Englishहिन्दीമലയാളംதமிழ்తెలుగు

ಸೌರವ್ ಗಂಗೂಲಿಯ ದಾದಾ ಕ್ರಿಕೆಟ್ ಜೀವನ ಅಂತ್ಯ

Posted by:
Updated: Monday, October 29, 2012, 16:04 [IST]
 

ಕೋಲ್ಕತಾ, ಅ.29: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಕ್ರಿಕೆಟ್ ಜೀವನ ಬಹುತೇಕ ಅಂತ್ಯಗೊಂಡಿದೆ. ಎಲ್ಲಾ ಬಗೆಯ ಕ್ರಿಕೆಟ್ ಗೆ ವಿದಾಯ ಹೇಳಿ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಮಾತ್ರ ಆಡುತ್ತಿದ್ದ ಗಂಗೂಲಿ, ಐಪಿಎಲ್ 6 ನಲ್ಲಿ ಆಡುವುದಿಲ್ಲ ಎಂದು ಘೋಷಿಸಿದ್ದಾರೆ.

ಪುಣೆ ವಾರಿಯರ್ಸ್ ನಾಯಕ ಸೌರವ್ ಗಂಗೂಲಿ ಅವರು ತಮ್ಮ ಐಪಿಲ್ ವೃತ್ತಿ ಜೀವನಕ್ಕೆ ಕೊನೆ ಹಾಡುತ್ತಿದ್ದಂತೆ ಪ್ರಥಮ ದರ್ಜೆ ಕ್ರಿಕೆಟ್ ಗೆ ಗುಡ್ ಬೈ ಹೇಳಿದಂತಾಗಿದೆ. ಗಂಗೂಲಿ ಈಗಾಗಲೇ ರಣಜಿ ಕ್ರಿಕೆಟ್ ಕೂಡಾ ಆಡುವುದನ್ನು ಬಿಟ್ಟು ಪೂರ್ಣ ಪ್ರಮಾಣವಾಗಿ ಕ್ರಿಕೆಟ್ ವಿಶ್ಲೇಷಕ, ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ.

ಸೌರವ್ ಗಂಗೂಲಿಯ ದಾದಾ ಕ್ರಿಕೆಟ್ ಜೀವನ ಅಂತ್ಯ

2008ರಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಆಡಲು ಶುರು ಮಾಡಿದ್ದ ಗಂಗೂಲಿ, ಐಪಿಎಲ್ 6 ನಲ್ಲಿ ಆಡಲು ಇಚ್ಛೆಯಿಲ್ಲ ಎಂದು ತನ್ನ ಫ್ರಾಂಚೈಸಿಗಳಿಗೆ ಹೇಳಿದ್ದಾರೆ.

ಐಪಿಎಲ್ ನಲ್ಲಿ ಐದು ಸೀಸನ್ ಆಡಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡಿ ಪಡೆದ ಅನುಭವ ಒಂದು ರೀತಿಯಾದರೆ, ಟ್ವೆಂಟಿ20 ಕ್ರಿಕೆಟ್ ಅನುಭವವೇ ಬೇರೆಯಾಗಿದೆ. ಐಪಿಎಲ್ ನಲ್ಲಿ ಆಡಿದಷ್ಟು ಕಾಲ ಖುಷಿ ಪಟ್ಟಿದ್ದೇನೆ. ಈಗ ಸಂತೋಷದಿಂದಲೇ ವಿದಾಯ ಹೇಳುತ್ತಿದ್ದೇನೆ ಎಂದು ಗಂಗೂಲಿ ಹೇಳಿದ್ದಾರೆ.

ಗಂಗೂಲಿ ಅವರ ಅನುಪಸ್ಥಿತಿಯಲ್ಲಿ ಮನೋಜ್ ತಿವಾರಿ ಬೆಂಗಾಳ ರಣಜಿ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಪೂರ್ತಿ ಸೀಸನ್ ಆಡಿ ಕೂಡಾ ಭಾರತ ತಂಡ ಸೇರಲು ಆಗದಿದ್ದರೆ ಕಷ್ಟವಾಗುತ್ತದೆ. ಅದರೆ, ನಾನು ಇಂಡಿಯನ್ ಪ್ರಿಮಿಯರ್ ಲೀಗ್ ಗೆ ಆಡುವ ಮುನ್ನ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಸಾಕಷ್ಟು ಆಡಿ ಅನುಭವ ಪಡೆದೆ. ಯಾವುದಕ್ಕೆ ಆದರೂ ಪೂರ್ವ ತಯಾರಿ ಬಹುಮುಖ್ಯ ಎಂದು ಗಂಗೂಲಿ ಹೇಳಿದ್ದಾರೆ.

