Englishहिन्दीമലയാളംதமிழ்తెలుగు

ಸಚಿನ್ ನಿವೃತ್ತಿ ಮುಂದೂಡಿಕೆ ರಹಸ್ಯ ಲೀಕ್

Posted by:
Updated: Wednesday, November 28, 2012, 17:41 [IST]
 

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ 23 ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಸಾಧನೆ ಎಲ್ಲವೂ ಈಗ ಮಂಕಾಗಿ ಕಾಣುತ್ತಿದೆ. ಸಚಿನ್ ನಿವೃತ್ತಿ ಬಗ್ಗೆ ಎಲ್ಲೆಡೆ ಮಾತುಗಳು ಕೇಳಿ ಬರುತ್ತಿದೆ. ಬಿಸಿಸಿಐ ಆಯ್ಕೆ ಸಮಿತಿ ಮೇಲೆ ಸಚಿನ್ ಕೂಡಾ ಭಾರ ಹಾಕಿದ್ದಾರೆ.

ಅದರೆ, ಕ್ಲೀನ್ ಬೋಲ್ಡ್ ಆಗಿ 52 ಬಾರಿ ಬೋಲ್ಡ್ ಆಗಿ ದಾಖಲೆ ನಿರ್ಮಿಸಿರುವ ಸಚಿನ್ ಮೇಲೆ ಒತ್ತಡ ಇರುವುದಂತೂ ನಿಜ. ಇಷ್ಟೆಲ್ಲ ಇದ್ದರೂ ಸಚಿನ್ ನಿವೃತ್ತಿ ದಿನ ಮುಂದೂಡುತ್ತಿರುವುದೇಕೆ? ಇಲ್ಲಿದೆ ಉತ್ತರ.

ಸಚಿನ್ ನಿವೃತ್ತಿ ಮುಂದೂಡಿಕೆ ರಹಸ್ಯ ಲೀಕ್

ಈಗ ಸಚಿನ್ ನಿವೃತ್ತಿ ಹೊಂದಿದರೆ ಭಾರತ ತಂಡದ ಸಮತೋಲನ ಹದಗೆಡವುದರಲ್ಲಿ ಸಂಶಯವಿಲ್ಲ. ಸಚಿನ್ ಗೆ 39 ವರ್ಷ ವಯಸ್ಸಾದರೂ ಆಡುವ ಉತ್ಸಾಹ ಕಮ್ಮಿಯಾಗಿಲ್ಲ.
ಇನ್ನೊಬ್ಬ ಸಚಿನ್ ಹುಡುಕುವುದು ಭಾರತಕ್ಕೆ ಸದ್ಯಕ್ಕೆ ಹೇಗೆ ಸಾಧ್ಯವಿಲ್ಲವೋ ಅದೇ ರೀತಿ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರ ಸ್ಥಾನ ತುಂಬಬಲ್ಲ ಆಟಗಾರರು ಬೇಕಿದ್ದಾರೆ [ಸಚಿನ್ ಈಗ ಗುಡ್ ಬೈ ಹೇಳಬಾರ್ದು ಏಕೆ?]

ಒಟ್ಟಾರೆ ಟೆಸ್ಟ್ ನಲ್ಲಿ 51 ಶತಕಗಳು ಬಂದಿದೆ. ನಿವೃತ್ತಿ ಅಂಚಿನಲ್ಲಿರುವ ಸಚಿನ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ದಿನಗಟ್ಟಲೆ ಕ್ರೀಸ್ ನಲ್ಲಿ ನಿಂತು 300 ರನ್ ಗಳಿಸಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆಯಾಗಿದೆ.

* ತ್ರಿಶತಕ ಸಾಧಕರ ಸಂಪೂರ್ಣ ಪಟ್ಟಿ ನೋಡಿ
* ಸಚಿನ್ ತೆಂಡೂಲ್ಕರ್ 100 ಶತಕಗಳ ಪಟ್ಟಿ

ಆದರೆ, ಇದಕ್ಕಿಂತ ಮುಖ್ಯವಾಗಿ ಸಚಿನ್ ತೆಂಡೂಲ್ಕರ್ ಅವರು ತಮ್ಮ 200ನೇ ಟೆಸ್ಟ್ ಪಂದ್ಯ ಆಡಲು ತುಂಬಾ ಉತ್ಸುಕರಾಗಿದ್ದಾರೆ ಎಂಬುದು ತಿಳಿದು ಬಂದಿದೆ.

