Englishहिन्दीമലയാളംதமிழ்తెలుగు

ಪೂಜಾರಾ ಅಮೋಘ ದ್ವಿಶತಕ, ಅಂಗ್ಲರು ತತ್ತರ

Posted by:
Updated: Friday, November 16, 2012, 18:16 [IST]
 

ಅಹ್ಮದಾಬಾದ್, ನ.16: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತ ಬೃಹತ್ ಮೊತ್ತ ಕಲೆ ಹಾಕಿದೆ. ಅಭಿನವ ದ್ರಾವಿಡ್ ಎಂದೇ ಖ್ಯಾತಿ ಗಳಿಸಿರುವ ಪೂಜಾರಾ ಆಕರ್ಷಕ ಚೊಚ್ಚಲ ದ್ವಿಶತಕ ನೆರವಿನಿಂದ 521/8 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಇಂಗ್ಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿದೆ.

ಇಂಗ್ಲೆಂಡ್ ನಾಯಕ ಕುಕ್ ಉತ್ತಮ ಬ್ಯಾಟಿಂಗ್ ನಡುವೆಯೂ ಆಂಗ್ಲರು ನಿಕ್ ಕಾಂಪ್ಟನ್ 9 ರನ್, ನೈಟ್ ವಾಚ್ಮನ್ ಜೇಮ್ಸ್ ಆಂಡರ್ಸನ್ 2 ಹಾಗೂ ಭರವಸೆ ಆಟಗಾರ ಟ್ರಾಟ್ 0 ವಿಕೆಟ್ ಕಳೆದುಕೊಂಡಿದೆ.

ಬೌಲಿಂಗ್ ಆರಂಭಿಸಿದ ಆರ್ ಅಶ್ವಿನ್ 21 ರನ್ ನೀಡಿ 2 ವಿಕೆಟ್ ಕಬಳಿಸಿದ್ದಾರೆ. 4 ಓವರ್ ಎಸೆದ ಓಜಾ ಕೇವಲ 3 ರನ್ ನೀಡಿ 1 ವಿಕೆಟ್ ಬೀಳಿಸಿದ್ದಾರೆ. ಇಂಗ್ಲೆಂಡ್ 480 ರನ್ ಹಿಂದೆ ಬಿದ್ದಿದ್ದಾರೆ. ಕುಕ್ 22 ಹಾಗೂ ಕೆವಿನ್ ಪೀಟರ್ಸನ್ 6 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.

ಪೂಜಾರಾ ಅಮೋಘ ದ್ವಿಶತಕ, ಅಂಗ್ಲರು ತತ್ತರ

ಚೇತೇಶ್ವರ್ ಪೂಜಾರಾ 389 ಎಸೆತದಲ್ಲಿ 206 ರನ್ ಮೊತ್ತದಲ್ಲಿ 21 ಆಕರ್ಷಕ ಬೌಂಡರಿಗಳಿದೆ. ಸ್ಕೋರ್ ಕಾರ್ಡ್ ನೋಡಿ | ಮೊದಲ ದಿನದ ವರದಿ

ಮೊದಲ ದಿನ 98 ರನ್ ಗಳಿಸಿದ್ದ ಪೂಜಾರಾ ಎರಡನೇ ದಿನ ಬ್ಯಾಟಿಂಗ್ ಮುಂದುವರೆಸಿ ದ್ವಿಶತಕ ಗಳಿಸಿದರು. ಮತ್ತೆ ಲಯಕ್ಕೆ ಮರಳಿದ ಯುವರಾಜ್ ಕೂಡ ಅರ್ಧಶತಕ ಸಿಡಿಸಿ ಶತಕದತ್ತ ದಾಪುಗಾಲು ಹಾಕಿದ್ದರು.

ಭೋಜನ ವಿರಾಮದ ವೇಳೆಗೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 410/4 ರನ್ ಗಳಿಸಿತ್ತು. ಚೇತೇಶ್ವರ್ ಪೂಜಾರಾ 133 ರನ್(274 ಎಸೆತ, 16 ಬೌಂಡರಿ), ಯುವರಾಜ್ ಸಿಂಗ್ 72 ರನ್ (140 ಎಸೆತ, 6 ಬೌಂಡರಿ, 2 ಸಿಕ್ಸರ್) ಗಳಿಸಿದ್ದರು.

