Englishहिन्दीമലയാളംதமிழ்తెలుగు

ಮೊದಲ ಟೆಸ್ಟ್ ನಲ್ಲಿ ಭಾರತದ ಸಂಭ್ರಮದ ಕ್ಷಣಗಳು

Posted by:
Updated: Tuesday, November 20, 2012, 15:43 [IST]
 

ಪ್ರವಾಸಿ ಇಂಗ್ಲೆಂಡ್ ತಂಡ ಒಡ್ಡಿದ್ದ 77 ರನ್ ಗಳ ಗುರಿಯನ್ನು ಸುಲಭವಾಗಿ ಬೆನ್ನು ಹತ್ತಿದ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿದೆ.

ಭಾರತದ ಆರಂಭಿಕ ಜೋಡಿ ಸೆಹ್ವಾಗ್ ಹಾಗೂ ಪೂಜಾರಾ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನ, ಪ್ರಗ್ಯಾನ್ ಓಝಾ ಅವರ ಸ್ಪಿನ್ ಟೀಂ ಇಂಡಿಯಾಗೆ ಗೆಲುವು ತಂದು ಕೊಟ್ಟಿದೆ.

ಇಂಗ್ಲೆಂಡ್ ಪರ ನಾಯಕ ಅಲಿಸ್ಟರ್ ಕುಕ್, ವಿಕೆಟ್ ಕೀಪರ್ ಮ್ಯಾಟ್ ಪಿಯರ್ ಹಾಗೂ ಗ್ರಹಾಂ ಸ್ವ್ಯಾನ್ ಉತ್ತಮ ಹೋರಾಟ ಪ್ರದರ್ಶಿಸಿದರು. ಸ್ಕೋರ್ ಕಾರ್ಡ್ ನೋಡಿ

ಸಂಕ್ಷಿಪ್ತ ಸ್ಕೋರ್:

ಭಾರತ ಮೊದಲ ಇನ್ನಿಂಗ್ಸ್ : 521 ಡಿಕ್ಲೇರ್ (ಸೆಹ್ವಾಗ್ 117, ಪೂಜಾರಾ 206 ಔಟಾಗದೆ) ಸ್ವಾನ್ 144 ರನ್ನಿತ್ತು 5 ವಿಕೆಟ್
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ : 191 (ಅಲಿಸ್ಟರ್ ಕುಕ್ 41, ಮ್ಯಾಟ್ ಪಿಯರ್ 48) ಪ್ರಗ್ಯಾನ್ ಓಜಾ 45 ರನ್ನಿತ್ತು 5 ವಿಕೆಟ್
ಎರಡನೇ ಇನ್ನಿಂಗ್ಸ್ : 406 (ಅಲಿಸ್ಟರ್ ಕುಕ್ 176, ಮ್ಯಾಟ್ ಪಿಯರ್ 91) ಪ್ರಗ್ಯಾನ್ ಓಜಾ 120 ರನ್ನಿತ್ತು 4 ವಿಕೆಟ್
ಭಾರತ ಎರಡನೇ ಇನ್ನಿಂಗ್ಸ್ : 77/1, 15.3 ಓವರ್ಸ್

ಮೊದಲ ಟೆಸ್ಟ್ ನಲ್ಲಿ ಭಾರತದ ಸಂಭ್ರಮದ ಕ್ಷಣಗಳನ್ನು ನೋಡಿ...

ಚೇತೇಶ್ವರ್ ಪೂಜಾರಾ

ಔಟಾಗದೆ 206 ರನ್ ಚೆಚ್ಚಿದ ಪೂಜಾರಾ ಮೊತ್ತದಲ್ಲಿ 21 ಭರ್ಜರಿ ಬೌಂಡರಿಗಳಿತ್ತು. ಆಕರ್ಷಕ, ಕಲಾತ್ಮಕ ಶಾಟ್ ಪ್ರೇಕ್ಷಕರನ್ನು ರಂಜಿಸಿತು. ಎರಡನೇ ಇನ್ನಿಂಗ್ಸ್ ನಲ್ಲೂ ಅಜೇಯ ರಾಗಿ ಉಳಿದು 41 ರನ್ ಗಳಿಸಿ ಭಾರತಕ್ಕೆ ಜಯ ತಂದಿತ್ತರು.

