Englishहिन्दीമലയാളംதமிழ்తెలుగు

ಭಾರತ ಸಂಜಾತ ರಾಬಿನ್ ಜಾಕ್ಮನ್ ಗೆ ಕ್ಯಾನ್ಸರ್

Posted by:
Updated: Wednesday, November 7, 2012, 14:23 [IST]
 

ಭಾರತ ಸಂಜಾತ ರಾಬಿನ್ ಜಾಕ್ಮನ್ ಗೆ ಕ್ಯಾನ್ಸರ್
 

ಜೋಹಾನ್ಸ್ ಬರ್ಗ್, ನ.7: ಕ್ರಿಕೆಟರ್ಸ್ ಹಾಗೂ ಕಾಮೆಂಟೇಟರ್ ಗಳು ಒಬ್ಬೊಬ್ಬರಾಗಿ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ. ಟೋನಿ ಗ್ರೇಗ್, ಮಾರ್ಟಿನ್ ಕ್ರೋವ್ ನಂತರ ದಕ್ಷಿಣ ಆಫ್ರಿಕಾದ ಕಾಮೆಂಟೇಟರ್ ರಾಬಿನ್ ಜಾಕ್ಮನ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.

ಶ್ವಾಸಕೋಶದ ಕ್ಯಾನ್ಸರ್ ನಿಂದ ರಾಬಿನ್ ಜಾಕ್ಮನ್ ಬಳಲುತ್ತಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಹೇಳಿದೆ. ಕ್ಯಾನ್ಸರ್ ಗೆಡ್ಡೆಯನ್ನು ತೆಗೆಯಲು ಸುಮಾರು 7 ವಾರಗಳ ಕಾಲ ರೆಡಿಯೋ ಥೆರಪಿಗೆ ರಾಬಿನ್ ಒಳಗಾಗಬೇಕಾಗುತ್ತದೆ. ನಂತರ ಸುಮಾರು 4 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಅಗತ್ಯವಿರುತ್ತದೆ.

67 ವರ್ಷದ ರಾಬಿನ್ ಅವರು "It's not the prettiest, but I got it early and I'm confident I'll be fine," ಎಂದು ಪ್ರತಿಕ್ರಿಯಿಸಿದ್ದಾರೆ.

ಮಾಜಿ ಇಂಗ್ಲೆಂಡ್ ನಾಯಕ ಜೆಫ್ ಬಾಯ್ಕಾಟ್ ಅವರು ಕ್ಯಾನ್ಸರ್ ರೋಗದಿಂದ ಹೊರಬಂದ ಪ್ರಕ್ರಿಯೆ ಅನೇಕ ರೊಗಿಗಳಿಗೆ ಹೊಸ ಚೈತನ್ಯ ತುಂಬಿತ್ತು. ನಂತರ ಭಾರತದ ಆಲ್ ರೌಂಡರ್ ಯುವರಾಜ್ ಸಿಂಗ್ ಅವರು ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದು ಈಗ ಇತಿಹಾಸ.

ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಗೆಡ್ಡೆಯನ್ನು ಗುರುತಿಸಿ ತೆಗೆದು ಹಾಕಿದರೆ, ತೊಂದರೆ ಇರುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ.

ಇಂಗ್ಲೆಂಡಿನ ಮಾಜಿ ಆಟಗಾರ ಜೆಫ್ರಿ ಬಾಯ್ಕಾಟ್, ಭಾರತದ ಆಲ್ ರೌಂಡರ್ ಯುವರಾಜ್ ಸಿಂಗ್ ನಂತರ ಇತ್ತೀಚೆಗೆ ನ್ಯೂಜಿಲೆಂಡ್ ನ ಮಾಜಿ ಕ್ರಿಕೆಟರ್ ಮಾರ್ಟಿನ್ ಕ್ರೋವ್ ಅವರು ಕ್ಯಾನ್ಸರ್ ಪೀಡಿತರಾಗಿರುವ ಸುದ್ದಿ ಹೊರಬಿದ್ದಿತ್ತು. ಈಗ ಟೋನಿ ಗ್ರೆಗ್ ಅವರಿಗೆ ಕ್ಯಾನ್ಸರ್ ಇರುವುದು ದೃಢಪಟ್ಟಿದೆ.

