Englishहिन्दीമലയാളംதமிழ்తెలుగు

ಸಚಿನ್ ಅಮೋಘ ಶತಕ,ರಣಜಿಗೆ ಭರ್ಜರಿ ಆರಂಭ

Posted by:
Updated: Friday, November 2, 2012, 23:07 [IST]
 

ಮುಂಬೈ, ನ.2: ರಣಜಿ ಋತುವಿಗೆ ಭರ್ಜರಿ ಆರಂಭ ದೊರಕಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ರೈಲ್ವೇಸ್ ವಿರುದ್ಧ ಅಮೋಘ ಶತಕ ಸಿಡಿಸಿದ್ದಾರೆ.

103 ಎಸೆತಗಳಲ್ಲಿ 100 ರನ್ (14 ಬೌಂಡರಿ, 3 ಸಿಕ್ಸರ್) ಸಿಡಿಸಿ ಆಯ್ಕೆದಾರರಿಗೆ, ಟೀಕಾಕಾರರಿಗೆ ಸಚಿನ್ ತಕ್ಕ ಉತ್ತರ ನೀಡಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ರೈಲ್ವೇಸ್ ಹಾಗೂ ಮುಂಬೈ ನಡುವಿನ ಪಂದ್ಯದಲ್ಲಿ ಸಚಿನ್ 137 ರನ್ (21 ಬೌಂಡರಿ, 3 ಸಿಕ್ಸರ್) ಹಾಗೂ ಅಜಿಂಕ್ಯ ರಹಾನೆ 105* ಶತಕ ಬಾರಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಸಚಿನ್ ಅಮೋಘ ಶತಕ,ರಣಜಿಗೆ ಭರ್ಜರಿ ಆರಂಭ

ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಅತ್ಯಧಿಕ ಶತಕಗಳ ಸರ್ವಶ್ರೇಷ್ಠ ದಾಖಲೆ ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಅವರ ಹೆಸರಿನಲ್ಲಿದೆ. ಸುನಿಲ್ ಗವಾಸ್ಕರ್ 81 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ 79 ಶತಕದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

2011ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್ ನಲ್ಲಿ ಶತಕ ಬಾರಿಸಿದ್ದ ಸಚಿನ್ ಮತ್ತೊಮ್ಮೆ ಲಯ ಕಂಡುಕೊಂಡು ಉತ್ತಮ ಆಟ ಪ್ರದರ್ಶಿಸಿದರು.

39 ವರ್ಷದ ಕ್ರಿಕೆಟರ್ ಸಚಿನ್ ಅವರು ರಣಜಿಯಲ್ಲಿ ಆಡುವ ಬಗ್ಗೆ ಅಪಸ್ವರ ಎದ್ದಿತ್ತು. ಸಚಿನ್ ಶತಕದ ಮೂಲಕ ಮುಂಬರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ (ನ.15) ಪಂದ್ಯಕ್ಕೆ ಉತ್ತಮ ತಯಾರಿ ಪಡೆದಿದ್ದಾರೆ.

ಮೊದಲ ದಿನದ ಶತಕ ವೀರರು: ಸಚಿನ್ ತೆಂಡೂಲ್ಕರ್, ಇರ್ಫಾನ್ ಪಠಾಣ್, ಅಜಿಂಕ್ಯ ರಹಾನೆ, ಆದಿತ್ಯ ವಾಘ್ಮೊಡೆ, ಧೀರಜ್ ಜಾಧವ್, ಸಂಜು ಸಾಮ್ಸನ್ ಹಾಗೂ ಪಾರ್ಥೀವ್ ಪಟೇಲ್.

ದಿನದ ನಿರಾಶೆ: ವೀರೇಂದರ್ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ವಿವಿಎಸ್ ಲಕ್ಷ್ಮಣ್ ಹಾಗೂ ಉನ್ಮುಕ್ತ್ ಚಂದ್.

