Englishहिन्दीമലയാളംதமிழ்తెలుగు

ಪೂಜಾರಾರನ್ನು ದ್ರಾವಿಡ್ ಗೆ ಹೋಲಿಸಬೇಡಿ: ಕಪಿಲ್

Posted by:
Published: Monday, November 19, 2012, 15:48 [IST]
 

ಬೆಂಗಳೂರು, ನ.19: ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದ ಪೂಜಾರಾರನ್ನು ಎಲ್ಲರೂ ಹಾಡಿಹೊಗಳಿದ್ದಾರೆ.

'ಅಭಿನವ' ದ್ರಾವಿಡ್, ಮಧ್ಯಮ ಕ್ರಮಾಂಕದ ಆಧಾರ ಸ್ತಂಭ ಎಂದು ಎಲ್ಲರೂ ಹೊಗಳುತ್ತಿರುವಾಗ ಮಾಜಿ ನಾಯಕ ಕಪಿಲ್ ದೇವ್ ಅಪಸ್ವರ ಹಾಡಿದ್ದಾರೆ.

ಪೂಜಾರಾರನ್ನು ದ್ರಾವಿಡ್ ಗೆ ಹೋಲಿಸಬೇಡಿ: ಕಪಿಲ್

ಅಹಮದಾಬಾದಿನಲ್ಲಿ ಸೋಮವಾರ(ನ.15) ಕೊನೆಗೊಂಡ ಮೊದಲ ಟೆಸ್ಟ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಪೂಜಾರಾ ಎರಡೂ ಇನ್ನಿಂಗ್ಸ್ ನಲ್ಲೂ ಔಟಾಗದೆ ಉಳಿದಿದ್ದರು.

ಮೊದಲ ಇನ್ನಿಂಗ್ಸ್ ನಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದ್ದ ಪೂಜಾರಾ ಅವರ ಆಟದ ಬಗ್ಗೆ ಕಪಿಲ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಆದರೆ, ದ್ರಾವಿಡ್ ಗೆ ಹೋಲಿಸುವ ಮೂಲಕ ಅವರ ಕೆರಿಯರ್ ಗೆ ತೊಂದರೆ ಉಂಟಾಗುತ್ತದೆ. ದ್ರಾವಿಡ್ ಗೆ ಇಷ್ಟು ಬೇಗ ಹೋಲಿಸುವುದು ಸರಿಯಲ್ಲ ಎಂದಿದ್ದಾರೆ.

ರಾಹುಲ್ ದ್ರಾವಿಡ್ 164 ಟೆಸ್ಟ್ ಆಡಿ 13,288 ರನ್ ಚೆಚ್ಚಿದ್ದಾರೆ. ಪೂಜಾರಾ ಇನ್ನೂ 6 ಟೆಸ್ಟ್ ಮಾತ್ರ ಆಡಿದ್ದಾರೆ. ಹೋಲಿಕೆ ಮಾಡಲು ಇದು ಕಾಲವೂ ಅಲ್ಲ, ಹೋಲಿಕೆ ಸರಿಯಾದ ಕ್ರಮವೂ ಅಲ್ಲ ಎಂದು ಕಪಿಲ್ ಅಭಿಪ್ರಾಯಪಟ್ಟಿದ್ದಾರೆ.

English summary
Former India skipper Kapil Dev heaped praise on the young Cheteshwar Pujara for scoring his maiden double ton against England in the first Test at Ahmedabad but said the youngster has just started and cannot be compared to Rahul Dravid.
ಅಭಿಪ್ರಾಯ ಬರೆಯಿರಿ