Englishहिन्दीമലയാളംதமிழ்తెలుగు

ಗವಾಸ್ಕರ್ ದಾಖಲೆ ಮುರಿಯಲು ಸಚಿನ್ ಸನ್ನದ್ಧ

Posted by:
Updated: Friday, November 9, 2012, 15:24 [IST]
 

ಬೆಂಗಳೂರು, ನ.9: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ನ.15 ರಂದು ಅಹಮದಾಬಾದಿನಲ್ಲಿ ನಡೆಯಲಿದೆ. ಪ್ರಸಕ್ತ ಸರಣಿ ಅತ್ಯಂತ ರೋಚಕವಾಗಿರುವ ನಿರೀಕ್ಷೆಯಿದ್ದು, ಹತ್ತು ಹಲವು ದಾಖಲೆಗಳ ಧೂಳಿಪಟವಾಗುವ ಸಾಧ್ಯತೆಯಿದೆ.

ಗವಾಸ್ಕರ್ ದಾಖಲೆ ಮುರಿಯಲು ಸಚಿನ್ ಸನ್ನದ್ಧ

ಸಚಿನ್ ತೆಂಡೂಲ್ಕರ್ ಅವರು ಗವಾಸ್ಕರ್ ಅವರ ದಾಖಲೆ ಮುರಿಯಲು ಸನ್ನದ್ಧರಾಗಿರುವಂತೆ ಇಂಗ್ಲೆಂಡ್ ಕೂಡಾ ಭಾರತದಲ್ಲಿ ತನ್ನ ದಾಖಲೆ ಉತ್ತಮ ಪಡಿಸಲು ಕಾತುರವಾಗಿದೆ. ಕೆಲವು ಕುತೂಹಲಕಾರಿ ಅಂಕಿ ಅಂಶ ಇಲ್ಲಿದೆ:

* 1984 ರ ನಂತರ ಭಾರತದಲ್ಲಿ ಇಂಗ್ಲೆಂಡ್ ತಂಡ ಟೆಸ್ಟ್ ಸರಣಿ ಗೆದ್ದಿಲ್ಲ
* ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ಹೆಚ್ಚು ರನ್ ಗಳಿಸಿದ ಸಾಧನೆ ಗವಾಸ್ಕರ್ ಹೆಸರಿನಲ್ಲಿದೆ. 35.97 ರನ್ ಸರಾಸರಿಯಂತೆ 1331 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ, 9 ಅರ್ಧ ಶತಕ ಸೇರಿದೆ.
* ಇಂಗ್ಲೆಂಡ್ ವಿರುದ್ಧ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಲು ಸಚಿನ್ ಗೆ ಇನ್ನು 484 ರನ್ ಬೇಕಿದೆ. ಸಚಿನ್ 11 ಪಂದ್ಯಗಳಲ್ಲಿ 848 ರನ್ ಬಾರಿಸಿದ್ದಾರೆ.
* ಮಹಮ್ಮದ್ ಅಜರುದ್ದೀನ್ ಅವರು ಹೆಚ್ಚು ಶತಕಗಳನ್ನು ಬಾರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ 6 ಪಂದ್ಯಗಳಲ್ಲಿ 4 ಶತಕ ಗಳಿಸಿದ್ದಾರೆ.
* ಸುನಿಲ್ ಗವಾಸ್ಕರ್ 8 ಅರ್ಧಶತಕ ಬಾರಿಸಿದ್ದು ಇದು ದಾಖಲೆಯಾಗಿ ಉಳಿದಿದೆ. ಸಚಿನ್ 4 ಅರ್ಧಶತಕ ಬಾರಿಸಿದ್ದಾರೆ.
* ವಿನೋದ್ ಕಾಂಬ್ಳಿ 1993ರ ಸರಣಿಯಲ್ಲಿ 224 ರನ್ ಬಾರಿಸಿದ್ದು ಇಂಗ್ಲೆಂಡ್ ವಿರುದ್ಧದ ಅತ್ಯಧಿಕ ವೈಯಕ್ತಿಕ ಮೊತ್ತ ಎನಿಸಿದೆ.
* ಕನ್ನಡಿಗ ಸ್ಪಿನ್ನರ್ ಬಿಎಸ್ ಚಂದ್ರಶೇಖರ್ ಅವರು 14 ಪಂದ್ಯಗಳಲ್ಲಿ 64 ವಿಕೆಟ್ ಕಬಳಿಸಿದ್ದು ಸರ್ವಶ್ರೇಷ್ಠ ದಾಖಲೆಯಾಗಿ ಉಳಿದಿದೆ.
* ಹಾಲಿ ತಂಡದಲ್ಲಿರುವ ಆಫ್ ಸ್ಪಿನ್ನರ್ ಹರ್ಭಜನ್ ಕೂಡಾ 8 ಪಂದ್ಯಗಳಲ್ಲಿ 29 ವಿಕೆಟ್ ಉದುರಿಸಿದ ಸಾಧನೆ ಹೊಂದಿದ್ದಾರೆ.
* 2008 ರ ಡಿಸೆಂಬರ್ ನಲ್ಲಿ ಮೊಹಲಿಯಲ್ಲಿ ಆಡಿದ್ದ ಇಂಗ್ಲೆಂಡ್ ತಂಡ ನಾಲ್ಕು ವರ್ಷಗಳ ನಂತರ ಭಾರತ ಪ್ರವಾಸ ಕೈಗೊಂಡಿದೆ.
* ಇಂಗ್ಲೆಂಡ್ ವಿರುದ್ಧದ ಪಂದ್ಯವೊಂದರಲ್ಲಿ ಹತ್ತು ವಿಕೆಟ್ ಪಡೆದ ಸಾಧನೆಯನ್ನು ಎಲ್ ಶಿವರಾಮಕೃಷ್ಣನ್, ವಿನೂ ಮಂಕಡ್, ಸಲೀಂ ದುರಾನಿ ಹಾಗೂ ಅನಿಲ್ ಕುಂಬ್ಳೆ ಮಾಡಿದ್ದಾರೆ.

* ಉಭಯ ದೇಶಗಳ ನಡುವಿನ ಸರಣಿಯಲ್ಲಿ ಬಿಎಸ್ ಚಂದ್ರಶೇಖರ್ ಅವರು 6 ಬಾರಿ ಶೂನ್ಯಕ್ಕೆ ಔಟಾಗಿದ್ದು ದಾಖಲೆಯಾಗಿದೆ.
* ಭಾರತ ಹಾಗೂ ಇಂಗ್ಲೆಂಡ್ 51 ಪಂದ್ಯಗಳನ್ನಾಡಿದೆ. ಭಾರತ 14 ಗೆದ್ದು, 11 ರಲ್ಲಿ ಸೋತಿದೆ. 26 ಪಂದ್ಯ ಡ್ರಾ ಆಗಿದೆ.

Story first published:  Friday, November 9, 2012, 13:14 [IST]
English summary
With India and England playing a four match Test series at home starting November 15, here are a few facts and statistics that remind us of the previous bilateral ties between the two countries and the records held by both the teams.
ಅಭಿಪ್ರಾಯ ಬರೆಯಿರಿ