Englishहिन्दीമലയാളംதமிழ்తెలుగు

ರಣಜಿ ಟ್ರೋಫಿ : ಕರ್ನಾಟಕ ಟುಸ್, ತಮಿಳುನಾಡು ಮೇಲುಗೈ

Posted by:
Updated: Saturday, November 10, 2012, 0:30 [IST]
 

ಬೆಂಗಳೂರು, ನ.9: ಕರ್ನಾಟಕದ ವಿರುದ್ಧ ತಮಿಳುನಾಡು ತಂಡ ಭರ್ಜರಿ ಆಟ ಪ್ರದರ್ಶಿಸಿ ದಿನದ ಗೌರವ ಸಂಪಾದಿಸಿದೆ. ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತಮಿಳುನಾಡು ತಂಡ ಮೊದಲ ದಿನದ ಅಂತ್ಯಕ್ಕೆ ಕೇವಲ 2 ವಿಕೆಟ್ ಕಳೆದುಕೊಂಡು 290 ರನ್ ಗಳಿಸಿದೆ.

ಆರಂಭಿಕ ಆಟಗಾರ ಅಭಿನವ್ ಮುಕುಂದ್ (51), ಅರುಣ್ ಕಾರ್ತಿಕ್ (50) ಉತ್ತಮ ಆರಂಭಿಸಿದರು. ಎಸ್ ಬದ್ರಿನಾಥ್ ಹಾಗೂ 19 ರ ವಯೋಮಿತಿಯೊಳಗಿನ ವಿಶ್ವಕಪ್ ತಂಡದ ತಾರೆ ಬಾಬಾ ಅಪರಾಜಿತ್ ಉತ್ತಮ ಪ್ರದರ್ಶನ ನೀಡಿದರು.

ರಣಜಿ ಟ್ರೋಫಿ : ಕರ್ನಾಟಕ ಟುಸ್, ತಮಿಳುನಾಡು ಮೇಲುಗೈ

ಪ್ರಥಮದರ್ಜೆಯ ಪಂದ್ಯದಲ್ಲಿ ಮೊದಲ ಅರ್ಧಶತಕ ಸಿಡಿಸಿದ ಅಪರಾಜಿತ್ ಔಟಾಗದೆ 85 ರನ್(174 ಎಸೆತ, 10 ಬೌಂಡರಿ, 1 ಸಿಕ್ಸರ್) ಹಾಗೂ ಬದರಿನಾಥ್ ಔಟಾಗದೆ 61 ರನ್ (148 ಎಸೆತ, 4 ಬೌಂಡರಿ, 1 ಸಿಕ್ಸ್) ಗಳಿಸಿ ಕರ್ನಾಟಕಕ್ಕೆ ತಲೆನೋವಾಗಿದ್ದಾರೆ.

ಉಳಿದಂತೆ, ಹೃಷಿಕೇಶ್ ಕಾನಿಟ್ಕರ್ 119 ರನ್ ಹಾಗೂ ವಿನೀತ್ ಸಕ್ಸೇನಾ 114 ರನ್ ಗಳಿಸಿ ಮೊದಲ ದಿನವೇ ಶತಕ ಬಾರಿಸಿ ರಾಜಸ್ಥಾನ ತಂಡದ ಮೊತ್ತ 269/2 ರನ್ ಗೆ ಏರಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿ ಹೈದರಾಬಾದ್ ಪರ ಆಡುತ್ತಿರುವ ವಿವಿಎಸ್ ಲಕ್ಷ್ಮಣ್ ಮಧ್ಯಪ್ರದೇಶ ವಿರುದ್ಧ ಔಟಾಗದೆ 70 ರನ್ ಗಳಿಸಿದ್ದಾರೆ.

ಎರಡನೇ ಸುತ್ತಿನ 12 ರಣಜಿ ಪಂದ್ಯಗಳ ಸಂಕ್ಷಿಪ್ತ ಸ್ಕೋರ್ :
* ತಮಿಳುನಾಡು vs ಕರ್ನಾಟಕ, ಚೆನ್ನೈ
ತಮಿಳುನಾಡು 260/2, 90 ಓವರ್ಸ್(ಎಸ್ ಬದರೀನಾಥ್ 61, ಬಾಬಾ ಅಪರಾಜಿತ್ 85, ಮುಕುಂದ್ 51, ಕಾರ್ತಿಕ್ 50)

* ರಾಜಸ್ಥಾನ vs ಮುಂಬೈ, ಜೈಪುರ
ರಾಜಸ್ಥಾನ 269/2, 90 ಓವರ್ಸ್(ಹೃಷಿಕೇಶ್ ಕಾನಿಟ್ಕರ್ 119, ವಿನೀರ್ ಸಕ್ಸೇನಾ 114 ಬ್ಯಾಟಿಂಗ್)

* ಆಂಧ್ರಪ್ರದೇಶ vs ತ್ರಿಪುರ, ಅನಂತರಪುರ
ತ್ರಿಪುರ 228/6, 90 ಓವರ್ಸ್(ಅಬ್ಬಾಸ್ ಅಲಿ 103, ಶಿವಕುಮಾರ್ 2/40, ಸೈಯದ್ ಸಹಾಬುದ್ದೀನ್ 2/44)

* ಹೈದರಾಬಾದ್ vs ಮಧ್ಯಪ್ರದೇಶ
ಹೈದರಾಬಾದ್ 159/2, 54 ಓವರ್ಸ್(ವಿವಿಎಸ್ ಲಕ್ಷ್ಮಣ್ 70 ಬ್ಯಾಟಿಂಗ್, ಹನುಮ ವಿಹಾರಿ 76 ಬ್ಯಾಟಿಂಗ್)

