Englishहिन्दीമലയാളംதமிழ்తెలుగు

ವಿಶಿಷ್ಟ ಶತಕದ ಹೊಸ್ತಿಲಲ್ಲಿ ಸೂಪರ್ ಸೆಹ್ವಾಗ್

Posted by:
Updated: Tuesday, April 23, 2013, 10:33 [IST]
 

ವಿಶಿಷ್ಟ ಶತಕದ ಹೊಸ್ತಿಲಲ್ಲಿ ಸೂಪರ್ ಸೆಹ್ವಾಗ್
 

ಬೆಂಗಳೂರು, ನ.8. ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ವೀರೆಂದರ್ ಸೆಹ್ವಾಗ್ ವಿಶಿಷ್ಟ ಸಾಧನೆ ಮಾಡಲು ಕಾತುರರಾಗಿದ್ದಾರೆ. ಭಾರತ 100 ಟೆಸ್ಟ್ ಆಡಿದ ಆಟಗಾರರ ಅಪೂರ್ವ ಕ್ಲಬ್ ಗೆ ಸೆಹ್ವಾಗ್ ಸೇರ್ಪಡೆಗೊಳ್ಳಲಿದ್ದಾರೆ.

ಇಂಗ್ಲೆಂಡ್ ವಿರುದ್ಧ ಭಾರತ ತಂಡ ಅಹಮದಾಬಾದಿನಲ್ಲಿ ನ.15 ರಂದು ಮೊದಲ ಟೆಸ್ಟ್ ಪಂದ್ಯ ಆಡಲಿದೆ. ಒಟ್ಟು ನಾಲ್ಕು ಟೆಸ್ಟ್ ಪಂದ್ಯಗಳು ಸರಣಿಯಲ್ಲಿದೆ. ಈವರೆಗೂ 98 ಟೆಸ್ಟ್ ಪಂದ್ಯಗಳನ್ನಾಡಿರುವ ಸೆಹ್ವಾಗ್ ಇನ್ನೆರಡು ಟೆಸ್ಟ್ ಗಳನ್ನು ಇದೇ ಸರಣಿಯಲ್ಲಿ ಆಡುವ ಅವಕಾಶ ಹೊಂದಿದ್ದಾರೆ.

ನ.15 ಹಾಗೂ ನ.23 ರ ಮುಂಬೈ ಟೆಸ್ಟ್ ಪಂದ್ಯದಲ್ಲಿ ಸೆಹ್ವಾಗ್ ಆಡಿದರೆ 100 ಟೆಸ್ಟ್ ಆಡಿದ ಆಟಗಾರರ ಕ್ಲಬ್ ಸೇರಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸೆಹ್ವಾಗ್, "ದೇಶದ ಪರ ಆಡುವುದೇ ದೊಡ್ಡ ಕನಸು. ಅದಕ್ಕಿಂತ ದೊಡ್ಡ ಕನಸು ಉತ್ತಮ ಆಟ ಪ್ರದರ್ಶಿಸುವುದು ಹಾಗೂ ತಂಡದ ಗೆಲುವಿನಲ್ಲಿ ಪಾತ್ರವಹಿಸುವುದು ಮುಖ್ಯ. ಇದೆಲ್ಲಕ್ಕಿಂತ ಮುಖ್ಯವಾದದು ಭಾರತದ ಪರ 100 ಟೆಸ್ಟ್ ಆಡುವುದು. ಈ ಕ್ಷಣ ಶೀಘ್ರದಲ್ಲೇ ಹತ್ತಿರವಾಗುತ್ತಿರುವುದು ನನ್ನ ಉತ್ಸಾಹ ಹೆಚ್ಚಿಸಿದೆ" ಎಂದು ಸೆಹ್ವಾಗ್ ಹೇಳಿದ್ದಾರೆ.

ಭಾರತದ ಪರ 190 ಟೆಸ್ಟ್ ಪಂದ್ಯಗಳನ್ನಾಡುವ ಮೂಲಕ ಸಚಿನ್ ತೆಂಡೂಲ್ಕರ್ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ನಂತರ ರಾಹುಲ್ ದ್ರಾವಿಡ್ (163) ಹಾಗೂ ವಿವೆಸ್ ಲಕ್ಷ್ಮಣ್ (134) ಇದ್ದಾರೆ.

