Englishहिन्दीമലയാളംதமிழ்తెలుగు

ಪೂಜಾರಾಗೆ ಶುಭಕಾಲ ಕೂಡಿ ಬಂದೈತೆ

Posted by:
Updated: Wednesday, November 7, 2012, 17:11 [IST]
 

ರಾಜ್ ಕೋಟ್, ನ.7: ಭಾರತ ತಂಡ ಹೊಸ ಭರವಸೆಯ ಆಟಗಾರ ಚೇತೇಶ್ವರ ಪೂಜಾರಾಗೆ ಕಲ್ಯಾಣ ಯೋಗ ಕೂಡಿ ಬಂದಿದೆ.

ಚೇತೇಶ್ವರ್ ಪೂಜಾರಾ ಅವರು ಪೂಜಾ ಪಬಾರಿ ಅವರ ಮದುವೆ ನಿಶ್ಚಿತಾರ್ಥ ಮಂಗಳವಾರ(ನ.6) ರಾಜ್ ಕೋಟ್ ನಲ್ಲಿ ಸಾಂಗವಾಗಿ ನಡೆದಿದೆ.

ಪೂಜಾರಾಗೆ ಶುಭಕಾಲ ಕೂಡಿ ಬಂದೈತೆ

ಅತ್ಯಂತ ಖಾಸಗಿಯಾಗಿ ನಡೆದ ಈ ಸಮಾರಂಭದಲ್ಲಿ ಸೌರಾಷ್ಟ್ರದ ರಣಜಿ ನಾಯಕ ಜಯದೇವ್ ಸಿಂಗ್ ಮಾತ್ರ ಪಾಲ್ಗೊಂಡಿದ್ದರು. ಉಳಿದಂತೆ ಕ್ರಿಕೆಟ್ ರಂಗದ ಯಾವ ಆಟಗಾರರು ಕಂಡು ಬಂದಿರಲಿಲ್ಲ ಎಂದು ಅಹಮದಾಬಾದ್ ಮಿರರ್ ವರದಿ ಮಾಡಿದೆ.

ಮನೆ ಮಂದಿ ಹಾಗೂ ಕೆಲವು ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥವನ್ನು ಸಿಟಿ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು ಎಂದು ಪೂಜಾರಾ ತಂದೆ ಅರವಿಂದ್ ಸುದ್ದಿ ಗಾರರಿಗೆ ತಿಳಿಸಿದ್ದಾರೆ.

ಪೂಜಾರಾರನ್ನು ಕೈ ಹಿಡಿಯಲಿರುವ ಗುಜರಾತ್ ಮೂಲದ 22 ವರ್ಷದ ಪೂಜಾ ಎಂಬಿಎ ಓದಿದ್ದಾರೆ ಎಂದು ತಿಳಿದು ಬಂದಿದೆ. ಇದು ಅರೇಂಜ್ ಮ್ಯಾರೇಜ್ ಆಗಿದ್ದು, ಎರಡು ಕುಟುಂಬದವರು ಸಂಪೂರ್ಣ ಒಪ್ಪಿಗೆ ಸಿಕ್ಕಿದೆ.

ಮದುವೆ ಸದ್ಯಕ್ಕಿಲ್ಲ: ನ,15 ರಂದು ಇಂಗ್ಲೆಂಡ್ ವಿರುದ್ಧ ಅಹಮದಾಬಾದಿನಲ್ಲಿ ಮೊದಲ ಟೆಸ್ಟ್ ಆಡಲು ಪೂಜಾರಾ ಸಿದ್ಧತೆ ನಡೆಸಿದ್ದಾರೆ. ಜನವರಿ ತನಕ ಕ್ರಿಕೆಟ್ ಮೈದಾನ ಬಿಟ್ಟು ಪೂಜಾರಾ ಕದಲುವಂತಿಲ್ಲ. ಇಂಗ್ಲೆಂಡ್ ವಿರುದ್ಧ ಮುಂಬೈ 'ಎ' ಪಂದ್ಯದಲ್ಲೂ ಪೂಜಾರಾ ಆಡಿದ್ದರೂ, ಹೀಗಾಗಿ ಪ್ರತಿ ಪಂದ್ಯವನ್ನು ಗಂಭೀರವಾಗಿ ಪೂಜಾರಾ ತೆಗೆದುಕೊಂಡಿದ್ದಾರೆ. ಚೇತೇಶ್ವರ್ ಪೂಜಾರಾ ಹಾಗೂ ಪೂಜಾ ಅವರಿಗೆ ದಟ್ಸ್ ಕ್ರಿಕೆಟ್ ತಂಡ ಶುಭ ಹಾರೈಸುತ್ತದೆ.

Story first published:  Wednesday, November 7, 2012, 17:05 [IST]
English summary
India batsman Cheteshwar Pujara got engaged to Pooja Pabari on Tuesday in Rajkot. The engagement ceremony was attended by family members and Saurashtra captain Jaydev Shah, the only cricketer to be present, a report in Ahmedabad Mirror newspaper said.
ಅಭಿಪ್ರಾಯ ಬರೆಯಿರಿ