Englishहिन्दीമലയാളംதமிழ்తెలుగు

ಇಂಡಿಯಾ ತಂತ್ರಕ್ಕೆ ಇಂಗ್ಲೆಂಡ್ ತಿರುಮಂತ್ರ

Posted by:
Updated: Saturday, November 24, 2012, 16:52 [IST]
 

ಮುಂಬೈ, ನ.24: ಟೀಂ ಇಂಡಿಯಾವನ್ನು 327 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದ ಆಂಗ್ಲರು ಎರಡನೇ ಟೆಸ್ಟ್ ನ ಎರಡನೇ ದಿನ ದಿಟ್ಟ ಉತ್ತರ ನೀಡಿದ್ದಾರೆ.

ನಾಯಕ ಕುಕ್ ಹಾಗೂ ಕೆವಿನ್ ಪೀಟರ್ಸನ್ ವಿಕೆಟ್ ಕೀಳಲಾಗದೆ ಟೀಂ ಇಂಡಿಯಾ ಒದ್ದಾಡಿತು. ಓಜಾ ಎರಡು ವಿಕೆಟ್ ಕಿತ್ತಿದ್ದು ಬಿಟ್ಟರೆ, ದಿನದ ಗೌರವ ಸಂಪೂರ್ಣವಾಗಿ ಇಂಗ್ಲೆಂಡಿನ ಬ್ಯಾಟ್ಸ್ ಮನ್ ಗಳಿಗೆ ಸಲ್ಲುತ್ತದೆ. ಸ್ಕೋರ್ ಕಾರ್ಡ್ ನೋಡಿ

ಇಂಡಿಯಾ ತಂತ್ರಕ್ಕೆ  ಇಂಗ್ಲೆಂಡ್ ತಿರುಮಂತ್ರ

ಎರಡನೇ ದಿನದ ಅಂತ್ಯಕ್ಕೆ ಇಂಗ್ಲೆಂಡ್ 65 ಓವರ್ ಗಳಲ್ಲಿ 178/2 ಸ್ಕೋರ್ ಮಾಡಿದೆ. ಕುಕ್ 87 (207 ಎಸೆತ, 10 ಬೌಂಡರಿ, 1 ಸಿಕ್ಸರ್) ಹಾಗೂ ಕೆವಿನ್ ಪೀಟರ್ಸನ್ 62 ರನ್ (85 ಎಸೆತ, 9 ಬೌಂಡರಿ) ಗಳಿಸಿ ಔಟಾಗದೆ ಉಳಿದಿದ್ದಾರೆ.

ಕುಕ್ ಮತ್ತೊಮ್ಮೆ ನಾಯಕನ ಆಟ ಪ್ರದರ್ಶಿಸಿ ತಂಡದ ಇನ್ನಿಂಗ್ಸ್ ಕಟ್ಟಿದರು. ನಿಕ್ ಕಾಂಪ್ಟನ್ ಮತ್ತೊಮ್ಮೆ ಸ್ಪಿನ್ ಬಲೆಗೆ ಬಿದ್ದು ವಿಕೆಟ್ ಒಪ್ಪಿಸಿದರು.

ಕಾಂಪ್ಟನ್ 29 ರನ್(90 ಎಸೆತ, 4 ಬೌಂಡರಿ) ಹಾಗೂ ಟ್ರಾಟ್ ಕೇವಲ 6 ಎಸೆತ ಎದುರಿಸಿ ಶೂನ್ಯ ಸುತ್ತಿ ಪೆವಿಲಿಯನ್ ಗೆ ಹೋಗಿದ್ದಾರೆ. ಎರಡು ವಿಕೆಟ್ ಓಜಾ ಪಾಲಾಗಿದೆ.

ಇದಕ್ಕೂ ಮುನ್ನ ಎರಡನೇ ದಿನ ಬ್ಯಾಟಿಂಗ್ ಆರಂಭಿಸಿದ ಚೇತೇಶ್ವರ್ ಪೂಜಾರಾ 114 ರನ್, ಆರ್ ಅಶ್ವಿನ್ 60 ರನ್ ಪೈಕಿ ಅಶ್ವಿನ್ ಕೇವಲ 8 ರನ್ ಸೇರಿಸಿ ಔಟಾದರು. ಪೂಜಾರಾಗೆ ಹರ್ಭಜನ್ ಸಿಂಗ್ ಉತ್ತಮ ಸಾಥ್ ನೀಡಿ 21 ರನ್ ಗಳಿಸಿದರು.

ಕೊನೆಗೆ ಪೂಜರಾ ಈ ಸರಣಿಯಲ್ಲಿ ಮೊದಲ ಬಾರಿಗೆ ಔಟಾದರು. ಪೂಜಾರಾ 135 ರನ್ (350 ಎಸೆತ, 12 ಬೌಂಡರಿ) ಗಳಿಸಿ, ಸ್ವ್ಯಾನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.

ಭಾರತ ತನ್ನ ಮೊದಲ ಇನ್ನಿಂಗ್ಸ್ 115.1 ಓವರ್ ಗಳಲ್ಲಿ 371 ರನ್ ಗಳಿಸಿತು. ಇಂಗ್ಲೆಂಡ್ ಪರ ಮಾಂಟೆ ಪನೇಸರ್ 129 ರನ್ ನೀಡಿ 5 ವಿಕೆಟ್ ಹಾಗೂ ಗ್ರಹಾಂ ಸ್ವ್ಯಾನ್ 70 ರನ್ ನೀಡಿ 4 ವಿಕೆಟ್ ಕಿತ್ತರು.

Story first published:  Saturday, November 24, 2012, 12:41 [IST]
English summary
Alastair Cook and Kevin Pietersen led England's strong reply to India's 327 at the Wankhede Stadium here in the second Test on Saturday(Nov.24).
ಅಭಿಪ್ರಾಯ ಬರೆಯಿರಿ