ಭಾರತದ ನಂಟು: ರಾಬಿನ್ ಜಾಕ್ಮನ್ ಭಾರತದ ಪಂಜಾಬ್ ಪ್ರಾಂತ್ಯದಲ್ಲಿ ಜನಸಿದರೂ ಬೆಳೆದಿದ್ದು ಇಂಗ್ಲೆಂಡ್ ನಲ್ಲಿ ನಂತರ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದರು. ರೋಡೆಶಿಯಾ(ಈಗಿನ ಜಿಂಬಾಬ್ವೆ) ಪರ ಆಡಿದ್ದರು ಹಾಗೂ ಕೋಚ್ ಆಗಿದ್ದರು. ವೆಸ್ಟರ್ನ್ ಪ್ರಾವಿನ್ಸ್ ಪರ ಆಡಿದ ನಂತರ ಇಂಗ್ಲೆಂಡ್ ಕೌಂಟಿಗೆ 1966ರಲ್ಲಿ ಕಾಲಿಟ್ಟರು.

ಸರ್ರೆ ಪರ ಸುಮಾರು 16 ವರ್ಷಗಳ ಕಾಲ ಅಡಿದ ರಾಬಿನ್, ಈ ಮಧ್ಯದಲ್ಲಿ 1977-72 ರಲ್ಲಿ ವೆಸ್ಟರ್ನ್ ಪ್ರಾವಿನ್ಸ್ ಹಾಗೂ 1972-73 ರಲ್ಲಿ ಅಂದಿನ ರೋಡೆಶಿಯಾ ಪರ ಆಡಿದ್ದರು. 1979-80ರಲ್ಲೂ ಜಿಂಬಾಬ್ವೆ ಪರ ಆಡಿದರು.

1980-81 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿದ ಇಂಗ್ಲೆಂಡ್ ತಂಡವನ್ನು ರಾಬಿನ್ ಜಾಕ್ಮನ್ ಸೇರಿಕೊಂಡರು. ಆದರೆ, ಗಯಾನಾ ಸರ್ಕಾರ ದಕ್ಷಿಣ ಆಫ್ರಿಕಾದ ವರ್ಣಬೇಧ ನೀತಿಯನ್ನು ಮುಂದಿಟ್ಟುಕೊಂಡು ರಾಬಿನ್ ಅವರ ವೀಸಾ ರದ್ದು ಮಾಡಿದರು.

ರಾಜಕೀಯ ಗೊಂದಲ ಏಕೆ ಎಂದು ಬ್ರಿಟಿಷ್ ಹಾಗೂ ವೇಲ್ಸ್ ಕ್ರಿಕೆಟ್ ಬೋರ್ಡ್ ರಾಬಿನ್ ಅವರನ್ನು ಕೈಬಿಟ್ಟಿತು.1981-82ರ ಅವಧಿಯಲ್ಲಿ ಇಂಗ್ಲೆಂಡ್ ಪರ 4 ಟೆಸ್ಟ್ ಆಡಿ 14 ವಿಕೆಟ್ ಗಳಿಸಿದ್ದಾರೆ. 1974 ರಿಂದ 1983ರ ಅವಧಿಯಲ್ಲಿ 15 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ನಿವೃತ್ತಿ ನಂತರ ದಕ್ಷಿಣ ಆಫ್ರಿಕಾದ ಮಾಧ್ಯಮದಲ್ಲಿ ತೊಡಗಿಕೊಂಡಿದ್ದರು ಹಾಗೂ ಕ್ರಿಕೆಟ್ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

Story first published:  Wednesday, November 7, 2012, 13:25 [IST]
English summary
After Tony Greig and Martin Crowe, England cricketer turned commentator has been diagnosed with cancer and is expected to undergo seven weeks of radiotherapy and two operations to remove malign tumours.
ಅಭಿಪ್ರಾಯ ಬರೆಯಿರಿ