Englishहिन्दीമലയാളംதமிழ்తెలుగు

ನಾಲ್ಕನೇ ದಿನ ಅಂತ್ಯ: ಇಂಗ್ಲೆಂಡಿಗೆ 10 ರನ್ ಮುನ್ನಡೆ

Posted by:
Updated: Sunday, November 18, 2012, 16:45 [IST]
 

ಅಹಮದಾಬಾದ್, ನ.18: ಮೊದಲ ಟೆಸ್ಟ್ ನ ನಾಲ್ಕನೇ ದಿನದಂದು ಭಾರತದ ವಿಕೆಟ್ ಬೇಟೆ ಮುಂದುವರೆಸಿದೆ. ಇಂಗ್ಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಮತ್ತೆ ಮುಗ್ಗರಿಸಿದೆ. ನಾಯಕ ಅಲಿಸ್ಟರ್ ಕುಕ್ ಮಾತ್ರ ಆಕರ್ಷಕ ಶತಕ ಸಿಡಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ನಾಲ್ಕನೇ ದಿನ ಅಂತ್ಯಕ್ಕೆ ಇಂಗ್ಲೆಂಡ್ ತಂಡ 10 ರನ್ ಮುನ್ನಡೆ ಪಡೆದಿದೆ.

ನಾಲ್ಕನೇ ದಿನದ ಗೌರವ ಇಂಗ್ಲೆಂಡ್ ನಾಯಕ ಅಲಿಸ್ಟರ್ ಕುಕ್ ಗೆ ಸಲ್ಲುತ್ತದೆ. ದಿನದ ಅಂತ್ಯಕ್ಕೆ ಇಂಗ್ಲೆಂಡ್ ತಂಡ 128 ಓವರ್ ಗಳಲ್ಲಿ 340/5 ಸ್ಕೋರ್ ಮಾಡಿದೆ.

ಕುಕ್ 168 ರನ್ (341 ಎಸೆತ, 20 ಬೌಂಡರಿ) ಗಳಿಸಿ ಔಟಾಗದೆ ಉಳಿದಿದ್ದಾರೆ. ಕುಕ್ ಜೊತೆಗೆ ವಿಕೆಟ್ ಕೀಪರ್ ಮ್ಯಾಟ್ ಪಿಯರ್ ಅವರು 84 ರನ್ (190 ಎಸೆತ, 10 ಬೌಂಡರಿ) ಗಳಿಸಿ ಔಟಾಗದೆ ಉಳಿದಿದ್ದು ಆಂಗ್ಲರು ಭರ್ಜರಿ ತಿರುಗೇಟು ನೀಡಿದ್ದಾರೆ.

ನಾಲ್ಕನೇ ದಿನ ಅಂತ್ಯ: ಇಂಗ್ಲೆಂಡಿಗೆ 10 ರನ್ ಮುನ್ನಡೆ

ಭಾನುವಾರ ಬೆಳಗ್ಗೆ 111/0 ಸ್ಕೋರ್ ನೊಂದಿಗೆ ಆಟ ಆರಂಭಿಸಿದ ಇಂಗ್ಲೆಂಡ್ ತಂಡ ಭೋಜನ ವಿರಾಮದ ವೇಳೆಗೆ 59 ಓವರ್ ಗಳಲ್ಲಿ 182/3 ಸ್ಕೋರ್ ಮಾಡಿತ್ತು. ನಾಯಕ ಅಲಿಸ್ಟರ್ ಕುಕ್ 109 ರನ್ (205 ಎಸೆತ, 17 ಬೌಂಡರಿ) ಹಾಗೂ ಇಯಾನ್ ಬೆಲ್ 11 ರನ್ ಮಾಡಿ ಕ್ರೀಸ್ ನಲ್ಲಿದ್ದರು.

ಆದರೆ, ಬೆಲ್ 22 ರನ್ ಗಳಿಸಿ ವೇಗಿ ಉಮೇಶ್ ಯಾದವ್ ಗೆ ಬಲಿಯಾದರು. ನಂತರ ಬಂದ ಸಮಿತ್ ಪಟೇಲ್ ಕೂಡಾ ಶೂನ್ಯಕ್ಕೆ ಬಲಿಯಾದರು. ಸ್ಕೋರ್ ಕಾರ್ಡ್ ನೋಡಿ

ಎರಡನೇ ಇನ್ನಿಂಗ್ಸ್ ನಲ್ಲಿ ಆರಂಭಿಕ ಆಟಗಾರ ನಿಕ್ ಕಾಂಪ್ಟನ್ ಉತ್ತಮ ಆಟವಾಡಿದರೂ 37 ರನ್ ಗಳಿಸಿ ಔಟಾದರು. ಟ್ರಾಟ್ ಹಾಗೂ ಕೆವಿನ್ ಪೀಟರ್ಸನ್ ವಿಕೆಟ್ ಪಡೆಯುವ ಮೂಲಕ ಓಜಾ ಮತ್ತೊಮ್ಮೆ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಟ್ರಾಟ್ 17, ಪೀಟರ್ಸನ್ 2 ರನ್ ಮಾತ್ರ ಮಾಡಿ ಔಟಾದರು.

ಇದಕ್ಕೂ ಮುನ್ನ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 521/8 ಕ್ಕೆ ಡಿಕ್ಲೇರ್ ಮಾಡಿಕೊಂಡಿದ್ದು, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 191 ರನ್ ಗೆ ಆಲೌಟ್ ಆಗಿತ್ತು. ಓಜಾ 5 ವಿಕೆಟ್ ಉದುರಿಸಿದ್ದರು. ಇಂಗ್ಲೆಂಡ್ ಫಾಲೋ ಆನ್ ಪಡೆದು ಎರಡನೇ ಇನ್ನಿಂಗ್ಸ್ ನಲ್ಲಿ ಉತ್ತಮ ಆರಂಭ ಪಡೆದಿತ್ತು.

ಭಾರತ: ಮಹೇಂದ್ರ ಸಿಂಗ್ ಧೋನಿ(ನಾಯಕ), ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಚೇತೇಶ್ವರ ಪೂಜಾರ, ಆರ್ ಅಶ್ವಿನ್, ಉಮೇಶ್ ಯಾದವ್, ಪ್ರಗ್ಯಾನ್ ಓಜಾ, ಜಹೀರ್ ಖಾನ್,

ಇಂಗ್ಲೆಂಡ್: ಅಲೆಸ್ಟೈರ್ ಕುಕ್ (ನಾಯಕ), ನಿಕ್ ಕಾಂಪ್ಟನ್, ಜೋನಾಥನ್ ಟ್ರಾಟ್, ಕೆವಿನ್ ಪೀಟರ್ಸನ್, ಇಯಾನ್ ಬೆಲ್, ಮ್ಯಾಟ್ ಪ್ರಿಯರ್, ಸಮಿತ್ ಪಟೇಲ್, ಸ್ಟುವರ್ಟ್ ಬ್ರಾಡ್, ಗ್ರೇಮ್ ಸ್ವಾನ್, ಜೇಮ್ಸ್ ಆಂಡರ್ಸನ್, ಟಿಮ್ ಬ್ರೆಸ್ನನ್,

Story first published:  Sunday, November 18, 2012, 11:25 [IST]
English summary
India began their hunt for wickets on the fourth day as play began here at Sardar Patel Stadium on Sunday. England started the day on 111/0, still 219 in arrears after following on on Saturday. England captain Alastair Cook hit ton
ಅಭಿಪ್ರಾಯ ಬರೆಯಿರಿ