Englishहिन्दीമലയാളംதமிழ்తెలుగు

ಮುಂಬೈ ಟೆಸ್ಟ್ ನಲ್ಲೂ ಸ್ಪಿನ್ ನದ್ದೇ ಕಾರುಬಾರು

Posted by:
Updated: Friday, November 23, 2012, 9:54 [IST]
 

ಮುಂಬೈ, ನ.22: ಅಹಮದಾಬಾದಿನಂತೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲೂ ಸ್ಪಿನ್ ನದ್ದೇ ಕಾರುಬಾರು ಮುಂದುವರೆಯಲಿದೆ. ಸ್ಪಿನ್ ಪಿಚ್ ನೀಡಿ ಎಂದು ಧೋನಿ ಬಿಸಿಸಿಐಗೆ ಕೇಳಿದ್ದು, ಅದರಂತೆ ಪಿಚ್ ಸ್ಪಿನ್ ಗೆ ಸಹಕರಿಸಲಿದೆ ಎನ್ನಲಾಗಿದೆ.

ಮರಾಠಾ ನಾಯಕ ಬಾಳಾ ಠಾಕ್ರೆ ನಿಧನ, ಕಸಬ್ ನೇಣು ಘಟನೆಗಳ ನಡುವೆ ಕ್ರಿಕೆಟ್ ಪಂದ್ಯದ ಸುರಕ್ಷತೆ ಬಗ್ಗೆ ಗೊಂದಲಗಳು ಎದ್ದಿತ್ತು. ಆದರೆ, ಮುಂಬೈ ಪೊಲೀಸರು ಹಾಗೂ ಬಿಸಿಸಿಐ ಅಧಿಕಾರಿಗಳು ಪಂದ್ಯದ ಸುರಕ್ಷತೆ ಬಗ್ಗೆ ನಿಗಾ ವಹಿಸಲಾಗಿದೆ ಎಂದು ಹೇಳಿದ್ದಾರೆ.

ಮುಂಬೈ ಟೆಸ್ಟ್ ನಲ್ಲೂ ಸ್ಪಿನ್ ನದ್ದೇ ಕಾರುಬಾರು

* ಫೆ.23, 2012 ಆರಂಭಿಕ ಆಟಗಾರ ಸೆಹ್ವಾಗ್ ಅವರ ಪಾಲಿಗೆ ಸುದಿನ. ಭಾರತದ ಪರ 100ನೇ ಟೆಸ್ಟ್ ಪಂದ್ಯ ಆಡಲಿದ್ದಾರೆ.