ದೆಹಲಿ ಸುಲ್ತಾನ ಸೆಹ್ವಾಗ್

99ನೇ ಟೆಸ್ಟ್ ಆಡುತ್ತಿರುವ ಸೆಹ್ವಾಗ್ ಎಂದಿನ ಬಿರಿಸಿನ ಆಟ ಭಾರತದ ನೆಲದಲ್ಲಿ 13ನೇ ಹಾಗೂ ಒಟ್ಟಾರೆ 23ನೇ ಶತಕ ಸಿಡಿಸಿದ ದೆಹಲಿ ಸುಲ್ತಾನ ಸೆಹ್ವಾಗ್ ತಮ್ಮ ಶತಕ ದಾಖಲಿಸಿದರು.

ಓಝಾ ಸ್ಪಿನ್ ಕಮಾಲ್

ಎರಡು ಇನ್ನಿಂಗ್ಸ್ ಸೇರಿ ಸುಮಾರು 9 ವಿಕೆಟ್ ಗಳಿಸಿದ ಪ್ರಗ್ಯಾನ್ ಓಝಾ ಸ್ಪಿನ್ ಮೋಡಿಗೆ ಸಿಲುಕಿ ಆಂಗ್ಲರು ತತ್ತರಿಸಿದರು. ಎರಡನೇ ಇನ್ನಿಂಗ್ಸ್ ನಲ್ಲಿ ನಾಯಕ ಕುಕ್ ವಿಕೆಟ್ ಕೂಡಾ ಓಝಾ ಪಾಲಾಯಿತು.

ಮೊದಲ ಇನ್ನ್ನಿಂಗ್ಸ್ ನಲ್ಲಿ ಪ್ರಗ್ಯಾನ್ ಓಜಾ 45 ರನ್ನಿತ್ತು 5 ವಿಕೆಟ್,ಎರಡನೇ ಇನ್ನಿಂಗ್ಸ್ ನ ಲ್ಲಿಓಜಾ 120 ರನ್ನಿತ್ತು 4 ವಿಕೆಟ್ ಕಬಳಿಸಿದ್ದಾರೆ.

ಕ್ಯಾಪ್ಟನ್ ಕೂಲ್ ಕುಕ್

ಎರಡನೇ ಇನ್ನಿಂಗ್ಸ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಏಕಾಂಗಿ ಹೋರಾಟ ನಡೆಸಿದ ಇಂಗ್ಲೆಂಡ್ ನಾಯಕ 176 ರನ್ ಗಳಿಸಿ ದ್ವಿಶತಕ ಬಾರಿಸುವಲ್ಲಿ ಎಡವಿದರು.

ಗ್ರಹಾಂ ಸ್ವಾನ್ ಸ್ಪಿನ್

ಭಾರತದ ಮೊದಲ ಇನ್ನಿಂಗ್ಸ್ ಬೃಹತ್ ಮೊತ್ತದ ನಡುವೆ ಗ್ರಹಾಂ ಸ್ವ್ಯಾನ್ ಅವರು 5 ವಿಕೆಟ್ ಕಿತ್ತು ಉತ್ತಮ ಪ್ರದರ್ಶನ ನೀಡಿದರು.

ಭಾರತ ಮೊದಲ ಟೆಸ್ಟ್ ಗೆದ್ದ ಕ್ಷಣ

ಇಂಗ್ಲೆಂಡ್ ವೇಗಿ ಬ್ರಿಸ್ನೆನ್ ಅವರು ವಿರಾಟ್ ಕೊಹ್ಲಿ ಅವರನ್ನು ಅಭಿನಂದಿಸುತ್ತಿರುವುದು

Story first published:  Monday, November 19, 2012, 16:43 [IST]
English summary
Pictures: India-England First Test Day 5: Pragyan Ojha and Cheteshwar Pujara were the architects of Indian win. Left-arm spinner Ojha finished with a match haul of nine wickets while Pujara remained unbeaten in both innings.
ಅಭಿಪ್ರಾಯ ಬರೆಯಿರಿ