ದಿನದ ಬೌಲರ್: ವಿದರ್ಭದ ಉಮೇಶ್ ಯಾದವ್ ಹರ್ಯಾಣ ವಿರುದ್ಧ 5 ವಿಕೆಟ್ ಕಬಳಿಸಿದರು.

ರಣಜಿ ಋತುವಿನ ಮೊದಲ ದಿನ ಒಟ್ಟು 12 ಪಂದ್ಯಗಳು ಆರಂಭಗೊಂಡಿದ್ದು, ಸಂಕ್ಷಿಪ್ತ ಸ್ಕೋರ್ ವಿವರ ಹೀಗಿದೆ:

* ಮುಂಬೈ vs ರೈಲ್ವೇಸ್, ಮುಂಬೈ

ಮುಂಬೈ 344/4, 90 ಓವರ್ (ಸಚಿನ್ ತೆಂಡೂಲ್ಕರ್ 137, ಅಜಿಂಕ್ಯ ರಹಾನೆ 105 ಬ್ಯಾಟಿಂಗ್, ಅದಿತ್ಯ ತಾರೆ 47, ಎಪಿ ಕಥೂರಿಯಾ 2/53, ಮುರಳಿ ಕಾರ್ತಿಕ್ 1/55)

* ದೆಹಲಿ vs ಉತ್ತರ ಪ್ರದೇಶ, ಗಾಜಿಯಾಬಾದ್

ದೆಹಲಿ 235 ಆಲೌಟ್ 65.2 ಓವರ್ ಹಾಗೂ ಉತ್ತರ ಪ್ರದೇಶ 40/1, 13 ಓವರ್ (ಗೌತಮ್ ಗಂಭೀರ್ 32, ವೀರೇಂದರ್ ಸೆಹ್ವಾಗ್ 25, ಉನ್ಮುಕ್ತ್ ಚಂದ್ 28, ವಿರಾಟ್ ಕೊಹ್ಲಿ 14, ಮಿಥುನ್ ಮನಾಸ್ 42, ಪುನಿತ್ ಬಿಶ್ತ್ 52, ಸುಮಿತ್ ನರ್ವಾಲ್ 21, ಇಮ್ತಿಯಾಜ್ ಅಹ್ಮದ್ 5/59, ಪ್ರವೀಣ್ ಕುಮಾರ್3/56)

* ಬರೋಡಾ vs ಕರ್ನಾಟಕ, ಬರೋಡಾ
ಬರೋಡಾ 308/4, 90 ಓವರ್ಸ್ (ಇರ್ಫಾನ್ ಪಠಾಣ್ ಬ್ಯಾಟಿಂಗ್ 105, ಆದಿತ್ಯ ವಾಘ್ಮೋಡೆ 121*, ಸ್ಟುವರ್ಟ್ ಬಿನ್ನಿ 2/30)

* ಬೆಂಗಾಳ vs ರಾಜಸ್ಥಾನ, ಕೋಲ್ಕತ್ತಾ
ಬೆಂಗಾಳ 187/4, 59 ಓವರ್ಸ್ (ಸುಭೋಮೊಯ್ ದಾಸ್ 95, ಮನೋಜ್ ತಿವಾರಿ 42, ಪಂಕಜ್ ಸಿಂಗ್ 3/30)

* ಪಂಜಾಬ್ vs ಹೈದರಾಬಾದ್, ಮೊಹಾಲಿ
ಹೈದರಾಬಾದ್ 244/7, 90 ಓವರ್ಸ್(ಆಕ್ಷಯ್ ರೆಡ್ಡಿ, 63, ಡಿಬಿ ರವಿ ತೇಜ 36, ವಿವಿಎಸ್ ಲಕ್ಷ್ಮಣ್ 23, ಇಬ್ರಾಹಿಂ ಖಲೀಲ್ 38*, ಅಮಿತೋಜ್ ಸಿಂಗ್ 3/33, ಮನ್ ಪ್ರೀತ್ ಗೋನಿ 3/51)

* ಒಡಿಸ್ಸಾ vs ತಮಿಳುನಾಡು, ಕಟಕ್
ತಮಿಳುನಾಡು 66/2, 31 ಓವರ್ಸ್ (ಅಭಿನವ್ ಮುಕುಂಡ್ 21 ಬ್ಯಾಟಿಂಗ್)