1989-90ರಲ್ಲಿ ದೆಹಲಿ ವಿರುದ್ಧ ರಣಜಿ ಪಂದ್ಯ ಆಡುವ ಮೂಲಕ ಕ್ರಿಕೆಟ್ ಜೀವನ ಆರಂಭಿಸಿದ್ದು ಈಗಲೂ ಕಣ್ಣಿಗೆ ಕಟ್ಟಿದ್ದಂತೆ ಇದೆ. 21 ವರ್ಷಗಳ ಕಾಲ ಕ್ರಿಕೆಟ್ ನಿಂದ ಸಾಕಷ್ಟು ಕಲಿತ್ತಿದ್ದೇನೆ. ಕ್ರಿಕೆಟ್ ಜೀವನ ನನಗೆ ಒಳ್ಳೆ ಅನುಭವ ನೀಡಿದೆ.

ಬೆಂಗಾಳ ಕ್ರಿಕೆಟ್ ಈಗ ಸಮರ್ಥ ವ್ಯಕ್ತಿಗಳ ಕೈಲಿದೆ.ಮನೋಜ್, ವೃದ್ಧಿಮಾನ್ ಸಹಾ, ಅಶೋಕ್ ದಿಂಡಾ, ಸಮಿ, ಅನುಷ್ಟುಪ್ ಎಲ್ಲರೂ ಭಾರತ ತಂಡ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸುತ್ತೇನೆ ಎಂದು ಗಂಗೂಲಿ ಹೇಳಿದರು.

ಐಪಿಎಲ್ 5 ರಲ್ಲಿ ಪುಣೆ ಕಳಪೆ ಸಾಧನೆಯಿಂದ ಬೇಸತ್ತು ನಾನು ನಿವೃತ್ತಿ ಘೋಷಿಸುತ್ತಿಲ್ಲ. ಐಪಿಎಲ್ 6 ಮುಗಿಯುವ ಹೊತ್ತಿಗೆ 41 ವರ್ಷದ ದೇಹ ಹೊತ್ತುಕೊಂಡು ಟಿ20 ಆಡುತ್ತಿದ್ದರೆ ಅದು ನನಗೂ ಕಷ್ಟ, ಫ್ರಾಂಚೈಸಿಗೂ ಕಷ್ಟ. ಬರೀ ಹುಮಸ್ಸು ಇದ್ದರೆ ಸಾಲದು, ದೈಹಿಕ ಹಾಗೂ ಮಾನಸಿಕ ದೃಢತೆ ಕೂಡಾ ಬೇಕು ಎಂದು ಸೌರವ್ ತಿಳಿಸಿದರು.

ಐಪಿಎಲ್ ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಮೂರು ವರ್ಷ, ಪುಣೆ ವಾರಿಯರ್ಸ್ ಪರ ಐಪಿಎಲ್ 5 ರಲ್ಲಿ ಸೇರಿದಂತೆ ಒಟ್ಟು 59 ಪಂದ್ಯಗಳಲ್ಲಿ ಗಂಗೂಲಿ ಕಾಣಿಸಿಕೊಂಡಿದ್ದಾರೆ. 25.46 ರನ್ ಸರಾಸರಿ ಹಾಗೂ 106.80 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಐಪಿಎಲ್ 6 ರಲ್ಲಿ ತಂಡದ ಕೋಚ್ ಅಥವಾ ಸಲಹೆಗಾರರಾಗಿ ಮುಂದುವರೆಯುವ ಬಗ್ಗೆ ಗಂಗೂಲಿ ಇನ್ನೂ ನಿರ್ಧರಿಸಿಲ್ಲ ಎನ್ನಲಾಗಿದೆ. ಕಾಲಕ್ಕೆ ತಕ್ಕಂತೆ ಕುಣಿಯುವುದನ್ನು ಕಲಿತಿರುವ ಗಂಗೂಲಿ ಇತರೆ ಹಿರಿಯ ಆಟಗಾರರಿಗೂ ಮಾದರಿಯಾಗಿ ನಿಂತಿದ್ದಾರೆ.

Story first published:  Monday, October 29, 2012, 12:27 [IST]
English summary
Pune Warriors' skipper Sourav Ganguly has put an end to his IPL career, as he has decided not to play the next edition of the cash-rich league.
ಅಭಿಪ್ರಾಯ ಬರೆಯಿರಿ