Englishहिन्दीമലയാളംதமிழ்తెలుగు

ಚಿತ್ರ ಸುದ್ದಿ : ಪೂಜಾರಾಗೆ ಲಕ್ ತಿರುಗಿಸಿದ ಭಾವಿ ಪತ್ನಿ

Posted by:
Updated: Friday, November 16, 2012, 18:18 [IST]
 

ಅಭಿನವ ದ್ರಾವಿಡ್ ಎಂದೇ ಖ್ಯಾತಿ ಗಳಿಸಿರುವ ಪೂಜಾರಾ ಆಕರ್ಷಕ ಚೊಚ್ಚಲ ದ್ವಿಶತಕ ನೆರವಿನಿಂದ 521/8 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಇಂಗ್ಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿದೆ. ಗ್ರಹಾಂ ಸ್ವ್ಯಾನ್ 5 ವಿಕೆಟ್ ಕಬಳಿಸಿದ್ದು ಕೂಡಾ ದಿನದ ವಿಶೇಷ.

ಎಲ್ಲಕ್ಕಿಂತ ಮುಖ್ಯವಾಗಿ ಯುವ ಪ್ರತಿಭೆ ಚೇತೇಶ್ವರ್ ಪೂಜಾರಾ ಅವರ ಭಾವಿ ಪತ್ನಿ ಪೂಜಾ ಪಬಾರಿ ಅವರು ಪೆವಿಲಿಯನ್ ನಲ್ಲಿದ್ದು ಪೂಜಾರಾ ಅವರನ್ನು ಹುರಿದುಂಬಿಸಿದ್ದು ಎಲ್ಲರ ಗಮನ ಸೆಳೆಯಿತು. ಪೂಜಾರಾ ಪತಿಭೆಗೆ ಭಾವಿ ಪತ್ನಿಯ ಲಕ್ ಕೂಡಾ ಸಾಥ್ ನೀಡಿತ್ತು.

ಸ್ಕೋರ್ ಕಾರ್ಡ್ | ಮೊದಲ ದಿನ ವರದಿ| ಮೊದಲ ದಿನ ದೃಶ್ಯಾವಳಿ |

ಎರಡನೇ ದಿನದ ಆಟದ ದೃಶ್ಯಗಳ ಸಂಪುಟ ಇಲ್ಲಿದೆ ನೋಡಿ

ಭರ್ಜರಿ ಇನ್ನಿಂಗ್ಸ್ ವೀರ ಪೂಜಾರಾ

ಹೈದರಾಬಾದಿನಲ್ಲಿ ನ್ಯೂಜಿಲೆಂಡ್ ವಿರುದ್ಧ 159 ರನ್ ಚೆಚ್ಚಿದ್ದ ಪೂಜಾರಾ ಇಂಗ್ಲೆಂಡ್ ವಿರುದ್ಧ ಶತಕದ ಸಂಭ್ರಮ

ಪೂಜಾರಾ ಸಂಭ್ರಮಕ್ಕೆ ಪೂಜಾ ಚಪ್ಪಾಳೆ

ಪೂಜಾರಾ ಭಾವಿ ಪತ್ನಿ ಪೂಜಾ ಅವರು ಚೇತೇಶ್ವರ್ ದ್ವಿಶತಕ ಬಾರಿಸಿದಾಗ ಸಂಭ್ರಮಿಸಿದ್ದು ಹೀಗೆ

ಆಂಗ್ಲರ ಕಾಡಿದ ಯುವರಾಜ

ಬೌಂಡರಿ ಚೆಂಡನ್ನು ಅಟ್ಟುತ್ತಿರುವ ಯುವರಾಜ್ ಸಿಂಗ್, ಪೂಜಾರಾ ಜೊತೆ ಸೇರಿ ಆಂಗ್ಲರನ್ನು ಕಾಡಿದರು.

ಯುವಿ ನಿರಾಶೆ

ಟೆಸ್ಟ್ ಕ್ರಿಕೆಟ್ ಗೆ ಮರಳಿದ ಯುವರಾಜ್ ಸಿಂಗ್ ಉತ್ತಮ ಪ್ರದರ್ಶನ ನೀಡಿ 74 ರನ್ ಗಳಿಸಿ ಔಟಾದರು. ಶತಕ ವಂಚಿತ ಯುವಿ ಮುಖದಲ್ಲಿ ನಿರಾಶೆ ಕಾಣಬಹುದು.

ಭಲೆ ಜೋಡಿ ನಂ 2

ಗಂಭೀರ್, ಸೆಹ್ವಾಗ್ ನಂತರ ಆಂಗ್ಲರನ್ನು ಕಾಡಿದ ಪೂಜಾರಾ -ಯುವರಾಜ್ ಜೋಡಿ

ಪುಲ್ ಶಾಟ್ ಹೊಡೆಯೋದು ಹೀಗೆ

ಔಟಾಗದೆ 206 ರನ್ ಚೆಚ್ಚಿದ ಪೂಜಾರಾ ಮೊತ್ತದಲ್ಲಿ 21 ಭರ್ಜರಿ ಬೌಂಡರಿಗಳಿತ್ತು. ಆಕರ್ಷಕ, ಕಲಾತ್ಮಕ ಶಾಟ್ ಪ್ರೇಕ್ಷಕರನ್ನು ರಂಜಿಸಿತು.

ಚೊಚ್ಚಲ ದ್ವಿಶತಕದ ಸಂಭ್ರಮ

ಪೂಜಾರಾ ಇಂಗ್ಲೆಂಡ್ ವಿರುದ್ಧ ಚೊಚ್ಚಲ ದ್ವಿಶತದ ಸಂಭ್ರಮ

ಇನ್ನಿಂಗ್ಸ್ ಅಂತ್ಯಕ್ಕೆ

ಅದ್ಭುತ ಆಟ ಪ್ರದರ್ಶಿಸಿದ ಪೂಜಾರಾಗೆ ನೆರೆದಿದ್ದ ಪ್ರೇಕ್ಷಕರೆಲ್ಲರೂ ಎದ್ದು ನಿಂತು ಚಪ್ಪಾಳೆ ಮೂಲಕ ಅಭಿನಂದಿಸಿದರು.

Story first published:  Friday, November 16, 2012, 18:12 [IST]
English summary
Young Cheteshwar Pujara was in the spotlight on the second day of first Test between India and England as the right-hander scored his maiden Test double hundred. Pujara remained unbeaten on 206 as India declared at 521/8 in 160 overs.
ಅಭಿಪ್ರಾಯ ಬರೆಯಿರಿ