Englishहिन्दीമലയാളംதமிழ்తెలుగు

'ಪಂಟರ್' ರಿಕಿ ಪಾಂಟಿಂಗ್ ನಿವೃತ್ತಿ

Posted by:
Updated: Thursday, November 29, 2012, 17:23 [IST]
 

ಪರ್ತ್‌, ನ.29: ಆಸ್ಟ್ರೇಲಿಯಾದ ಮಾಜಿ ನಾಯಕ, ಅದ್ಭುತ ಬ್ಯಾಟ್ಸ್ ಮನ್, ಹಲವರ ಪಾಲಿನ ಕಿರಿಕ್ ಪಾರ್ಟಿ, ರಿಕಿ ಪಾಂಟಿಂಗ್ ಗುರುವಾರ (ನ.29) ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಇತ್ತೀಚೆಗೆ ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದ ರಿಕಿ, 'ಆಸ್ಟ್ರೇಲಿಯಾ ತಂಡ ಗುಣಮಟ್ಟಕ್ಕೆ ತಕ್ಕಂತೆ ನಾನು ತಂಡದ ಸದಸ್ಯನಾಗಿ ಏನು ಕೊಡುಗೆ ನೀಡಲಾಗಲಿಲ್ಲ ಎಂಬ ಬೇಸರವಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ವೈಫಲ್ಯ ಕಾಡಿದೆ. ನನ್ನ ನಿವೃತ್ತಿಯ ನಿರ್ಧಾರದ ಹಿಂದೆ ಆಯ್ಕೆಗಾರರ ಒತ್ತಾಯ, ಒತ್ತಡ ಯಾವುದೂ ಇಲ್ಲ ಎಂದು ಹೇಳಿದ್ದಾರೆ.

'ಪಂಟರ್' ರಿಕಿ ಪಾಂಟಿಂಗ್ ನಿವೃತ್ತಿ

ಇನ್ನು ಕೆಲವು ಗಂಟೆಗಳ ಹಿಂದಷ್ಟೇ ನಾನು ನನ್ನ ತಂಡದ ಸಹ ಆಟಗಾರರಿಗೆ ಇದೇ ನನ್ನ ಕೊನೆಯ ಟೆಸ್ಟ್‌ ಪಂದ್ಯ ಎಂದು ಹೇಳಿದ್ದೇನೆ' ಎಂದು ಪಾಂಟಿಂಗ್ ಹೇಳಿದರು.

ಪಾಂಟಿಂಗ್‌ ಈ ತನಕ 13,366 ಟೆಸ್ಟ್‌ ರನ್‌ ಗಳಿಸಿದ್ದಾರೆ. ಅವರ ರನ್‌ ಗಳಿಕೆ ಸರಾಸರಿ 52.21. ಈ ತನಕ ಅವರು 41 ಶತಕಗಳನ್ನು ಬಾರಿಸಿದ್ದಾರೆ. ಪರ್ತ್ನಲ್ಲಿ ನ.30 ರಂದು ಅವರು ಆಡುವುದು ಅವರ ಕ್ರಿಕೆಟ್‌ ಜೀವನದಲ್ಲಿ 168ನೇ ಟೆಸ್ಟ್‌ ಪಂದ್ಯವಾಗಲಿದೆ.

ಮೂರನೇ ಕ್ರಮಾಂಕದ ಆಡಿದ ವಿಶ್ವಶ್ರೇಷ್ಠ ಸಮಕಾಲೀನ ಬ್ಯಾಟ್ಸ್ ಮನ್ ಗಳಾದ ರಾಹುಲ್ ದ್ರಾವಿಡ್, ಜಾಕ್ ಕಾಲಿಸ್ ಜೊತೆ ರಿಕಿ ಪಾಂಟಿಂಗ್ ಕೂಡಾ ವಿಶಿಷ್ಟ ದಾಖಲೆಗಳ ಸರದಾರ.

ಭಾರತೀಯ ಆಟಗಾರರ ಮೇಲೆ ಬೈಗುಳಗಳ ಪ್ರಯೋಗ, ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡರೂ ಫಿನಿಕ್ಸ್ ನಂತೆ ಮತ್ತೆ ತಂಡಕ್ಕೆ ಮರಳಿ ದ್ವಿಶತಕ ಸಿಡಿಸಿದ್ದು ಎಲ್ಲವೂ ರಿಕಿ ಅವರ ರೋಚಕ ಕ್ರಿಕೆಟ್ ಜೀವನದ ಸವಿ ನೆನಪುಗಳಾಗಿ ಉಳಿಯಲಿದೆ.

* 1995ರಲ್ಲಿ ಡಿ.8 ರಂದು ಶ್ರೀಲಂಕಾ ವಿರುದ್ಧ ಪರ್ತ್ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ
* ಏಕದಿನ ಕ್ರಿಕೆಟ್ vs ದಕ್ಷಿಣ ಆಫ್ರಿಕಾಮ್, ವೆಲ್ಲಿಂಗ್ಟನ್, ಫೆ.15, 1995
* T20 vs ನ್ಯೂಜಿಲೆಂಡ್, ಆಕ್ಲೆಂಡ್, ಫೆ.27, 2005

ಟೆಸ್ಟ್: 167 ಪಂದ್ಯ, 13,366 ರನ್, 257 ರನ್ ಅತ್ಯಧಿಕ ಮೊತ್ತ, 52.21 ರನ್ ಸರಾಸರಿ, ಸ್ಟ್ರೈಕ್ ರೇಟ್ 58.74, 41 ಶತಕ
ಏಕದಿನ: 375 ಪಂದ್ಯ 13,704 ರನ್, 164 ರನ್ ಅತ್ಯಧಿಕ ಮೊತ್ತ, 42.03 ರನ್ ಸರಾಸರಿ, ಸ್ಟ್ರೈಕ್ ರೇಟ್ 80.39, 30 ಶತಕ
ಟಿ20: 23 ಪಂದ್ಯ, 477 ರನ್, 98 ನಾಟೌಟ್, 23.85 ರನ್ ಸರಾಸರಿ, ಸ್ಟ್ರೈಕ್ ರೇಟ್ 121.06

ಭಾರತ ವಿರುದ್ಧ 29 ಟೆಸ್ಟ್ ಪಂದ್ಯಗಳಲ್ಲಿ 52.41 ರನ್ ಸರಾಸರಿಯಂತೆ 2,411 ರನ್ ಬಾರಿಸಿದ್ದಾರೆ. ಇದರಲ್ಲಿ 8 ಶತಕ, 11 ಅರ್ಧ ಶತಕ, 34 ಕ್ಯಾಚ್ ಹಾಗೂ 257 ಅತ್ಯಧಿಕ ಮೊತ್ತ ಸೇರಿದೆ.

Story first published:  Thursday, November 29, 2012, 12:07 [IST]
English summary
Former Australia captain Ricky Ponting announced his retirement from Test cricket on Thursday(Nov.29), as he said it was time to call it a day.
ಅಭಿಪ್ರಾಯ ಬರೆಯಿರಿ