Englishहिन्दीമലയാളംதமிழ்తెలుగు

ರಣಜಿ : ಸೂಪರ್ ಶತಕ ಸಿಡಿಸಿದ ಸೆಹ್ವಾಗ್

Posted by:
Updated: Monday, November 5, 2012, 12:44 [IST]
 

ರಣಜಿ : ಸೂಪರ್ ಶತಕ ಸಿಡಿಸಿದ ಸೆಹ್ವಾಗ್
 

ಗಾಜಿಯಾಬಾದ್, ನ.5: ನಿವೃತ್ತಿ ಸುದ್ದಿ, ಗಾಯದ ಸಮಸ್ಯೆ ಜಂಜಾಟಗಳ ಮಧ್ಯೆ ಸ್ಫೋಟಕ ಬ್ಯಾಟ್ಸ್ ಮನ್ ವಿರೇಂದರ್ ಸೆಹ್ವಾಗ್ ಸೋಮವಾರ(ನ.5)ಭರ್ಜರಿ ಶತಕ ಸಿಡಿಸಿದ್ದಾರೆ.

ಉತ್ತರ ಪ್ರದೇಶ ವಿರುದ್ಧದ ರಣಜಿ ಕ್ರಿಕೆಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ವಿಫಲರಾಗಿದ್ದ ಸೆಹ್ವಾಗ್, ಎರಡನೇ ಇನ್ನಿಂಗ್ಸ್ ನಲ್ಲಿ 100 ರನ್ ಗಡಿ ದಾಟಿದ್ದಾರೆ.

ದೆಹಲಿ ಹಾಗೂ ಉತ್ತರ ಪ್ರದೇಶ ನಡುವಿನ ರಣಜಿ ಪಂದ್ಯ ಡ್ರಾನತ್ತ ಸಾಗಿದ್ದರೂ ಸೆಹ್ವಾಗ್ ಭರ್ಜರಿ ಆಟ ಪ್ರೇಕ್ಷಕರನ್ನು ರಂಜಿಸಿದೆ. 19 ಸೆಹ್ವಾಗ್ ಬೌಂಡರಿ ಚೆಚ್ಚಿದ್ದಾರೆ.

ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಆಯ್ಕೆ ಸೋಮವಾರ (ನ.5) ನಡೆಯಲಿದ್ದು, ಸೆಹ್ವಾಗ್ ಆಟ ಆಯ್ಕೆದಾರರ ಗಮನ ಸೆಳೆದಿರುವುದರಲ್ಲಿ ಅನುಮಾನವೇ ಇಲ್ಲ.

ಸೆಹ್ವಾಗ್ ಜೊತೆ ಗೌತಮ್ ಗಂಭೀರ್ ಕೂಡಾ ಸತತ ವೈಫಲ್ಯ ಕಂಡಿರುವುದರಿಂದ ಟೀಂ ಇಂಡಿಯಾ ಸೇರಲು ಆಯ್ಕೆದಾರರ ಕೃಪೆ ಅಗತ್ಯವಿದೆ.

ಬೆರಳಿಗೆ ಗಾಯ ಮಾಡಿಕೊಂಡಿದ್ದ ಸೆಹ್ವಾಗ್ ಅವರು ದೆಹಲಿ ಪರ ಎರಡನೇ ಇನ್ನಿಂಗ್ಸ್ ನಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲಿಲ್ಲ. 6ನೇ ವಿಕೆಟ್ ಪತನ ನಂತರ ಕ್ರೀಸ್ ಗೆ ಬಂದ ಸೆಹ್ವಾಗ್ ಸ್ಫೋಟಕ ಶತಕ ಸಿಡಿಸಿದರು.

ಸಂಕ್ಷಿಪ್ತ ಸ್ಕೋರ್ :
ದೆಹಲಿ ಮೊದಲ ಇನ್ನಿಂಗ್ಸ್ : 235/10
ಎರಡನೇ ಇನ್ನಿಂಗ್ಸ್ 308/7 ಪಂದ್ಯ ನಡೆಯುತ್ತಿದೆ
ಉತ್ತರ ಪ್ರದೇಶ ಮೊದಲ ಇನ್ನಿಂಗ್ಸ್ : 403/10

Story first published:  Monday, November 5, 2012, 12:40 [IST]
English summary
Virender Sehwag returned to form with a century for Delhi against Uttar Pradesh in Ranji Trophy on Monday. Sehwag is still at the crease having reached 100. The match is headed for a draw on the fourth and final day.
ಅಭಿಪ್ರಾಯ ಬರೆಯಿರಿ