Englishहिन्दीമലയാളംதமிழ்తెలుగు

ಡಾನ್ ಬ್ರಾಡ್ಮನ್ ದಾಖಲೆ ಮುರಿದ ಮೈಕಲ್ ಕ್ಲಾರ್ಕ್

Posted by:
Updated: Thursday, November 22, 2012, 13:30 [IST]
 

ಅಡಿಲೇಡ್, ನ.22: ಸರ್ ಡಾನ್ ಬ್ರಾಡ್ಮನ್ ಹಾಗೂ ರಿಕಿ ಪಾಂಟಿಂಗ್ ದಾಖಲೆಯನ್ನು ಗುರುವಾರ(ನ.22) ಆಸ್ಟ್ರೇಲಿಯಾ ನಾಯಕ ಮೈಕಲ್ ಕ್ಲಾರ್ಕ್ ನುಚ್ಚು ನೂರು ಮಾಡಿದ್ದಾರೆ.

ಒಂದು ವರ್ಷದಲ್ಲೇ ನಾಲ್ಕು ಬಾರಿ 200 ರನ್ ಗಡಿ ದಾಟಿದ ಸಾಧನೆ ಬರೆದ ಕ್ಲಾರ್ಕ್ ಭರ್ಜರಿ ಬ್ಯಾಟಿಂಗ್ ಗೆ ದಕ್ಷಿಣ ಆಫ್ರಿಕಾ ಬೆದರಿದೆ.

ಡಾನ್ ಬ್ರಾಡ್ಮನ್ ದಾಖಲೆ ಮುರಿದ ಮೈಕಲ್ ಕ್ಲಾರ್ಕ್

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದೆ.

ಮೊದಲ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ಸ್ಕೋರ್ 482 / 5 (86.5 ಓವರ್ ಗಳಲ್ಲಿ, 5.55 ರನ್ ಸರಾಸರಿ)
* ಕ್ಲಾರ್ಕ್ 224 ರನ್ ಔಟಾಗದೆ (243 ಎಸೆತ, 39 ಬೌಂಡರಿ, 1 ಸಿಕ್ಸರ್),
* ಮೈಕಲ್ ಹಸ್ಸಿ 103 ರನ್ ಔಟಾಗದೆ (137 ಎಸೆತ, 9 ಬೌಂಡರಿ, 4 ಸಿಕ್ಸರ್)
* ಡೇವಿಡ್ ವಾರ್ನರ್ 119 ರನ್ (112 ಎಸೆತ, 16 ಬೌಂಡರಿ, 4 ಸಿಕ್ಸರ್), [ಪೂರ್ಣ ಸ್ಕೋರ್ ಕಾರ್ಡ್ ನೋಡಿ]

2012 ರಲ್ಲಿ ಕ್ಲಾರ್ಕ್ ಅಮೋಘ ಪ್ರದರ್ಶನ ನೀಡಿದ್ದಾರೆ. ಬ್ರಿಸ್ಬೇನ್ ನ ಮೊದಲ ಟೆಸ್ಟ್ ನಲ್ಲೂ ದ್ವಿಶತಕ ಬಾರಿಸಿದ್ದ ಕ್ಲಾರ್ಕ್ ಈಗ ಇವತ್ತು ಅಡಿಲೇಡ್ ನಲ್ಲೂ ದ್ವಿಶತಕ ಸಿಡಿಸಿದ್ದಾರೆ.

ಒಂದು ವರ್ಷದಲ್ಲಿ ನಾಲ್ಕು ಬಾರಿ ದ್ವಿಶತಕ ಗಡಿ ದಾಟಿದ ಮೊದಲ ಕ್ರಿಕೆಟರ್ ಎಂಬ ಕೀರ್ತಿಗೆ ಕ್ಲಾರ್ಕ್ ಪಾತ್ರರಾಗಿದ್ದಾರೆ. ಬ್ರಾಡ್ಮನ್ ಹಾಗೂ ಪಾಂಟಿಂಗ್ ಇಬ್ಬರು ಮೂವರು ದ್ವಿಶತಕ ಬಾರಿಸಿದ ಸಾಧನೆ ಮೆರೆದಿದ್ದರು.

2012 ರ ಋತು ಆರಂಭದಲ್ಲಿ ಭಾರತದ ವಿರುದ್ಧ ಭರ್ಜರಿ ತ್ರಿಶತಕದ ಮೂಲಕ ಕ್ಲಾರ್ಕ್ ಶುಭಾರಂಭ ಮಾಡಿದರು.

ಸಿಡ್ನಿಯಲ್ಲಿ ಜನವರಿಯಲ್ಲಿ 329 ನಾಟೌಟ್ ಆಗಿ ಉಳಿದ ಕ್ಲಾರ್ಕ್ ಮತ್ತೊಮ್ಮೆ ನಾಟೌಟ್ ಆಟವನ್ನು ಮುಂದುವರೆಸಿದ್ದಾರೆ. ಅಡಿಲೇಡ್ ನಲ್ಲಿ ಮತ್ತೆ ಭಾರತದ ವಿರುದ್ಧ 210 ರನ್ ಚೆಚ್ಚಿದ್ದರು.

ಈಗ ದಕ್ಷಿಣ ಆಫ್ರಿಕಾ ವಿರುದ್ಧ ಬ್ರಿಸ್ಬೇನ್ ನಲ್ಲಿ 259 ರನ್ ಹೊಡೆದು ಅಜೇಯರಾಗಿ ಉಳಿದಿದ್ದ ಕ್ಲಾರ್ಕ್, ಸಿಡ್ನಿಯಲ್ಲಿ 204 ರನ್ ಗಳಿಸಿದ್ದಾರೆ.

2012 ರಲ್ಲಿ ಮೈಕಲ್ ಕ್ಲಾರ್ಕ್ ದ್ವಿಶತಕ +
* 329 ನಾಟೌಟ್ vs ಭಾರತ, ಜನವರಿ 2012
* 210 vs ಭಾರತ, ಜನವರಿ 2012
* 259 ನಾಟೌಟ್ vs ದಕ್ಷಿಣ ಆಫ್ರಿಕಾ, ನವೆಂಬರ್ 2012
* 204(ಬ್ಯಾಟಿಂಗ್) vs ದಕ್ಷಿಣ ಆಫ್ರಿಕಾ, ನವೆಂಬರ್ 2012

ದಟ್ಸ್ ಕ್ರಿಕೆಟ್

Story first published:  Thursday, November 22, 2012, 13:09 [IST]
English summary
Australia captain Michael Clarke broke Sir Don Bradman and Ricky Ponting's records as he registered his fourth 200 plus scores in a calendar year here on Thursday against South Africa at the Adelaide Oval in the second Test.
ಅಭಿಪ್ರಾಯ ಬರೆಯಿರಿ