Englishहिन्दीമലയാളംதமிழ்తెలుగు

ನ.15 ಸಚಿನ್ ರಿಂದ ಹೊಸ ದಾಖಲೆ ನಿರ್ಮಾಣ

Posted by:
Updated: Tuesday, November 6, 2012, 13:20 [IST]
 

ಬೆಂಗಳೂರು, ನ.6: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಆಡಲು ಸಚಿನ್ ತೆಂಡೂಲ್ಕರ್ ಮೈದಾನಕ್ಕೆ ಇಳಿಯುತ್ತಿದ್ದಂತೆ ಹೊಸ ದಾಖಲೆ ನಿರ್ಮಾಣವಾಗಲಿದೆ. ಪ್ರವಾಸಿ ಇಂಗ್ಲೆಂಡ್ ವಿರುದ್ಧ ನ.15 ರಂದು ಅಹಮದಾಬಾದಿನಲ್ಲಿ ಭಾರತ ತಂಡ ಟೆಸ್ಟ್ ಪಂದ್ಯವಾಡಲಿದೆ.

ನ.15 ರಂದು ಸಚಿನ್ ತೆಂಡೂಲ್ಕರ್ ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ 23ನೇ ವರ್ಷಕ್ಕೆ ಕಾಲಿರಿಸಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 23 ವರ್ಷ ಕಾಲ ಸಮರ್ಥವಾಗಿ ಕ್ರಿಕೆಟ್ ಆಡಿದ ವಿಶಿಷ್ಟ ಸಾಧನೆ ಸಚಿನ್ ಹೆಸರಿನಲ್ಲಿ ದಾಖಲಾಗಲಿದೆ.

ನವೆಂಬರ್ 15, 1989ರಂದು ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ ರಂಗಕ್ಕೆ ಸಚಿನ್ ಕಾಲಿರಿಸಿದ್ದರು. ನಂತರ 190 ಟೆಸ್ಟ್ ಕ್ರಿಕೆಟ್ ಆಡಿ, ಪ್ರೇಕ್ಷಕರನ್ನು ರಂಜಿಸಿದ್ದಲ್ಲದೆ ಅನೇಕಾನೇಕ ದಾಖಲೆಗಳ ಧೂಳಿಪಟ ಮಾಡಿದ್ದಾರೆ.

* ತ್ರಿಶತಕ ಸಾಧಕರ ಸಂಪೂರ್ಣ ಪಟ್ಟಿ ನೋಡಿ
* ಸಚಿನ್ ತೆಂಡೂಲ್ಕರ್ 100 ಶತಕಗಳ ಪಟ್ಟಿ

39 ವರ್ಷದ ಕ್ರಿಕೆಟರ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಆಸ್ಟ್ರೇಲಿಯಾದ ಅತ್ಯುನ್ನತ ಗೌರವ ಪಾತ್ರವಾಗಲಿದೆ.

ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಜಗತ್ತಿನಲ್ಲಿ ದೇವರಂತೆ ಕಾಣಲಾಗುತ್ತದೆ. 190 ಟೆಸ್ಟ್ ಗಳಲ್ಲಿ ಸುಮಾರು 15,533 ರನ್ ಹಾಗೂ 463 ಏಕದಿನ ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದಾರೆ.

2008ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರೀಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಕೂಡಾ ಸಚಿನ್ ಅವರಿಗೆ ಲಭಿಸಿದೆ.

ಒಟ್ಟಾರೆ ಟೆಸ್ಟ್ ನಲ್ಲಿ 51ಶತಕಗಳು ಬಂದಿದೆ. ನಿವೃತ್ತಿ ಅಂಚಿನಲ್ಲಿರುವ ಸಚಿನ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ದಿನಗಟ್ಟಲೆ ಕ್ರೀಸ್ ನಲ್ಲಿ ನಿಂತು 300 ರನ್ ಗಳಿಸಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆಯಾಗಿದೆ.

Story first published:  Tuesday, November 6, 2012, 13:17 [IST]
English summary
When Sachin Tendulkar walks out to play the first Test against England on November 15 in Ahmedabad, the Master Blaster will, on that day, complete 23 years of international cricket.
ಅಭಿಪ್ರಾಯ ಬರೆಯಿರಿ