* ಮಧ್ಯ ಪ್ರದೇಶ vs ಗುಜರಾತ್, ಇಂದೋರ್
ಗುಜರಾತ್ 327/5, 90 ಓವರ್ಸ್ (ಪಾರ್ಥೀವ್ ಪಟೇಲ್ 162, ವೇಣುಗೋಪಾಲ್ ರಾವ್ 45, ಮನ್ ಪ್ರೀತ್ ಜುನೇಜಾ 42, ಆನಂದ್ ರಾಜನ್ 2/67)

* ಅಸ್ಸಾಂ vs ತ್ರಿಪುರ, ಗುವಾಹಟಿ
ಅಸ್ಸಾಂ 220/5, 90 ಓವರ್ಸ್(ಧೀರಜ್ ಜಾಧವ್ 127, ಗೋಕುಲ್ ಶರ್ಮ 41, ತಿಮಿರ್ ಚಂದ 5/50)

* ಆಂಧ್ರ ಪ್ರದೇಶ vs ಸರ್ವೀಸಸ್, ಅನಂತಪುರ
ಸರ್ವೀಸಸ್ 73/5, 28 ಓವರ್ಸ್ (ಸೌಮ್ಯರಂಜನ್ ಸ್ವೇನ್ 21, ಅಚ್ಯುತರಾವ್ 2/23, ಡಿ ಶಿವಕುಮಾರ್)

* ಹಿಮಾಚಲ ಪ್ರದೇಶ vs ಕೇರಳ, ಅಮ್ತಾರ್
ಕೇರಳ 196/8, 73.4 ಓವರ್ಸ್ (ಸಂಜು ಸಾಮ್ಸನ್ 100*, ಅಭಿಶೇಕ್ ಹೆಗ್ಡೆ 26, ರಿಶಿ ಧವನ್ 3/56, ವಿಕ್ರಮ್ ಜೀತ್ 2/43)

* ಹರ್ಯಾಣ vs ವಿದರ್ಭ, ಲಾಹಿಲ್
ಹರ್ಯಾಣ 55 ಆಲೌಟ್, 37.1 ಓವರ್ (ಉಮೇಶ್ ಯಾದವ್ 5/18, ಸಂದೀಪ್ ಸಿಂಗ್ 4/11) ಹಾಗೂ ವಿದರ್ಭ 78/2, 37 ಓವರ್ಸ್ (ಫೈಜ್ ಫಜಲ್ 33)

* ಜಮ್ಮು ಮತ್ತು ಕಾಶ್ಮೀರ vs ಜಾರ್ಖಂಡ್, ಜಮ್ಮು
ಜಮ್ಮು ಮತ್ತು ಕಾಶ್ಮೀರ 195 ಆಲೌಟ್, 56.5 ಓವರ್ಸ್ (ಹರ್ದೀಪ್ ಸಿಂಗ್ 49 ಔಟಾಗದೆ, ಅದಿಲ್ ರಿಶಿ 41, ಶಂಕರ್ ರಾವ್ 3/50, ಶಾಬಾಜ್ ನದೀಂ 3/50) ಹಾಗೂ ಜಾರ್ಖಂಡ್ 81/1, 29 ಓವರ್ಸ್ (ಎಂಪಿ ವರ್ಧನ್ 31, ನೆಮಾತ್ 42 ಬ್ಯಾಟಿಂಗ್)

(ದಟ್ಸ್ ಕ್ರಿಕೆಟ್)

Story first published:  Friday, November 2, 2012, 16:48 [IST]
English summary
Sachin Tendulkar scored a century playing for Mumbai against Railways on the opening day of the Ranji Trophy here at the Wankhede Stadium on Friday. Tendulkar got to his 100 off 103 balls with 14 fours and three sixes. This was his 18th century for Mumbai.
ಅಭಿಪ್ರಾಯ ಬರೆಯಿರಿ