* ವೇಗಿ ಉಮೇಶ್ ಯಾದವ್ ಅವರು ಬೆನ್ನುಹುರಿ ತೊಂದರೆ ಅನುಭವಿಸುತ್ತಿದ್ದು, ಪಂದ್ಯದಿಂದ ಹೊರಗುಳಿದಿದ್ದಾರೆ.
* ಉಮೇಶ್ ಯಾದವ್ ಬದಲಿಗೆ ಅಶೋಕ್ ದಿಂಡಾ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
* ಆದರೆ, ದಿಂಡಾ ಬದಲು ಇಶಾಂತ್ ಶರ್ಮ ಆಡುವ ಸಾಧ್ಯತೆ ಹೆಚ್ಚಿದೆ.
* ಹರ್ಭಜನ್ ಸಿಂಗ್ ಸಿಂಗ್ 99ನೇ ಟೆಸ್ಟ್ ಆಡುವುದು ಅನುಮಾನ. 3 ಸ್ಪಿನ್ನರ್ ಆಡಿಸಲು ಸಾಧ್ಯವಿಲ್ಲ ಎಂದು ಧೋನಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
* ಆರ್ ಅಶ್ವಿನ್ ಹಾಗೂ ಪ್ರಗ್ಯಾನ್ ಓಜಾ ಮತ್ತೆ ಬೌಲಿಂಗ್ ನೇತೃತ್ವ ವಹಿಸಲಿದ್ದಾರೆ.
* 191 ಟೆಸ್ಟ್ ಆಡಿರುವ ಸಚಿನ್ ತೆಂಡೂಲ್ಕರ್ ಅವರು ಮುಂಬೈನ ವಾಂಖೆಡೆಯಲ್ಲಿ ಕೊನೆಯ ಟೆಸ್ಟ್ ಆಡಲಿದ್ದಾರೆ. ಮುಂದೆ ಆಸೀಸ್ ಸರಣಿ ಇದ್ದರೂ ವಾಂಖೆಡೆಯಲ್ಲಿ ಪಂದ್ಯ ನಡೆಯುತ್ತಿಲ್ಲ.
* ಇಂಗ್ಲೆಂಡ್ ತಂಡದಲ್ಲಿ ಸ್ಪಿನ್ನರ್ ಮಾಂಟೆ ಪಾನೆಸರ್ ಆಡುವ ಸಾಧ್ಯತೆ ಹೆಚ್ಚಿದೆ.
* ವಿವಾದಕ್ಕೆ ಕಾರಣವಾಗಿದ್ದ ಇಯಾನ್ ಬೆಲ್ ಅವರು ಮುಂಬೈ ಟೆಸ್ಟ್ ಆಡುವುದು ಅನುಮಾನ. ಬೆಲ್ ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಲ್ ಇಂಗ್ಲೆಂಡಿಗೆ ಹೋಗಿದ್ದಾರೆ.
* ಬೆಲ್ ಸ್ಥಾನದಲ್ಲಿ ಇಯಾನ್ ಮಾರ್ಗನ್ ಅಥವಾ ಜಾನಿ ಬೈರ್ ಸ್ಟೋ ಆಡುವ ಸಾಧ್ಯತೆಯಿದೆ.
* ಇಂಗ್ಲೆಂಡ್ ತಂಡಕ್ಕೆ ಈಗ ಸೆಹ್ವಾಗ್, ಸಚಿನ್ ಗಿಂತ ಪೂಜಾರಾರದ್ದೇ ಚಿಂತೆಯಾಗಿದೆ.

ಸಂಭಾವ್ಯ ತಂಡ:
ಭಾರತ: ಮಹೇಂದ್ರ ಸಿಂಗ್ ಧೋನಿ(ನಾಯಕ), ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಚೇತೇಶ್ವರ ಪೂಜಾರ, ಆರ್ ಅಶ್ವಿನ್, ಇಶಾಂತ್ ಶರ್ಮ, ಪ್ರಗ್ಯಾನ್ ಓಜಾ, ಜಹೀರ್ ಖಾನ್.

ಇಂಗ್ಲೆಂಡ್: ಅಲೆಸ್ಟೈರ್ ಕುಕ್ (ನಾಯಕ), ನಿಕ್ ಕಾಂಪ್ಟನ್, ಜೋನಾಥನ್ ಟ್ರಾಟ್, ಕೆವಿನ್ ಪೀಟರ್ಸನ್, ಇಯಾನ್ ಮಾರ್ಗನ್, ಮ್ಯಾಟ್ ಪ್ರಿಯರ್, ಸಮಿತ್ ಪಟೇಲ್, ಸ್ಟುವರ್ಟ್ ಬ್ರಾಡ್, ಗ್ರೇಮ್ ಸ್ವಾನ್, ಜೇಮ್ಸ್ ಆಂಡರ್ಸನ್, ಮಾಂಟೆ ಪನೇಸರ್

ಪಂದ್ಯ ಗುರುವಾರ(ನ.22) ಬೆಳಗ್ಗೆ 9.30ಕ್ಕೆ ಆರಂಭವಾಗಲಿದ್ದು, ದಟ್ಸ್ ಕ್ರಿಕೆಟ್ ನಲ್ಲಿ ನೇರ ಸ್ಕೋರ್ ಕಾರ್ಡ್ ನೋಡಿ

Story first published:  Thursday, November 22, 2012, 17:13 [IST]
English summary
From Ahmedabad, Test match action shifts to Mumbai but little could change for England. India will yet again subject the visiting batsmen to spin trial. Pragyan Ojha took nine wickets in the first Test at Sardar Patel Stadium as India outplayed England to go 1-0 up by a nine-wicket margin.
ಅಭಿಪ್ರಾಯ ಬರೆಯಿರಿ