ ಉಳಿದರು. ಪ್ರಗ್ನಾನ್ ಓಜಾ ಅವರು ವೇಗಿ ಆಂಡರ್ಸನ್ ಗೆ ಔಟಾಗುವ ಮೂಲಕ ಭಾರತ ಇನ್ನಿಂಗ್ಸ್ 247ರನ್ ಗಳಿಗೆ ಅಂತ್ಯ ಕಂಡಿತು.

ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್: 316/10,
ಸಚಿನ್ 76, ಗಂಭೀರ್ 60 ರನ್; ಮಾಂಟಿ 90/4, ಆಂಡರ್ಸನ್ 89/3

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ : 523/10,
ಅಲಿಸ್ಟರ್ ಕುಕ್ 190, ಟ್ರಾಟ್ 87; ಓಜಾ 142/4, ಅಶ್ವಿನ್ 183/3

ಭಾರತ ಎರಡನೇ ಇನ್ನಿಂಗ್ಸ್: 247/10
ಆರ್ ಅಶ್ವಿನ್ 91 ರನ್, ಆಂಡರ್ಸನ್ 38/3, ಫಿನ್ 45/3

ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ : 41/3
ಇಯಾನ್ ಬೆಲ್ 28 ಔಟಾಗದೆ, ಅಶ್ವಿನ್ 31/2

ಈಡೆನ್ ಗಾರ್ಡನ್ ನಲ್ಲಿ 1999ರ ನಂತರ ಮೊದಲ ಬಾರಿಗೆ ಭಾರತ ತಂಡ ಸೋಲು ಕಂಡಿದೆ. 13 ವರ್ಷಗಳ ಹಿಂದೆ ಏಷ್ಯನ್ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಪಾಕಿಸ್ತಾನ ತಂಡ 46 ರನ್ ಗಳಿಂದ ಭಾರತವನ್ನು ಸೋಲಿಸಿತ್ತು. ಕೊನೆ ಟೆಸ್ಟ್ ಪಂದ್ಯ ನಾಗಪುರದಲ್ಲಿ ಡಿ.13, ಗುರುವಾರ ಆರಂಭಗೊಳ್ಳಲಿದೆ.

English summary
England took a 2-1 lead in the four-match series after a seven-wicket victory over India in the third Test here at Eden Gardens on Sunday. Chasing just 41, there were some nervous moments when England lost three wickets for eight but a target as small as this was never enough for India.
ಅಭಿಪ್ರಾಯ ಬರೆಯಿರಿ