Englishहिन्दीമലയാളംதமிழ்తెలుగు

ಆಪದ್ಭಾಂಧವ ಪೂಜಾರಾ ಸಮಯೋಚಿತ ಶತಕ

Posted by:
Updated: Friday, November 23, 2012, 17:21 [IST]
 

ಮುಂಬೈ, ನ.23: ಆರಂಭಿಕ ಆಘಾತದ ಚೇತೇಶ್ವರ್ ಪೂಜಾರಾ ಅವರ ಅದ್ಭುತ ಆಟದ ನೆರವಿನಿಂದ ಟೀಂ ಇಂಡಿಯಾ ಚೇತರಿಸಿಕೊಂಡಿದೆ. ಪೂಜಾರಾ 104 ರನ್ (250 ಎಸೆತ, 9 ಬೌಂಡರಿ) ಗಳಿಸಿ ಭಾರತ ಮಾನ ಕಾಪಾಡಿದರು.

ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಸಂಪೂರ್ಣ ಕುಸಿಯಿತು. ಪನೇಸರ್, ಸ್ವ್ಯಾನ್ ಸ್ಪಿನ್ ದಾಳಿಗೆ ತತ್ತರಿಸಿಬಿಟ್ಟಿತು. ಸಚಿನ್ 8, ಕೊಹ್ಲಿ 19, ಯುವರಾಜ್ 0, ಧೋನಿ 29 ರನ್ ಗಳಿಸಿ ಔಟಾದರು.

ಇನ್ನೊಂದೆಡೆ ನೆಲಕಚ್ಚಿ ನಿಂತಿದ್ದ ಪೂಜಾರಾಗೆ ಆರ್ ಅಶ್ವಿನ್ ಅವರು ಉತ್ತಮ ಸಾಥ್ ನೀಡಿದರು.

ದಿನದ ಅಂತ್ಯಕ್ಕೆ ಚೇತೇಶ್ವರ್ ಪೂಜಾರಾ 114 ರನ್ (279 ಎಸೆತ, 10 ಬೌಂಡರಿ), ಆರ್ ಅಶ್ವಿನ್ 60 ರನ್ (84 ಎಸೆತ, 9 ಬೌಂಡರಿ) ಗಳಿಸಿ ಔಟಾಗದೆ ಉಳಿದಿದ್ದಾರೆ. ಇಂಗ್ಲೆಂಡ್ ಪರ ಎಡಗೈ ಸ್ಪಿನ್ನರ್ ಮಾಂಟಿ ಪನೇಸರ್ 91 ರನ್ನಿತ್ತು 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಉಳಿದಂತೆ ಜೇಮ್ಸ್ ಅಂಡರ್ಸನ್, ಗ್ರಹಾಂ ಸ್ವ್ಯಾನ್ 1 ವಿಕೆಟ್ ಗಳಿಸಿದರು.

ಪ್ರಸಕ್ತ ಸರಣಿಯಲ್ಲಿ ಪೂಜಾರಾ 361 ರನ್ ಮಾಡಿದ್ದು, 719 ಎಸೆತ, 39 ಬೌಂಡರಿ 15ಕ್ಕಿಂತ ಹೆಚ್ಚು ಗಂಟೆಗಳ ಕಾಲ ಬ್ಯಾಟ್ ಮಾಡಿದ್ದು ಇನ್ನೂ ಔಟಾಗಿಲ್ಲ.

ಸ್ಕೋರ್ ಕಾರ್ಡ್ ನೋಡಿ

ಆಪದ್ಭಾಂಧವ ಪೂಜಾರಾ ಸಮಯೋಚಿತ ಶತಕ

ತವರು ನೆಲದಲ್ಲೇ ಸಚಿನ್ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ. ಮಾಂಟೆ ಪನೇಸರ್ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆಗಿ ಪೆವಿಲಿಯನ್ ಗೆ ಹೋದ ಸಚಿನ್ ಗಳಿಸಿದ್ದು 8 ರನ್ ಮಾತ್ರ.

ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಗಾಯಾಳು ವೇಗಿ ಉಮೇಶ್ ಯಾದವ್ ಬದಲಿಗೆ ಸ್ಪಿನ್ನರ್ ಹರ್ಭಜನ್ ಸಿಂಗ್ ಗೆ ಜಾಗ ನೀಡಲಾಗಿದೆ. ಇದು ಹರ್ಭಜನ್ ಅವರ ವೃತ್ತಿ ಜೀವನದ 99ನೇ ಟೆಸ್ಟ್ ಆಗಿದೆ.

ಇಂಗ್ಲೆಂಡ್ ತಂಡದಲ್ಲಿ ಬೆಲ್ ಬದಲಿಗೆ ಜಾನಿ ಬೈರ್ ಸ್ಟೋ ಹಾಗೂ ಸ್ಪಿನ್ನರ್ ಮಾಂಟೆ ಪನೇಸರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಭಾರತ: ಮಹೇಂದ್ರ ಸಿಂಗ್ ಧೋನಿ(ನಾಯಕ), ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಚೇತೇಶ್ವರ ಪೂಜಾರ, ಆರ್ ಅಶ್ವಿನ್, ಹರ್ಭಜನ್ ಸಿಂಗ್, ಪ್ರಗ್ಯಾನ್ ಓಜಾ, ಜಹೀರ್ ಖಾನ್.

ಇಂಗ್ಲೆಂಡ್: ಅಲೆಸ್ಟೈರ್ ಕುಕ್ (ನಾಯಕ), ನಿಕ್ ಕಾಂಪ್ಟನ್, ಜೋನಾಥನ್ ಟ್ರಾಟ್, ಕೆವಿನ್ ಪೀಟರ್ಸನ್, ಜಾನಿ ಬೈರ್ ಸ್ಟೋ, ಮ್ಯಾಟ್ ಪ್ರಿಯರ್, ಸಮಿತ್ ಪಟೇಲ್, ಸ್ಟುವರ್ಟ್ ಬ್ರಾಡ್, ಗ್ರೇಮ್ ಸ್ವಾನ್, ಜೇಮ್ಸ್ ಆಂಡರ್ಸನ್, ಮಾಂಟೆ ಪನೇಸರ್

Story first published:  Friday, November 23, 2012, 9:58 [IST]
English summary
Cheteshwar Pujara struck his third Test century on the opening day of the India-England second Test here on Friday.
ಅಭಿಪ್ರಾಯ ಬರೆಯಿರಿ