Englishहिन्दीമലയാളംதமிழ்తెలుగు

ಧೋನಿ ಸದ್ಯಕ್ಕೆ ಸೂಪರ್, ಕೊಹ್ಲಿ ಫ್ಯೂಚರ್ ಕ್ಯಾಪ್ಟನ್

Posted by:
Updated: Tuesday, November 13, 2012, 14:26 [IST]
 

ಧೋನಿ ಸದ್ಯಕ್ಕೆ ಸೂಪರ್, ಕೊಹ್ಲಿ ಫ್ಯೂಚರ್ ಕ್ಯಾಪ್ಟನ್
 

ಬೆಂಗಳೂರು, ನ.13: ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಎಂಎಸ್ ಧೋನಿ ಅವರ ಪರ ವಾದಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಮುನ್ನಡೆಸಲು ಸದ್ಯಕ್ಕೆ ಧೋನಿಯೇ ಸೂಪರ್ ಕ್ಯಾಪ್ಟನ್. ವಿರಾಟ್ ಕೊಹ್ಲಿ ಫ್ಯೂಚರ್ ಕ್ಯಾಪ್ಟನ್ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಆದರೆ, ಟೆಸ್ಟ್ ಕ್ರಿಕೆಟ್ ನಲ್ಲಿ ಧೋನಿ ಅವರು ಬ್ಯಾಟ್ಸ್ ಮನ್ ಹಾಗೂ ವಿಕೆಟ್ ಕೀಪರ್ ಆಗಿ ತಮ್ಮ ನೈಜ ಆಟ ಪ್ರದರ್ಶಿಸಬೇಕಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದು ರಾಹುಲ್ ಹೇಳಿದರು.

ಕಳೆದ ವರ್ಷ ಭಾರತ ತಂಡ ಟೆಸ್ಟ್ ಕ್ರಿಕೆಟ್ ನಲ್ಲಿ ಸತತವಾಗಿ 8 ಸೋಲುಗಳನ್ನು ಕಂಡ ಮೇಲೆ ಎಂಎಸ್ ಧೋನಿ ನಾಯಕತ್ವದ ಬಗ್ಗೆ ಪ್ರಶ್ನೆ ಎದ್ದಿತ್ತು. ಟಿ20, ಏಕದಿನ ಕ್ರಿಕೆಟ್ ಹಾಗೂ ಟೆಸ್ಟ್ ಕ್ರಿಕೆಟ್ ಗೆ ಪ್ರತ್ಯೇಕ ನಾಯಕರನ್ನು ನೇಮಿಸುವ ಬಗ್ಗೆ ಬಿಸಿಸಿಐನ ಹೊಸ ಆಯ್ಕೆ ಮಂಡಳಿ ಹಾಗೂ ಮಾಜಿ ಆಟಗಾರರು ಒಲವು ತೋರಿಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಧೋನಿ ನಾಯಕತ್ವದಲ್ಲೇ ಭಾರತ ವಿಶ್ವಕಪ್ ಗೆದ್ದಿದ್ದು ಹಾಗೂ ನಂ.1 ಟೆಸ್ಟ್ ಪಟ್ಟ ಗಳಿಸಿದ್ದು ಎಂಬುದನ್ನು ಮರೆಯುವಂತಿಲ್ಲ. ತವರು ನೆಲದಲ್ಲಿ ನಡೆಯುವ ಟೆಸ್ಟ್ ಸರಣಿ ಅಲ್ಲದೆ ನಾವು ವಿದೇಶಿ ಪಿಚ್ ಗಳಲ್ಲೂ ಉತ್ತಮ ಸಾಧನೆ ತೋರುವ ಸಾಮರ್ಥ್ಯ ಹೊಂದಿದ್ದೇವೆ ಎಂಬುದನ್ನು ಸಾಬೀತುಪಡಿಸಬೇಕಿದೆ ಎಂದು ರಾಹುಲ್ ಅಭಿಪ್ರಾಯಪಟ್ಟರು.

ವಿರಾಟ್ ಕೊಹ್ಲಿ ಎಲ್ಲಾ ಮಾದರಿಯಲ್ಲೂ ಹೊಂದಿಕೊಳ್ಳಬಲ್ಲ ಸಮರ್ಥ ಆಟಗಾರ. ಭಾರತದ ಭವಿಷ್ಯದ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಆಯ್ಕೆದಾರರ ಜೊತೆಗೆ ಇಡೀ ವಿಶ್ವವೇ ಮುಂದಿನ 12 ತಿಂಗಳಿನಲ್ಲಿ ಕೊಹ್ಲಿ ಆಟವನ್ನು ಗಮನಿಸಲಿದೆ. ಕೊಹ್ಲಿ ತನ್ನ ಜವಾಬ್ದಾರಿ ಅರಿತು ಇದೇ ರೀತಿ ಮುಂದುವರೆದರೆ ಭಾರತಕ್ಕೆ ಯಶ ಖಂಡಿತ ಎಂದು ರಾಹುಲ್ ಹೇಳಿದರು.

Story first published:  Tuesday, November 13, 2012, 14:21 [IST]
English summary
Former captain Rahul Dravid has backed Mahendra Singh Dhoni to remain in the hot seat but felt the selectors can, in the near future, consider reducing the current India skipper's workload in one format to get the best out of him.
ಅಭಿಪ್ರಾಯ ಬರೆಯಿರಿ