Englishहिन्दीമലയാളംதமிழ்తెలుగు

ಪೂಜಾರಾ ಏಕದಿನ ಕ್ರಿಕೆಟ್ ಆಡಲು ಇದು ಸಕಾಲ

Posted by:
Published: Tuesday, November 20, 2012, 14:48 [IST]
 

ಬೆಂಗಳೂರು, ನ.20: ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಪೂಜಾರಾ ಸದ್ಯದ ಹಾಟ್ ಸ್ಟಾರ್ ಆಗಿದ್ದಾರೆ.

ಪೂಜಾರಾರನ್ನು ದ್ರಾವಿಡ್ ಗೆ ಹೋಲಿಸಲು ಇದು ಸಕಾಲವಲ್ಲ ಎಂದು ಮಾಜಿ ನಾಯಕ ಕಪಿಲ್ ದೇವ್ ಹೇಳಿಕೆ ನೀಡಿದ ಮೇಲೆ ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಅವರು ಪೂಜಾರಾ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.

ಪೂಜಾರಾ ಏಕದಿನ ಕ್ರಿಕೆಟ್ ಆಡಲು ಇದು ಸಕಾಲ

ಚೇತೇಶ್ವರ್ ಪೂಜಾರಾ ಅವರನ್ನು ಆದಷ್ಟು ಬೇಗ ಏಕದಿನ ಕ್ರಿಕೆಟ್ ತಂಡದಲ್ಲಿ ನೋಡಲು ಬಯಸುತ್ತೇನೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಆತ ನೀಡಿದ ಪ್ರದರ್ಶನ ಮಾತ್ರವಲ್ಲ.

ರಣಜಿ ಹಾಗೂ ಬುಚ್ಚಿಬಾಬು ಟೂರ್ನಿಯಲ್ಲೂ ಆತನ ಆಟವನ್ನು ನೋಡಿದ್ದೇನೆ. ಟೀಂ ಇಂಡಿಯಾದ ಏಕದಿನ ಕ್ರಿಕೆಟ್ ತಂಡ ಸೇರಲು ಪೂಜಾರಾ ಸಂಪೂರ್ಣವಾಗಿ ಅರ್ಹತೆ ಹೊಂದಿದ್ದಾರೆ ಎಂದು ಮಾಜಿ ನಾಯಕ ಸುನಿಲ್ ಗವಾಸ್ಕರ್ ಪ್ರಮಾಣ ಪತ್ರ ನೀಡಿದ್ದಾರೆ.

ಅಹಮದಾಬಾದಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪೂಜಾರಾ ಅವರು ಮೊದಲ ಇನ್ನಿಂಗ್ಸ್ ನಲ್ಲಿ 206 ರನ್ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 41 ರನ್ ಗಳಿಸಿ ಔಟಾಗದೆ ಉಳಿದಿದ್ದರು. ಸೆಹ್ವಾಗ್ ಗೆ ಸರಿ ಸಮಾನವನ್ನು ಸ್ಟ್ರೋಕ್ ಗಳನ್ನು ಬಾರಿಸಿದ ಪೂಜಾರಾ ಆಟವನ್ನು ಎಲ್ಲರೂ ಹೊಗಳಿದ್ದರು.

ಪೂಜಾರಾ ಅವರ ಆಟದ ಗತಿ ಸುಧಾರಿಸಿದೆ ಸದ್ಯ ಅವರು ಉತ್ತಮ ಲಯದಲ್ಲಿರುವುದರಿಂದ ಏಕದಿನ ಪಂದ್ಯಗಳಲ್ಲಿ ಆಡಿಸುವುದರೆ ಭಾರತಕ್ಕೆ ಲಾಭ ಎಂದು ಗವಾಸ್ಕರ್ ಹೇಳಿದ್ದಾರೆ.

ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆತ ಕೆಳ ಕ್ರಮಾಂಕದಲ್ಲಿ ಆಡಿದ್ದರಿಂದ ಕಡಿಮೆ ಓವರ್ ಗಳ ಮಾದರಿಯಲ್ಲಿ ಹೆಚ್ಚಿನ ಒತ್ತಡ ಸಹಿಸುವುದನ್ನು ಕಲಿತಿರುತ್ತಾನೆ. ಆತನಲ್ಲಿ ಆತ್ಮವಿಶ್ವಾಸ, ದೃಢತೆ ಎದ್ದು ಕಾಣುತ್ತಿದೆ. ಎಲ್ಲಾ ಬಗೆಯ ಹೊಡೆತಗಳನ್ನು ಹೊಡೆಯಬಲ್ಲೆ ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿದ್ದಾನೆ ಎಂದು ಗವಾಸ್ಕರ್ ಅವರು ಪೂಜಾರಾರನ್ನು ಹೊಗಳಿದ್ದಾರೆ.

ಈ ನಡುವೆ ದಯವಿಟ್ಟು ನನ್ನನ್ನು ರಾಹುಲ್ ದ್ರಾವಿಡ್ ಅವರಿಗೆ ಹೋಲಿಸಬೇಡಿ. ನಾನಿನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಕಲಿಯುವುದು ಸಾಕಷ್ಟಿದೆ. ದ್ರಾವಿಡ್ ಆಟ ನೋಡಿ ಸ್ಪೂರ್ತಿ ಪಡೆದಿರುವುದು ನಿಜ. ನಾನಿನ್ನು ಅವರ ಎತ್ತರಕ್ಕೆ ಬೆಳೆದಿಲ್ಲ ಎಂದು ಸೌರಾಷ್ಟ್ರದ ಬಲಗೈ ಬ್ಯಾಟ್ಸ್ ಮನ್ ಚೇತೇಶ್ವರ್ ಪೂಜಾರಾ ನಮ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಗವಾಸ್ಕರ್ ಸರ್ಟಿಫಿಕೇಟ್ ಮೇಲೆ ಬಿಸಿಸಿಐ ಆಯ್ಕೆದಾರರ ಮಂಡಳಿ ಕೂಡಾ ಕಣ್ಣಿಟ್ಟಿದ್ದು, ಫಾರ್ಮ್ ಕಳೆದುಕೊಂಡಿರುವ ರೋಹಿತ್ ಶರ್ಮ ಹಾಗೂ ಸುರೇಶ್ ರೈನಾ ಸ್ಥಾನ ಅಲ್ಲಾಡುತ್ತಿರುವುದಂತೂ ಸತ್ಯ.

English summary
Former India skipper Sunil Gavaskar, on Monday said that young Cheteshwar Pujara can be considered for the shorter format as well after a good stint in the longer version of the game.
ಅಭಿಪ್ರಾಯ ಬರೆಯಿರಿ