Englishहिन्दीമലയാളംதமிழ்తెలుగు

110 ವರ್ಷ ಹಳೆ ದಾಖಲೆ ಮುರಿದ ಬಾಲಂಗೋಚಿ

Posted by:
Updated: Thursday, November 22, 2012, 17:26 [IST]
 

ಢಾಕಾ, ನ.21: ಸುಮಾರು 110 ವರ್ಷಗಳ ನಂತರ ಕ್ರಿಕೆಟ್ ಜಗತ್ತು ಮತ್ತೊಂದು ಅದ್ಭುತ ದಾಖಲೆ ಕಂಡಿದೆ. 10ನೇ ಕ್ರಮಾಂಕದಲ್ಲಿ ಬಂದ ಬಾಂಗ್ಲಾದೇಶದ ಬಾಲಂಗೋಚಿ ಬ್ಯಾಟ್ಸ್ ಮನ್ ಅಮೋಘ ಶತಕ ಸಿಡಿಸಿದ್ದಾರೆ.

ಟೆಸ್ಟ್ ಇತಿಹಾಸದಲ್ಲಿ ಇಂಥದೊಂದು ಸಾಧನೆ ಕಂಡು ಬಂಡಿದ್ದು 110 ವರ್ಷಗಳ ಹಿಂದೆ ಮಾತ್ರ. ಮೊದಲ ಪಂದ್ಯವಾಡುತ್ತಿರುವ ಹಸನ್ ಚೊಚ್ಚಲ ಶತಕದ ಮೂಲಕ ಇಡೀ ಕ್ರಿಕೆಟ್ ಜಗತ್ತು ತನ್ನತ್ತ ನೋಡುವಂತೆ ಮಾಡಿದ್ದಾನೆ.

110 ವರ್ಷ ಹಳೆ ದಾಖಲೆ ಮುರಿದ ಬಾಲಂಗೋಚಿ

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 10ನೇ ಕ್ರಮಾಂಕದಲ್ಲಿ ಬಂದ 20 ವರ್ಷದ ಹಸನ್ ಭರ್ಜರಿ ಶತಕ ದಾಖಲಿಸಿದ್ದು ದಿನದ ಕೊನೆ ಓವರಿನಲ್ಲಿ ಎಂಬುದು ಮತ್ತೊಂದು ವಿಶೇಷ. ಸ್ಕೋರ್ ಕಾರ್ಡ್ ನೋಡಿ

ಶೇಖ್ ಅಬು ನಸೀರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಡಗೈ ಬ್ಯಾಟ್ಸ್ ಮನ್ ಹಸನ್ ಔಟಾಗದೆ 100 ರನ್ (108 ಎಸೆತ, 13 ಬೌಂಡರಿ, 3 ಸಿಕ್ಸರ್ ) ಚೆಚ್ಚಿದ್ದಾರೆ.

ಎಡಗೈ ಬ್ಯಾಟ್ಸ್ ಮನ್ ಅಲ್ಲದೆ ಬಲಗೈ ಮಧ್ಯಮ ವೇಗಿಯಾಗಿರುವ ಹಸನ್ ಇದುವರೆವಿಗೂ ಆಡಿರುವುದು ಕೇವಲ 6 ಪ್ರಥಮ ದರ್ಜೆ ಪಂದ್ಯಗಳನ್ನು ಮಾತ್ರ. ಅದರಲ್ಲಿ 61 ರನ್ ಅವರ ಗರಿಷ್ಠ ಮೊತ್ತವಾಗಿತ್ತು.

10ನೇ ಕ್ರಮಾಂಕದಲ್ಲಿ ಆಡಿ ಶತಕ ಗಳಿಸಿದ ಆಟಗಾರರು ಹಾಗೂ ಸ್ಕೋರ್ ಕಾರ್ಡ್

* ವಾಲ್ಟರ್ ರೀಡ್(ಇಂಗ್ಲೆಂಡ್) 117 vs ಆಸ್ಟ್ರೇಲಿಯಾ, 1884 [ಸ್ಕೋರ್ ಕಾರ್ಡ್ ನೋಡಿ]
* ಪ್ಯಾಟ್ ಸಿಮ್ಕಾಕ್ಸ್(ದಕ್ಷಿಣ ಆಫ್ರಿಕಾ) 108 vs ಪಾಕಿಸ್ತಾನ, 1998 [ಸ್ಕೋರ್ ಕಾರ್ಡ್ ನೋಡಿ]
* ರಿಗ್ಗಿ ಡಫ್ (ಇಂಗ್ಲೆಂಡ್) 104 vs ಆಸ್ಟ್ರೇಲಿಯಾ, 1902 [ಸ್ಕೋರ್ ಕಾರ್ಡ್ ನೋಡಿ]
* ಅಬ್ದುಲ್ ಹಸನ್(ಬಾಂಗ್ಲಾದೇಶ) 100 ನಾಟೌಟ್ vs ವೆಸ್ಟ್ ಇಂಡೀಸ್, 2012 [ಸ್ಕೋರ್ ಕಾರ್ಡ್ ನೋಡಿ]

ಟೆಸ್ಟ್ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲೇ ಶತಕ ಗಳಿಸಿದ್ದು ಹಸನ್ ಮಾತ್ರ. 1884 ರಲ್ಲಿ ವಾಲ್ಟರ್ ರೀಡ್ ಮೊದಲ ಪಂದ್ಯದಲ್ಲೇ ಶತಕ ಗಳಿಸಿದ್ದರೂ ಎರಡನೇ ಇನ್ನಿಂಗ್ಸ್ ನಲ್ಲಿ ಎಂಬುದು ಗಮನಾರ್ಹ.

ಪ್ಯಾಟ್ ಸಿಮ್ ಕಾಕ್ಸ್ 1998 ರಲ್ಲಿ ಶತಕ ಗಳಿಸಿದರೂ ಅದು ಅವರ ಮೊದಲ ಪಂದ್ಯವಾಗಿರಲಿಲ್ಲ. ಹಸನ್ ಶತಕ ದಾಖಲೆ ಆಗಿದ್ದು ಈ ಕಾರಣಕ್ಕೆ ಎಂಬುದನ್ನು ಓದುಗರು ಗಮನಿಸತಕ್ಕದ್ದು. ಹೆಚ್ಚಿನ ಮಾಹಿತಿಗೆ ಸ್ಕೋರ್ ಕಾರ್ಡ್ ಗಳನ್ನು ತಪ್ಪದೇ ನೋಡಿ

ದಟ್ಸ್ ಕ್ರಿಕೆಟ್

Story first published:  Wednesday, November 21, 2012, 17:54 [IST]
English summary
Bangladesh's Abul Hasan became only the second debutant batsman in Test history to score a century batting at number 10. He achieved the feat against West Indies on the first day of the second Test here on Tuesday.Hasan is only the second batsman to hit century on debut at No. 10. That too after 110 years!
ಅಭಿಪ್ರಾಯ ಬರೆಯಿರಿ