Englishहिन्दीമലയാളംதமிழ்తెలుగు

ಮೂರನೇ ಟೆಸ್ಟಿಗೆ ತಂಡ ಪ್ರಕಟ, ದಿಂಡಾ ಇನ್

Posted by:
Updated: Tuesday, November 27, 2012, 13:08 [IST]
 

ಮೂರನೇ ಟೆಸ್ಟಿಗೆ ತಂಡ ಪ್ರಕಟ, ದಿಂಡಾ ಇನ್
 

ಮುಂಬೈ, ನ.27: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟಿಗೆ ಟೀಂ ಇಂಡಿಯಾವನ್ನು ಬಿಸಿಸಿಐ ಆಯ್ಕೆ ಸಮಿತಿ ಮಂಗಳವಾರ (ನ.27) ಮಧ್ಯಾಹ್ನ ಪ್ರಕಟಿಸಿದೆ. ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಸಂದೀಪ್ ಪಾಟೀಲ್ ನೇತೃತ್ವದ ಹೊಸ ಆಯ್ಕೆದಾರರ ಸಮಿತಿ ನಡೆಸಿದ ಸಭೆಯಲ್ಲಿ ನಾಯಕ ಎಂಎಸ್ ಧೋನಿ, ತರಬೇತುದಾರ ಫ್ಲೆಚರ್ ಕೂಡಾ ಪಾಲ್ಗೊಂಡಿದ್ದರು.

ಪ್ರವಾಸಿ ಇಂಗ್ಲೆಂಡ್ ತಂಡ ಭಾರತದಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡುತ್ತಿದೆ. ಅಹಮದಾಬಾದ್ (ನ.15-19) ಟೆಸ್ಟ್ ಭಾರತ ಪಾಲಾದರೆ, ಮುಂಬೈ(ನ. 23-27) ಟೆಸ್ಟ್ ಇಂಗ್ಲೆಂಡ್ ಪಾಲಾಯಿತು. ಈಗ ಕೋಲ್ಕತಾ(ಡಿ.5-9) ಹಾಗೂ ನಾಗಪುರ (ಡಿ 13-17) ಟೆಸ್ಟ್ ಪಂದ್ಯ ನಿಗದಿಯಾಗಿದೆ.

ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ಡಿ.20 ಹಾಗೂ ಡಿ.22 ರಂದು ನಡೆಯಲಿದೆ. ಮೂರನೇ ಟೆಸ್ಟ್ ನಂತರ ನಾಲ್ಕನೇ ಟೆಸ್ಟ್ ಹಾಗೂ ಟಿ20 ಪಂದ್ಯಗಳಿಗೆ ತಂಡ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಪ್ರಕಟಿಸಿದೆ.

5 ಪಂದ್ಯಗಳ ಏಕದಿನ ಸರಣಿ ಜ.11, 2013 ರಿಂದ ಆರಂಭಗೊಳ್ಳಲಿದೆ. ಡಿ.22 ರಂದು ಇಂಗ್ಲೆಂಡ್ ತಂಡ ಸ್ವದೇಶಕ್ಕೆ ಮರಳಿದೆ. ಮತ್ತೆ ಜನವರಿ 3 ಕ್ಕೆ ಭಾರತಕ್ಕೆ ಆಗಮಿಸಿ ಸರಣಿ ಮುಂದುವರೆಸಲಿದೆ.

ಬೆನ್ನುಹುರಿ ಗಾಯದಿಂದ ಬಳಲುತ್ತಿರುವ ವೇಗಿ ಉಮೇಶ್ ಯಾದವ್ ಬದಲಿಗೆ ತಂಡ ಸೇರಿದ್ದ ಅಶೋಕ್ ದಿಂಡಾ ಈಗ ಸರಣಿಯಲ್ಲಿ ಮೊದಲ ಪಂದ್ಯ ಆಡಲು ಉತ್ಸುಕರಾಗಿದ್ದಾರೆ.

ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್ ಅಲ್ಲದೆ ನಾಯಕ ಎಂಎಸ್ ಧೋನಿಗೂ ಇದು ಕಟ್ಟಕಡೆಯ ಅವಕಾಶ ನೀಡಲಾಗಿದೆ. ಹೀಗಾಗಿ ಕೇವಲ ಒಂದು ಟೆಸ್ಟ್ ಪಂದ್ಯಕ್ಕೆ ಮಾತ್ರ ತಂಡ ಆಯ್ಕೆ ಮಾಡಲಾಗಿದ್ದು, ಆಟಗಾರರ ಪ್ರದರ್ಶನ ನೋಡಿಕೊಂಡು ಕೊನೆ ಟೆಸ್ಟ್ ಹಾಗೂ ಟಿ20 ತಂಡವನ್ನು ನಂತರ ಪ್ರಕಟಿಸುವ ದಿಟ್ಟ ನಿರ್ಧಾರವನ್ನು ಬಿಸಿಸಿಐ ಕೈಗೊಂಡಿದೆ.

ಎಂಎಸ್ ಧೋನಿ(ನಾಯಕ), ವೀರೆಂದರ್ ಸೆಹ್ವಾಗ್, ಗೌತಮ್ ಗಂಭೀರ್, ಚೇತೇಶ್ವರ್ ಪೂಜಾರಾ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಜಹೀರ್ ಖಾನ್, ಪ್ರಜ್ಞಾನ್ ಓಜಾ, ಆರ್ ಅಶ್ವಿನ್, ಅಶೋಕ್ ದಿಂಡಾ, ಹರ್ಭಜನ್ ಸಿಂಗ್, ಅಜಿಂಕ್ಯ ರಹಾನೆ, ಮುರಳಿ ವಿಜಯ್ ಹಾಗೂ ಇಶಾಂತ್ ಶರ್ಮ

Story first published:  Tuesday, November 27, 2012, 12:56 [IST]
English summary
India have retained Harbhajan Singh for the third Test against England while Umesh Yadav has been ruled out. There no other changes made by the selectors on Tuesday(Nov.27).
ಅಭಿಪ್ರಾಯ ಬರೆಯಿರಿ