Englishहिन्दीമലയാളംதமிழ்తెలుగు

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Posted by:
Updated: Monday, November 26, 2012, 18:15 [IST]
 

ಅಹಮದಾಬಾದ್, ನ.19: ಪ್ರವಾಸಿ ಇಂಗ್ಲೆಂಡ್ ತಂಡ ಒಡ್ಡಿದ್ದ 77 ರ ನ ಗಳ ಗುರಿಯನ್ನು ಸುಲಭವಾಗಿ ಬೆನ್ನು ಹತ್ತಿದ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿದೆ. ಭಾರತದ ಆರಂಭಿಕ ಜೋಡಿ ಸೆಹ್ವಾಗ್ ಹಾಗೂ ಪೂಜಾರಾ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಟೀಂ ಇಂಡಿಯಾಗೆ ಗೆಲುವು ತಂದು ಕೊಟ್ಟರು.

ಸೆಹ್ವಾಗ್ 21 ಎಸೆತದಲ್ಲಿ 25 ರನ್ (1 ಬೌಂಡರಿ, 1 ಸಿಕ್ಸರ್) ಗಳಿಸಿ ಸ್ವಾನ್ ಗೆ ಬಲಿಯಾದರು. ಪೂಜಾರಾ 32 41 ರನ್ (50 ಎಸೆತ, 8 ಬೌಂಡರಿ) ಗಳಿಸಿ ಔಟಾಗದೆ ಉಳಿದರು. ಕೊಹ್ಲಿ 11 ರನ್ ಗಳಿಸಿ ಔಟಾಗದೆ ಉಳಿದರು. ಪಂದ್ಯದಲ್ಲಿ ಒಟ್ಟು 9 ವಿಕೆಟ್ ಕಿತ್ತ ಎಡಗೈ ಸ್ಪಿನ್ನರ್ ಓಜಾ ಅಮೋಘ ಪ್ರದರ್ಶನ ನೀಡಿ ಗೆಲುವಿಗೆ ತಮ್ಮ ಕೊಡುಗೆ ನೀಡಿದರು.

ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಎರಡೂ ಇನ್ನಿಂಗ್ಸ್ ನಲ್ಲೂ ಅಜೇಯರಾಗಿ ಉಳಿದ ಚೇತೇಶ್ವರ್ ಪೂಜಾರಾ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿದೆ.

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಮೊದಲ ಟೆಸ್ಟ್ ನ ಐದನೇ ದಿನ ಇಂಗ್ಲೆಂಡ್ ತಂಡ 406 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು. ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಆಂಗ್ಲರು ಭರ್ಜರಿ ಆಟ ಪ್ರದರ್ಶಿಸಿ, ಭಾರತಕ್ಕೆ ಪಂದ್ಯ ಗೆಲ್ಲಲು 77 ರನ್ ಗಳ ಗುರಿ ನೀಡಿದ್ದರು. [ಭಾರತ ಮೊದಲ ಟೆಸ್ಟ್ ಗೆದ್ದ ಕ್ಷಣದ ದೃಶ್ಯಾವಳಿ ನೋಡಿ]

ನಾಲ್ಕನೇ ದಿನದ ಅಂತ್ಯಕ್ಕೆ 340/5 ಸ್ಕೋರ್ ಮಾಡಿದ್ದ ಆಂಗ್ಲರ ಪಡೆ ಐದನೇ ದಿನ ಹೆಚ್ಚಿನ ಮೊತ್ತ ಕಲೆ ಹಾಕಲು ಆಗಲಿಲ್ಲ. ನಾಯಕ ಅಲಿಸ್ಟರ್ ಕುಕ್ ದ್ವಿಶತಕ ಸಿಡಿಸುವ ಆಸೆ ಕೂಡಾ ಭಗ್ನವಾಯಿಯು. ಭಾನುವಾರ 168 ರನ್ ಮಾಡಿದ್ದ ಕುಕ್ ಸೋಮವಾರ 176ರನ್ ಗಳಿಸಿ ಔಟಾದರು.

ಶತಕದ ಹೊಸ್ತಿಲಲ್ಲಿದ್ದ ವಿಕೆಟ್ ಕೀಪರ್ ಮ್ಯಾಟ್ ಪಿಯರ್ ಕೂಡಾ 91 ರನ್ ಗಳಿಗೆ ಔಟಾದರು. ವೇಗಿ ಟಿಮ್ ಬ್ರೆಸ್ನನ್ 20 ರನ್ ಗಳಿಸಿ ಕೊಂಚ ಪ್ರತಿರೋಧ ತೋರಿದರು. ಸ್ಪಿನ್ನರ್ ಸ್ವ್ಯಾನ್ ಕೂಡಾ 17 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಸ್ಕೋರ್ ಕಾರ್ಡ್ ನೋಡಿ

ಕೊನೆಗೂ ಇಂಗ್ಲೆಂಡ್ ತಂಡ 154.3 ಓವರ್ ಗಳಲ್ಲಿ 406 ರನ್ ಗಳಿಸಿ ಔಟಾದರು. ಭಾರತದ ಪರ ಉಮೇಶ್ ಯಾದವ್ ಅವರು 3 ವಿಕೆಟ್, ಜಹೀರ್ ಖಾನ್ 2 ಹಾಗೂ ಆರ್ ಅಶ್ವಿನ್ 1 ವಿಕೆಟ್ ಪಡೆದರೆ ಓಜಾ ಅದ್ಭುತ ಬೌಲಿಂಗ್ ಪ್ರದರ್ಶಿಸಿ 120 ರನ್ ನೀಡಿ 4 ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್ : 521 ಡಿಕ್ಲೇರ್ (ಸೆಹ್ವಾಗ್ 117, ಪೂಜಾರಾ 206 ಔಟಾಗದೆ) ಸ್ವಾನ್ 144 ರನ್ನಿತ್ತು 5 ವಿಕೆಟ್

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ : 191 (ಅಲಿಸ್ಟರ್ ಕುಕ್ 41, ಮ್ಯಾಟ್ ಪಿಯರ್ 48) ಪ್ರಗ್ಯಾನ್ ಓಜಾ 45 ರನ್ನಿತ್ತು 5 ವಿಕೆಟ್

ಎರಡನೇ ಇನ್ನಿಂಗ್ಸ್ : 406 (ಅಲಿಸ್ಟರ್ ಕುಕ್ 176, ಮ್ಯಾಟ್ ಪಿಯರ್ 91) ಪ್ರಗ್ಯಾನ್ ಓಜಾ 120 ರನ್ನಿತ್ತು 4 ವಿಕೆಟ್

ಭಾರತ ಎರಡನೇ ಇನ್ನಿಂಗ್ಸ್ : 77/1, 15.3 ಓವರ್ಸ್

Story first published:  Monday, November 19, 2012, 11:35 [IST]
English summary
Left-arm spinner Pragyan Ojha took nine wickets in the match as India went 1-0 up over England in the four-match Test series with a thumping nine-wicket victory here in first Test at the Sardar Patel Stadium on fifth and final day, Monday.
ಅಭಿಪ್ರಾಯ ಬರೆಯಿರಿ