Englishहिन्दीമലയാളംதமிழ்తెలుగు

ಚಿತ್ರದಲ್ಲಿ: ಪೂಜಾರಾ ಸೆಂಚುರಿ, ಪನೇಸರ್ ಸ್ಪಿನ್ ಉರಿ

Posted by:
Updated: Friday, November 23, 2012, 17:07 [IST]
 

ಇಂಗ್ಲೆಂಡ್ ತಂಡದ ಎಡಗೈ ಸ್ಪಿನ್ನರ್ ಮಾಂಟಿ ಪನೇಸರ್ ಸ್ಪಿನ್ ಮೋಡಿಗೆ ಸಿಲುಕಿದ ಭಾರತ ಎರಡನೇ ಟೆಸ್ಟ್ ನ ಮೊದಲ ದಿನ ತತ್ತರಿಸಿದೆ. ಚೇತೇಶ್ವರ ಪೂಜಾರಾ ಅವರ ಸೆಂಚುರಿ ಇಲ್ಲದಿದ್ದರೆ ಸ್ಕೋರ್ ಕಾರ್ಡ್ ನೋಡೋಕೆ ಆಗುತ್ತಿರಲಿಲ್ಲ.

ವೀರೆಂದರ್ ಸೆಹ್ವಾಗ್ ಅವರ 100ನೇ ಟೆಸ್ಟ್ ಪಂದ್ಯ, ಸಚಿನ್ ತೆಂಡೂಲ್ಕರ್ ಅವರ ಮುಂಬೈನಲ್ಲಿ ಕೊನೆ ಪಂದ್ಯ(ಬಹುಶಃ)ದಲ್ಲಿ ಕಳಪೆ ಪ್ರದರ್ಶನ ಎಲ್ಲವೂ ದಿನದ ವಿಶೇಷವಾಗಿತ್ತು. ಅಂದ ಹಾಗೆ ಸ್ಪಿನ್ನರ್ ಆರ್ ಅಶ್ವಿನ್ ಬ್ಯಾಟಿಂಗ್ ಬಗ್ಗೆ ಕೆಮ್ಮಂಗಿಲ್ಲ. ಅರ್ಧಶತಕ ಬಾರಿಸಿ ಎಲ್ಲರ ಗಮನ ಸೆಳೆದರು. ಸ್ಕೋರ್ ಕಾರ್ಡ್ ನೋಡಿ

7ನೇ ಟೆಸ್ಟ್ ನಲ್ಲಿ 3ನೇ ಶತಕ ಸಿಡಿಸಿದ ವೀರ

ಭಾರತದ ಪಾಲಿಗೆ ದಿನದ ಗೌರವ ಉಳಿಸಿದ ಮಧ್ಯಮ ಕ್ರಮಾಂಕದ ಹೊಸ ಗೋಡೆ

ಮಾಸ್ಟರ್ ಬ್ಲಾಸ್ಟರ್ ಕ್ಲೀನ್ ಬೋಲ್ಡ್

ಪನೇಸರ್ ಸ್ಪಿನ್ ಜಾದೂಗೆ ಬಲಿಯಾದ ತ್ರಿವಿಕ್ರಮ ಸಚಿನ್ ತೆಂಡೂಲ್ಕರ್

ಮಾಂಟಿ ಏನ್ ಜಿಗಿತೀಯಪ್ಪ

ಸಚಿನ್ ತೆಂಡೂಲ್ಕರ್ ವಿಕೆಟ್ ಕಿತ್ತ ಮೇಲೆ ಕುಣಿದೇ ಇರೋಕೆ ಸಾಧ್ಯನಾ

ಪಿಚ್ ಲಾಭ ಪಡೆದ ಮಾಂಟಿ

ಮುಂಬೈನ ವಾಂಖೆಡೆಯ ತಿರುಗುವ ಪಿಚ್ ನ ಸಂಪೂರ್ಣ ಲಾಭ ಪಡೆದ ಪನೇಸರ್, ಭಾರತದ ರನ್ ಗಳಿಕೆ ವೇಗ ನಿಯಂತ್ರಿಸಿ, ವಿಕೆಟ್ ಕಬಳಿಸಿದರು.

100ನೇ ಟೆಸ್ಟ್ ನಲ್ಲಿ ಛಾಪು ಮೂಡಿಸದ ಸೆಹ್ವಾಗ್

ಗಂಭೀರ್ ಔಟಾದ ಮೇಲೆ ಉತ್ತಮ ಆರಂಭಿಸಲು ವಿಫಲರಾದ ಸೆಹ್ವಾಗ್ ಕೇವಲ 30 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದಿದ್ದು ಹೀಗೆ

ಇಂಗ್ಲೆಂಡ್ ಫೀಲ್ಡರ್ ಗಳು ಹಾರಿದ್ದು ಹೀಗೆ

ಆಂಗ್ಲ ಪಡೆಯ ಫೀಲ್ಡರ್ ಗಳು ಸ್ಪಿನ್ ಬೌಲರ್ ಗಳ ಕೈಚಳಕಕ್ಕೆ ತಕ್ಕಂತೆ ಕ್ಷೇತ್ರ ರಕ್ಷಣೆ ಮಾಡಿದರು. ಹೀಗಾಗಿ ಭಾರತದ ರನ್ ಗತಿ ಇನ್ನೂ ಕುಂಠಿತವಾಯಿತು.

Story first published:  Friday, November 23, 2012, 16:42 [IST]
English summary
England left-arm spinner Monty Panesar put India in trouble in the second Test but Cheteshwar Pujara fought hard to stand tall at one end during the opening day at Wankhede Stadium on Friday.
ಅಭಿಪ್ರಾಯ ಬರೆಯಿರಿ