Englishहिन्दीമലയാളംதமிழ்తెలుగు

ತೆಂಡೂಲ್ಕರ್ ಶೂ ಲೇಸ್ ಕಟ್ಟಲು ಯಾರಿಗೂ ಯೋಗ್ಯತೆ ಇಲ್ಲ

Posted by:
Updated: Thursday, December 6, 2012, 13:10 [IST]
 

ತೆಂಡೂಲ್ಕರ್ ಶೂ ಲೇಸ್ ಕಟ್ಟಲು ಯಾರಿಗೂ ಯೋಗ್ಯತೆ ಇಲ್ಲ
 

ಮುಂಬೈ, ಡಿ.6: ಮಾಸ್ಟರ್ ಬ್ಲಾಸ್ಟರ್ 'ಸಚಿನ್ ತೆಂಡೂಲ್ಕರ್ ಅವರ ಶೂ ಲೇಸ್ ಕಟ್ಟಲು ಸಹ ಯಾರಿಗೂ ಯೋಗ್ಯತೆ ಇಲ್ಲ'ಎಂದು ಭಾರತದ ಮಾಜಿ ನಾಯಕ ಹಾಲಿ ಕಾಮೆಂಟೆಟರ್ ರವಿ ಶಾಸ್ತ್ರಿ ಅವರು ಹೇಳಿದ್ದಾರೆ.

ಜನ ಹೇಳುವುದನ್ನು ಬಿಟ್ಟಾಗಿ, ಸದ್ಯಕ್ಕೆ ಸಚಿನ್ ತೆಂಡೂಲ್ಕರ್ ಅವರ ಶೂಲೇಸ್ ಕಟ್ಟುವ ಯೋಗ್ಯತೆ ಇಲ್ಲದವರೆಲ್ಲ ಮಾತನಾಡುತ್ತಾರೆ. ಸಚಿನ್ ಅವರಿಗೆ ಸಾಟಿ ಬೇರೆ ಯಾರಿಲ್ಲ ಎಂದು ಟೆಲಿಗ್ರಾಫ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ರವಿಶಾಸ್ತ್ರಿ ಹೇಳಿದ್ದಾರೆ.

ತೆಂಡೂಲ್ಕರ್ ಅವರು ಒತ್ತಡದಲ್ಲಿರುವುದು ನಿಜ. ಟೆಸ್ಟ್ ಕ್ರಿಕೆಟ್ ನಲ್ಲಿ ಲಯ ಕಳೆದುಕೊಂಡಿದ್ದಾರೆ ನಿಜ. ಅದರೆ, ಕೋಲ್ಕತ್ತಾ ಟೆಸ್ಟ್ ನಲ್ಲಿ ಬ್ಯಾಟ್ ಮೂಲಕವೇ ಟೀಕೆಗಳಿಗೆ ಸರಿಯುತ್ತರ ನೀಡಿದ್ದಾರೆ. ಈಡನ್ ಗಾರ್ಡನ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸಚಿನ್ 76 ರನ್ ಗಳಿಸಿದ್ದು ಅವರ ಕಲಾತ್ಮಕ ಆಟಕ್ಕೆ ಸಾಕ್ಷಿ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಸಚಿನ್ ಇಲ್ಲದೆ ಟೀಂ ಇಂಡಿಯಾ ಊಹಿಸಲು ಸಾಧ್ಯವಿಲ್ಲ. ಸಚಿನ್ ಅವರಿಗೆ ಬದಲಿ ಆಟಗಾರ ಯಾರಿಲ್ಲ. ಸಚಿನ್ ಗೆ ಸಚಿನ್ ಅಷ್ಟೇ ಸಾಟಿ. ಅವರ ಸ್ಥಾನವನ್ನು ಮತ್ತೊಬ್ಬರು ತುಂಬಲು ಸಾಧ್ಯವಿಲ್ಲ. ನಿನ್ನೆ(ಬುಧವಾರ) ಪಂದ್ಯದಲ್ಲೇ ಸಚಿನ್ ರನ್ ಗಳನ್ನು ಕಳೆದರೆ ತಂಡದ ಸ್ಥಿತಿ ಏನಾಗುತ್ತಿತ್ತು ಊಹಿಸಿ ನೋಡಿ ಎಂದು ಶಾಸ್ತ್ರಿ ಪ್ರಶ್ನಿಸಿದ್ದಾರೆ.

ಒತ್ತಡಗಳನ್ನು ಸಹಿಸಿಕೂಡಾ ಉತ್ತಮ ಆಟ ಪ್ರದರ್ಶಿಸುವುದು ಸರ್ವಶ್ರೇಷ್ಠ ಆಟಗಾರರಿಗೆ ಮಾತ್ರ ಸಾಧ್ಯ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸಚಿನ್ ಪಾತ್ರ ಮಹತ್ವದ್ದಾಗಿದೆ. ಒತ್ತಡ ಇದ್ದಾಗಲೇ ಸಚಿನ್ ಉತ್ತಮ ಆಟ ಪ್ರದರ್ಶಿಸುತ್ತಾರೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ನಡೆದಿರುವ ಮೂರನೇ ಟೆಸ್ಟ್ ನ ಮೊದಲ ದಿನದ ಅಂತ್ಯಕ್ಕೆ ಸಚಿನ್ ತೆಂಡೂಲ್ಕರ್ ಅವರ 76 ರನ್ ಗಳ ಸಹಾಯದಿಂದ ಭಾರತ ತಂಡ 316 ರನ್ ಗಳಿಸಿ ಅಲೌಟ್ ಆಗಿದೆ. ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 26 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 66 ರನ್ ಗಳಿಸಿ ಆಡುತ್ತಿದೆ. [ಸ್ಕೋರ್ ಕಾರ್ಡ್ ನೋಡಿ]

Story first published:  Thursday, December 6, 2012, 12:50 [IST]
English summary
Former India captain turned commentator Ravi Shastri feels there is no replacement for Sachin Tendulkar at the moment and went on to say "nobody good enough even to tie Sachin Tendulkar's shoelaces".
ಅಭಿಪ್ರಾಯ ಬರೆಯಿರಿ