Englishहिन्दीമലയാളംதமிழ்తెలుగు

ಇಂಗ್ಲೆಂಡ್ ವಿರುದ್ಧ ಭಾರತ ; ಟೆಸ್ಟ್ ತಂಡ ಪ್ರಕಟ

Posted by:
Updated: Monday, November 5, 2012, 17:28 [IST]
 

ಮುಂಬೈ, ನ.5: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾವನ್ನು ಬಿಸಿಸಿಐ ಆಯ್ಕೆ ಸಮಿತಿ ಸೋಮವಾರ(ನ.5) ಮಧ್ಯಾಹ್ನ ಪ್ರಕಟಿಸಿದೆ.

ಸಂದೀಪ್ ಪಾಟೀಲ್ ನೇತೃತ್ವದ ಹೊಸ ಆಯ್ಕೆದಾರರ ಸಮಿತಿ ನಡೆಸಿದ ಸಭೆಯಲ್ಲಿ ನಾಯಕ ಎಂಎಸ್ ಧೋನಿ ಕೂಡಾ ಪಾಲ್ಗೊಂಡಿದ್ದರು.

ಇಂಗ್ಲೆಂಡ್ ವಿರುದ್ಧ ಭಾರತ ; ಟೆಸ್ಟ್ ತಂಡ ಪ್ರಕಟ

ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಹಾಗೂ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ತಂಡದಲ್ಲಿ 3 ಸ್ಪಿನ್ನರ್ಸ್, 3 ವೇಗಿಗಳು ಹಾಗೂ 9 ಬ್ಯಾಟ್ಸ್ ಮನ್ ಗಳಿಗೆ ಸ್ಥಾನ ಕಲ್ಪಿಸಲಾಗಿದೆ.

ಸುರೇಶ್ ರೈನಾ, ಎಸ್ ಬದರೀನಾಥ್ ಹಾಗೂ ಪಿಯೂಶ್ ಚಾವ್ಲಾ ಅವರನ್ನು ತಂಡದಿಂದ ಕೈಬಿಡಲಾಗಿದೆ. ಮನೋಜ್ ತಿವಾರಿ ಅವರಿಗೆ ಆಯ್ಕೆದಾರರ ಕೃಪೆ ಸಿಕ್ಕಿಲ್ಲ.

ಬೆಂಗಾಳ ರಣಜಿ ತಂಡದ ನಾಯಕ ಆಲ್ ರೌಂಡರ್ ಮನೋಜ್ ತಿವಾರಿ, ಆಲ್ ರೌಂಡರ್ ಯುವರಾಜ್ ಸಿಂಗ್ ಹಾಗೂ ಭಾರತ 'ಎ' ತಂಡದ ನಾಯಕ ಸುರೇಶ್ ರೈನಾ ಅವರ ನಡುವೆ ನಂ.6ನೇ ಸ್ಥಾನಕ್ಕೆ ಪೈಪೋಟಿ ನಡೆದಿತ್ತು, ಆಯ್ಕೆದಾರರ ಕೃಪೆ ಯಾರಿಗೆ ಸಿಗಲಿದೆ ಎಂಬುದು ಕುತೂಹಲಕಾರಿಯಾಗಿತ್ತು.

ದುಲೀಪ್ ಟ್ರೋಫಿಯಲ್ಲಿ ದ್ವಿಶತಕ ಬಾರಿಸಿದ್ದ ಯುವರಾಜ್ ಸಿಂಗ್ ಅಂತಿಮವಾಗಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಯುವರಾಜ್ ಸಿಂಗ್ 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೋಲ್ಕತ್ತಾದಲ್ಲಿ ಕೊನೆಯ ಬಾರಿಗೆ ಟೆಸ್ಟ್ ಪಂದ್ಯ ಆಡಿದ್ದರು. ಹರ್ಭಜನ್ ಸಿಂಗ್ ಅವರು 2011ರ ಇಂಗ್ಲೆಂಡ್ ಪ್ರವಾಸದಲ್ಲಿ ಆಗಸ್ಟ್ 1 ರಂದು ತಂಡದಲ್ಲಿ ಕಾಣಿಸಿಕೊಂಡಿದ್ದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಅಹಮದಾಬಾದಿನಲ್ಲಿ ನ.15 ರಂದು ಅರಂಭವಾಗಲಿದೆ.

ತಂಡ ಇಂತಿದೆ: ಎಂಎಸ್ ಧೋನಿ(ನಾಯಕ), ವೀರೆಂದರ್ ಸೆಹ್ವಾಗ್, ಗೌತಮ್ ಗಂಭೀರ್, ಚೇತೇಶ್ವರ್ ಪೂಜಾರಾ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಜಹೀರ್ ಖಾನ್, ಪ್ರಜ್ಞಾನ್ ಓಜಾ, ಆರ್ ಅಶ್ವಿನ್, ಉಮೇಶ್ ಯಾದವ್, ಹರ್ಭಜನ್ ಸಿಂಗ್, ಅಜಿಂಕ್ಯ ರಹಾನೆ, ಮುರಳಿ ವಿಜಯ್ ಹಾಗೂ ಇಶಾಂತ್ ಶರ್ಮ

ಪ್ರವಾಸಿ ಇಂಗ್ಲೆಂಡ್ ತಂಡ ಭಾರತದಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಅಹಮದಾಬಾದ್ (ನ.15-19), ಮುಂಬೈ(ನ. 23-27), ಕೋಲ್ಕತಾ(ಡಿ.5-9) ಹಾಗೂ ನಾಗಪುರ (ಡಿ 13-17) ಹಾಗೂ ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ಡಿ.20 ಹಾಗೂ ಡಿ.22 ರಂದು ನಡೆಯಲಿದೆ.

5 ಪಂದ್ಯಗಳ ಏಕದಿನ ಸರಣಿ ಜ.11, 2013 ರಿಂದ ಆರಂಭಗೊಳ್ಳಲಿದೆ. ಡಿ.22 ರಂದು ಇಂಗ್ಲೆಂಡ್ ತಂಡ ಸ್ವದೇಶಕ್ಕೆ ಮರಳಿದೆ. ಮತ್ತೆ ಜನವರಿ 3 ಕ್ಕೆ ಭಾರತಕ್ಕೆ ಆಗಮಿಸಿ ಸರಣಿ ಮುಂದುವರೆಸಲಿದೆ.

Story first published:  Monday, November 5, 2012, 13:16 [IST]
English summary
The new selection committee of BCCI chaired by Sandeep Patil, picked their first Test squad here on Monday. Yuvraj Singh, Harbhajan Singh and Murali Vijay made comebacks. Suresh Raina, S Badrinath and Piyush Chawla have been dropped. First Test starts in Ahmedabad on November 15.
ಅಭಿಪ್ರಾಯ ಬರೆಯಿರಿ