34 ವರ್ಷದ ಬಲಗೈ ಬ್ಯಾಟ್ಸ್ ಮನ್ ವೀರೆಂದರ್ ಸೆಹ್ವಾಗ್ ಈ ಸಾಧನೆ ಮಾಡಿದ ಮೊದಲ ದೆಹಲಿ ಆಟಗಾರ ಎಂಬ ಕೀರ್ತಿ ಗಳಿಸಲಿದ್ದಾರೆ.

ನವೆಂಬರ್ 3, 2001 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಆಡಿದ ಸೆಹ್ವಾಗ್ ಆರನೇ ಕ್ರಮಾಂಕದಲ್ಲಿ ಆಡಿದರೂ ಶತಕ ಸಿಡಿಸಿ ಅಪೂರ್ವ ದಾಖಲೆ ಬರೆದಿದ್ದರು.

ಅಲ್ಲಿಂದ ಮೊದಲುಗೊಂಡು ಟೆಸ್ಟ್ ಕ್ರಿಕೆಟ್ ನ ಆಟದ ಶೈಲಿ ಬದಲಿಸಿದ ಸೆಹ್ವಾಗ್ ಹಲವು ಆಕರ್ಷಕ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ.

ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದ ಸೆಹ್ವಾಗ್ ಅವರು ರಣಜಿ ಕ್ರಿಕೆಟ್ ನಲ್ಲಿ ಉತ್ತರಪ್ರದೇಶದ ವಿರುದ್ಧ ಭರ್ಜರಿ ಶತಕ ಸಿಡಿಸಿ ಮತ್ತೆ ಲಯಕ್ಕೆ ಮರಳಿದ್ದಾರೆ.

ಆದರೆ, ಟೆಸ್ಟ್ ಕ್ರಿಕೆಟ್ ನಲ್ಲಿ ಅಹಮದಾಬಾದಿನಲ್ಲಿ ನ್ಯೂಜಿಲೆಂಡ್ ವಿರುದ್ಧ 2010 ರಲ್ಲಿ ಶತಕ ಸಿಡಿಸಿದ್ದೇ ಕೊನೆ. ಮತ್ತೊಮ್ಮೆ ಅದೇ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಆಡಲಿರುವ ಸೆಹ್ವಾಗ್ ಶತಕ ಗಳಿಸುವರೇ ಕಾದು ನೋಡಬೇಕಿದೆ.

ಸೆಹ್ವಾಗ್ ಅವರು 98 ಟೆಸ್ಟ್ ಗಳಲ್ಲಿ 50.64 ರನ್ ಸರಾಸರಿಯಂತೆ 8,306 ರನ್ ಗಳಿಸಿದ್ದು 22 ಶತಕ ಬಾರಿಸಿದ್ದಾರೆ. ತ್ರಿಶತಕ ಬಾರಿಸಿದ ಏಕೈಕ ಭಾರತೀಯ ಕ್ರಿಕೆಟರ್ ಆಗಿರುವ ಸೆಹ್ವಾಗ್ ಎರಡು ಬಾರಿ 300 ರನ್ ಗಡಿ ದಾಟಿದ್ದಾರೆ. 319 ವೈಯಕ್ತಿಕ ಗರಿಷ್ಠ ಮೊತ್ತದ ಜೊತೆಗೆ 309 ರನ್ ಹಾಗೂ 293 ರನ್ ಅವರ ಪಟ್ಟಿಯಲ್ಲಿದೆ.

100 ಟೆಸ್ಟ್ ಆಡಿದ ಭಾರತೀಯರ ಪಟ್ಟಿ:
* ಸಚಿನ್ ತೆಂಡೂಲ್ಕರ್ : 190
* ರಾಹುಲ್ ದ್ರಾವಿಡ್ : 163
* ವಿವಿಎಸ್ ಲಕ್ಷ್ಮಣ್ : 134
* ಅನಿಲ್ ಕುಂಬ್ಳೆ : 132
* ಕಪಿಲ್ ದೇವ್ : 131
* ಸುನಿಲ್ ಗವಾಸ್ಕರ್ : 121
* ದಿಲೀಪ್ ವೆಂಗ್ ಸರ್ಕಾರ್ : 116
* ಸೌರವ್ ಗಂಗೂಲಿ: 113

ದಟ್ಸ್ ಕ್ರಿಕೆಟ್

Story first published:  Thursday, November 8, 2012, 22:28 [IST]
English summary
Virender Sehwag is set to join India's 100-Test club during the England series which starts in Ahmedabad on November 15. Sehwag, who has so far played 98 Tests, will reach the milestone on November 23 in the second Test in Mumbai if he plays both first and second Tests.
ಅಭಿಪ್ರಾಯ ಬರೆಯಿರಿ