Englishहिन्दीമലയാളംதமிழ்తెలుగు

ಚಿತ್ರ ಸಂಪುಟ : ಸಚಿನ್ ಗೆ ಪೆಟ್ಟು, ಕೊಹ್ಲಿ ಹೇರ್ ಸ್ಟೈಲ್

Posted by:
Updated: Sunday, November 11, 2012, 17:19 [IST]
 

ಮುಂಬೈ, ನ.11: ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಟೀಂ ಇಂಡಿಯಾ ಭರ್ಜರಿಯಾಗಿ ತಯಾರಿ ನಡೆಸಿದೆ. ಇಲ್ಲಿನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಮೂರು ದಿನಗಳ ಕಾಲ ನಡೆದ ತರಬೇತಿ ಭಾನುವಾರ(ನ.11)ರಂದು ಮುಕ್ತಾಯಗೊಂಡಿದೆ.

ಸಚಿನ್ ತೆಂಡೂಲ್ಕರ್ ಪೆಟ್ಟು, ವಿರಾಟ್ ಕೊಹ್ಲಿ ಹೊಸ ಹೇರ್ ಸ್ಟೈಲ್, ಯುವರಾಜ್ ಸಿಂಗ್, ಸೆಹ್ವಾಗ್ ಕಠಿಣ ಅಭ್ಯಾಸ, ಕೋಚ್ ಡಂಕನ್ ಫ್ಲೆಚರ್ ತಂತ್ರಗಾರಿಕೆ, ಫುಟ್ಬಾಲ್ ಆಟ ಮೂರು ದಿನಗಳ ತರಬೇತಿಯ ಪ್ರಮುಖಾಂಶವಾಗಿತ್ತು.

ಪ್ರವಾಸಿ ಇಂಗ್ಲೆಂಡ್ ತಂಡ ಭಾರತದಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಅಹಮದಾಬಾದ್ (ನ.15-19), ಮುಂಬೈ(ನ. 23-27), ಕೋಲ್ಕತಾ(ಡಿ.5-9) ಹಾಗೂ ನಾಗಪುರ (ಡಿ 13-17) ಹಾಗೂ ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ಡಿ.20 ಹಾಗೂ ಡಿ.22 ರಂದು ನಡೆಯಲಿದೆ.

5 ಪಂದ್ಯಗಳ ಏಕದಿನ ಸರಣಿ ಜ.11, 2013 ರಿಂದ ಆರಂಭಗೊಳ್ಳಲಿದೆ. ಡಿ.22 ರಂದು ಇಂಗ್ಲೆಂಡ್ ತಂಡ ಸ್ವದೇಶಕ್ಕೆ ಮರಳಿದೆ. ಮತ್ತೆ ಜನವರಿ 3 ಕ್ಕೆ ಭಾರತಕ್ಕೆ ಆಗಮಿಸಿ ಸರಣಿ ಮುಂದುವರೆಸಲಿದೆ.

ಟೀಂ ಇಂಡಿಯಾ ಆಟಗಾರರ ತರಬೇತಿ ಸಮಯದ ಚಿತ್ರಗಳು ಇಲ್ಲಿದೆ :

ಸಚಿನ್ ಸೂಪರ್ ಫೀಲ್ಡಿಂಗ್

ಮೂರನೇ ದಿನ ಸಚಿನ್ ತೆಂಡೂಲ್ಕರ್ ಫೀಲ್ಡಿಂಗ್ ಸಮಯದಲ್ಲಿ ಮುಖಕ್ಕೆ ಚೆಂಡು ಬಡಿಸಿಕೊಂಡು ಪೆಟ್ಟು ಮಾಡಿಕೊಂಡರು. ಆದರೆ, 20 ನಿಮಿಷ ವಿಶ್ರಾಂತಿ ಬಳಿಕ ಮತ್ತೆ ಕ್ರೀಸಿಗಿಳಿದು ಲವಲವಿಕೆಯಿಂದ ಬ್ಯಾಟ್ ಬೀಸಿದರು.