192 ಟೆಸ್ಟ್ ಪಂದ್ಯವಾಡಿರುವ ಸಚಿನ್ ತೆಂಡೂಲ್ಕರ್ ಅವರು ರನ್ ಗಳಿಸಿ ಬಿಡಲಿ 200 ಟೆಸ್ಟ್ ತನಕ ಸಹಿಸಿಕೊಳ್ಳಿ ಎಂದು ಬಿಸಿಸಿಐ ಹಿರಿಯ ತಲೆಗಳು ಆಯ್ಕೆದಾರರಿಗೆ ತಾಕೀತು ಮಾಡಿದೆಯಂತೆ.

ಸದ್ಯಕ್ಕೆ ಅತ್ಯಧಿಕ ಟೆಸ್ಟ್ ಪಂದ್ಯ ಆಡಿದವರ ರೇಸ್ ನಲ್ಲಿ ಸಚಿನ್ ಬಿಟ್ಟರೆ ಯಾರು ಹತ್ತಿರದಲ್ಲಿಲ್ಲ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ 168 ಆಡಿದ್ದಾರೆ. 167 ಟೆಸ್ಟ್ ಆಡಿರುವ ರಿಕಿ ಪಾಂಟಿಂಗ್ ಕೂಡಾ ನಿವೃತ್ತಿ ಹೊಸ್ತಿಲಲ್ಲಿದ್ದಾರೆ.

ಆದರೆ, ಪ್ರಸ್ತುತ ಇಂಗ್ಲೆಂಡ್ ಸರಣಿ ಹಾಗೂ ಮುಂಬರುವ ಆಸ್ಟ್ರೇಲಿಯಾ ಸರಣಿ ಸೇರಿಸಿದರೂ 198 ಟೆಸ್ಟ್ ಪಂದ್ಯವಾಗುತ್ತದೆ. ಇನ್ನು ಸಚಿನ್ 200 ಟೆಸ್ಟ್ ಮ್ಯಾಜಿಕ್ ನಂಬರ್ ದಾಟಬೇಕಾದರೆ ಡಿಸೆಂಬರ್ 2013ರ ತನಕ ಕಾಯಬೇಕು. ಅದು ಸಾಧ್ಯವೇ? ಕಾದು ನೋಡಬೇಕಿದೆ.

ಮುಂದಿನ ವರ್ಷಾಂತ್ಯಕ್ಕೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತೆರಳಲಿದ್ದು, ಸಚಿನ್ ಅವರು ಆಡಿದರೆ, ದಕ್ಷಿಣ ಆಫ್ರಿಕಾದಲ್ಲಿ 200ನೇ ಟೆಸ್ಟ್ ಪೂರೈಸಬಹುದು.

2011ರ ಜನವರಿ ನಂತರ ಶತಕ ಗಳಿಸಿಲ್ಲ. 300 ರನ್ ಗಡಿ ಹಾಗೂ 200 ಟೆಸ್ಟ್ ಪಂದ್ಯ ಎರಡು ಸದ್ಯಕ್ಕೆ ಸಚಿನ್ ಅವರ ಮುಂದಿರುವ ಗುರಿ. ಅದಕ್ಕಿಂತ ಮುಖ್ಯವಾಗಿ ಮತ್ತೆ ಲಯಕ್ಕೆ ಮರಳುವುದು ಹೇಗೆ ಎಂಬುದರ ಬಗ್ಗೆ ಸಚಿನ್ ಚಿಂತಿಸುತ್ತಿದ್ದಾರೆ. ಡಿ.5 ರ ಕೋಲ್ಕತ್ತಾ ಟೆಸ್ಟ್ ನಲ್ಲಿ ಸಚಿನ್ ಮತ್ತೆ ಚೆಂಡುಗಳನ್ನು ಚಿಂದಿ ಮಾಡಿ ರನ್ ಹೊಳೆ ಹರಿಸಲಿ ಎಂದು ದಟ್ಸ್ ಕ್ರಿಕೆಟ್ ಹಾರೈಸುತ್ತದೆ.

Story first published:  Wednesday, November 28, 2012, 17:40 [IST]
English summary
India's cricket crazy fans and former players are divided over the current raging debate whether iconic batsman Sachin Tendulkar should stop playing the game or not.
ಅಭಿಪ್ರಾಯ ಬರೆಯಿರಿ