* ಬರೋಡಾ vs ವಿದರ್ಭ, ವಡೋದರ
ವಿದರ್ಭ 219/8, 88 ಓವರ್ಸ್ (ಹೆಮಾಂಗ್ ಬದಾನಿ 85 ಬ್ಯಾಟಿಂಘ್, ಶಲಭ್ ಶ್ರೀವಾಸ್ತವ 63, ಫಿರ್ದೂಶ್ ಭಾಜಾ 3/36, ಮುರ್ತಜಾ ವಹೋರಾ 2/85)

* ದೆಹಲಿ vs ಒಡಿಸ್ಸಾ, ದೆಹಲಿ
ಒಡಿಸ್ಸಾ 143 ಆಲೌಟ್, 47.1 ಓವರ್ಸ್ ( ನಟರಾಜ್ ಬೆಹೆರಾ 35, ಮನನ್ ಶರ್ಮ 4/30, ಪವನ್ ಸುಯಾಲ್ 3/43), ದೆಹಲಿ 62/3, 31 ಓವರ್ಸ್(ಬಸಂತ್ ಮೊಹಾಂತಿ 2/21)


* ಗೋವಾ vs ಜಮ್ಮು ಮತ್ತು ಕಾಶ್ಮೀರ, ಗೋವಾ
ಜಮ್ಮು ಮತ್ತು ಕಾಶ್ಮೀರ 196/7, 91 ಓವರ್ಸ್ (ಪರ್ವೇಜ್ ರಸೂಲ್ 90 ಬ್ಯಾಟಿಂಗ್, ಇಯಾನ್ ದೇವ್ ಸಿಂಗ್ 36, ಶೇರ್ ಯಾದವ್ 2/23, ಸೌರಭ್ ಬಂಡೇಕರ್ 2/48)


* ಗುಜರಾತ್ vs ಸೌರಾಷ್ಟ್ರ, ಸೂರತ್
ಗುಜರಾತ್ 278/5, 90 ಓವರ್ಸ್ (ಸಮಿತ್ ಪಟೇಲ್ 61, ಪಾರ್ಥೀವ್ ಪಟೇಲ್ 56, ಭಾರ್ಗವ್ ಮೆರೈ 44, ಮನ್ ಪ್ರೀತ್ ಜುನೇಜಾ 67 ಬ್ಯಾಟಿಂಗ್, ರವೀಂದ್ರ ಜಡೇಜಾ 2/62)


* ಹಿಮಾಚಲ ಪ್ರದೇಶ vs ಸರ್ವೀಸಸ್, ಹಿಮಾಚಲ ಪ್ರದೇಶ
ಸರ್ವೀಸಸ್ 290/6 (ಪ್ರತೀಕ್ ದೇಸಾಯಿ 61, ಸೂಮಿಕ್ ಚಟರ್ಜಿ 54, ರಿಷಿ ಧವನ್ 2/70, ಪ್ರಶಾಂತ್ ಛೋಪ್ರಾ 2/26)

* ಜಾರ್ಖಂಡ್ vs ಅಸ್ಸಾಂ, ಜಮ್ಶೇಡ್ ಪುರ
ಅಸ್ಸಾಂ 179 ರನ್ ಗೆ ಅಲೌಟ್, 88.1 ಓವರ್ಸ್( ಹೊಕೈಟೊ ಝಿಮೊಮಿ 48, ಗೋಕುಲ್ ಶರ್ಮ 37, ಸನ್ನಿ ಗುಪ್ತ 4/56, ಶಾಬಾಜ್ ನದೀಂ 4/65)

* ಮಹಾರಾಷ್ಟ್ರ vs ಉತ್ತರಪ್ರದೇಶ, ಪುಣೆ
ಮಹಾರಾಷ್ಟ್ರ 339/3, 90 ಓವರ್ಸ್(ಕೇದರ್ ಜಾಧವ್ 102 ಬ್ಯಾಟಿಂಗ್, ಹರ್ಷದ್ ಖಡಿವಾಲೆ 68, ಸಂಗಮ್ ದಿಲಿಪ್ 80, ಅಂಕಿತ್ 60 ಬ್ಯಾಟಿಂಗ್, ಭುವನೇಶ್ವರ್ ಕುಮಾರ್ 2/48)

* ಬೆಂಗಾಳ vs ಪಂಜಾಬ್, ಚಂದೀಗಢ
ಬೆಂಗಾಳ 280/7 (ವೃದ್ಧಿಮಾನ್ ಸಹಾ 74 ಬ್ಯಾಟಿಂಗ್, ಎಲ್ ಎಸ್ ಶುಕ್ಲಾ 62, ಮನ್ ಪ್ರೀತ್ ಗೋನಿ 2/35, ಸಂದೀಪ್ ಶರ್ಮ 2/50)

ದಟ್ಸ್ ಕ್ರಿಕೆಟ್

Story first published:  Friday, November 9, 2012, 21:34 [IST]
English summary
India Under-19 World Cup 2012 winner Baba Aparajith top scored with 85 not out as Tamil Nadu called the shots against Karnataka on the opening day of their Ranji Trophy game here at MA Chidambaram Stadium here on Friday.
ಅಭಿಪ್ರಾಯ ಬರೆಯಿರಿ