ಎಂಎಸ್ ಧೋನಿ ಪ್ಯಾಡ್ ಕಟ್ಟಿದ್ದು ಹೀಗೆ

ನಾಯಕ ಎಂಎಸ್ ಧೋನಿ ಮೊದಲ ದಿನ ತಮ್ಮ ಫುಟ್ಬಾಲ್ ಕೌಶಲ್ಯ ಪ್ರದರ್ಶಿಸಿದರೆ ನಂತರ ಹೆಚ್ಚು ಕಾಲ ಬ್ಯಾಟಿಂಗ್ ಹಾಗೂ ಕ್ಯಾಚಿಂಗ್ ತರಬೇತಿಯಲ್ಲಿ ತೊಡಗಿಕೊಂಡರು.

ಯುವರಾಜ್ ಸಿಂಗ್ ಸಮತೋಲನ ಭಂಗಿ

ಆರೋಗ್ಯ ಹಾಗೂ ವೃತ್ತಿಯಲ್ಲಿ ಸಮತೋಲನ ಕಾಯ್ದುಕೊಳ್ಳುತ್ತಿರುವ ಯುವರಾಜ್ ಗೆ ಒಳ್ಳೆ ದಿನಗಳು ಎದುರಾಗಿದೆ. ತರಬೇತಿ ವೇಳೆ ಯುವರಾಜ್ ಸಿಂಗ್ ಗ್ಲೌವ್ಸ್, ಹೆಡ್ ಗೇರ್ ಬ್ಯಾಲೆನ್ಸ್ ಮಾಡಿದ್ದು ಹೀಗೆ

ವಿರಾಟ್ ಕೊಹ್ಲಿ ಏಕಾಗ್ರತೆ

ಹೊಸ ಹೇರ್ ಸ್ಟೈಲ್ ಮೂಲಕ ಎಲ್ಲರ ಗಮನ ಸೆಳೆದ ಕೊಹ್ಲಿ, ಬ್ಯಾಟಿಂಗ್ ನಲ್ಲಿ ಹೆಚ್ಚು ಡಿಫೆನ್ಸ್ ಸ್ಟ್ರೋಕ್ ಆಡಿದ್ದು ಕಂಡು ಬಂದಿತು

ಕೋಚ್ ಜೊತೆ ಸಚಿನ್ ಸಮಾಲೋಚನೆ

ಡಂಕನ್ ಫ್ಲೆಚರ್ ಹಾಗೂ ಸಚಿನ್ ತೆಂಡೂಲ್ಕರ್ ಅವರು ಫೀಲ್ಡಿಂಗ್ ವಿಷಯವಾಗಿ ಚರ್ಚೆ ನಡೆಸಿದರು

ಸೆಹ್ವಾಗ್ ತರಬೇತಿಗೆ ಹೊರಟಿದ್ದು ಹೀಗೆ

ತರಬೇತಿ ಶಿಬಿರಕ್ಕೆ ಹೊರಟ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ವೀರೆಂದರ್ ಸೆಹ್ವಾಗ್

ಸಚಿನ್ ಬ್ಯಾಟಿಂಗ್

ರಣಜಿಯಲ್ಲಿ ಭರ್ಜರಿ ಶತಕ ಸಿಡಿಸಿದ ಸಚಿನ್ ತೆಂಡೂಲ್ಕರ್, ದಾಖಲೆಗಳ ಬೆನ್ನು ಹತ್ತಿದ್ದು ಕಠಿಣ ಬ್ಯಾಟಿಂಗ್ ಅಭ್ಯಾಸ ನಡೆಸಿದರು

ಜ್ಯೂ. ಸಚಿನ್ ಜೊತೆ ಫ್ಲೆಚರ್

ಜ್ಯೂನಿಯರ್ ಸಚಿನ್ ಆಲ್ ರೌಂಡರ್ ಅರ್ಜುನ್ ಮೇಲೆ ಕೋಚ್ ಡಂಕನ್ ಫ್ಲೆಚರ್ ಕಣ್ಣು

Story first published:  Sunday, November 11, 2012, 17:11 [IST]
English summary
The Indian squad's three-day preparatory camp for the four-Test series against England, commencing at Ahmedabad from November 15, concluded at Brabourne Stadium on Sunday. India-England first Test begins in Ahmedabad on November 15.
ಅಭಿಪ್ರಾಯ ಬರೆಯಿರಿ