ಅದರೆ, ಭೋಜನ ವಿರಾಮದ ನಂತರ ಯುವರಾಜ್ ಸಿಂಗ್ ರ್ 2 ರನ್ ಮಾತ್ರ ಗಳಿಸಿ ವಿಕೆಟ್ ಪಟೇಲ್ ಗೆ ವಿಕೆಟ್ ಒಪ್ಪಿಸಿದರು. ಯುವಿ 74 ರನ್ ಹೊಡೆದರು. ನಂತರ ಬಂದ ನಾಯಕ ಧೋನಿ ಕೇವಲ 5 ರನ್ ಗಳಿಸಿ ನಿರಾಶೆ ಮೂಡಿಸಿದರು.

ಈ ವೇಳೆಗೆ 150 ರನ್ ಗಡಿ ದಾಟಿದ್ದ ಪೂಜಾರಾಗೆ ಆರ್ ಅಶ್ವಿನ್ ಉತ್ತಮ ಸಾಥ್ ನೀಡಿದರು. ಟೀ ವಿರಾಮದ ನಂತರ 23ರನ್ ಗಳಿಸಿದ್ದ ಅಶ್ವಿನ್ ಪೀಟರ್ಸನ್ ಗೆ ಬಲಿಯಾದರು.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಆಡುವ ಮೂಲಕ 23 ವರ್ಷಗಳ ಕ್ರಿಕೆಟ್ ಜೀವನ ಮುಗಿಸಿ ದಾಖಲೆ ಬರೆದ ಸಚಿನ್ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದೆ 13 ರನ್ ಗಳಿಸಿ ಔಟಾಗಿದ್ದರು.

ಸೆಹ್ವಾಗ್ ಅವರು ಕೇವಲ 90 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಇದು ಸೆಹ್ವಾಗ್ ಅವರ 23ನೇ ಶತಕವಾಗಿದೆ. ಭಾರತದಲ್ಲಿ ಇದು 13 ನೇ ಶತಕವಾಗಿದೆ., ಸೆಹ್ವಾಗ್ 117 ರನ್ ಗಳಿಸಿ ಔಟ್ (117 ಎಸೆತ, 15 ಬೌಂಡರಿ, 1 ಸಿಕ್ಸರ್)

ಭಾರತ: ಮಹೇಂದ್ರ ಸಿಂಗ್ ಧೋನಿ(ನಾಯಕ), ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಚೇತೇಶ್ವರ ಪೂಜಾರ, ಆರ್ ಅಶ್ವಿನ್, ಉಮೇಶ್ ಯಾದವ್, ಪ್ರಗ್ಯಾನ್ ಓಜಾ, ಜಹೀರ್ ಖಾನ್,

ಇಂಗ್ಲೆಂಡ್: ಅಲೆಸ್ಟೈರ್ ಕುಕ್ (ನಾಯಕ), ನಿಕ್ ಕಾಂಪ್ಟನ್, ಜೋನಾಥನ್ ಟ್ರಾಟ್, ಕೆವಿನ್ ಪೀಟರ್ಸನ್, ಇಯಾನ್ ಬೆಲ್, ಮ್ಯಾಟ್ ಪ್ರಿಯರ್, ಸಮಿತ್ ಪಟೇಲ್, ಸ್ಟುವರ್ಟ್ ಬ್ರಾಡ್, ಗ್ರೇಮ್ ಸ್ವಾನ್, ಜೇಮ್ಸ್ ಆಂಡರ್ಸನ್, ಟಿಮ್ ಬ್ರೆಸ್ನನ್,

Story first published:  Friday, November 16, 2012, 9:56 [IST]
English summary
Cheteshwar Pujara registered his maiden Test double century to put India in control of first Test against England on the second day, Friday. Pujara made unbeaten 206 as India declared at 521/8. At close, England were reeling at 41/3 in 18 overs with R Ashwin taking two and Pragyan Ojha one.
ಅಭಿಪ್ರಾಯ ಬರೆಯಿರಿ