Englishहिन्दीമലയാളംதமிழ்తెలుగు

ಸನ್ ತೆಕ್ಕೆಗೆ ಹೈದರಾಬಾದ್ ದೊಡ್ಡ ವಂಚನೆ

Posted by:
Updated: Friday, October 26, 2012, 14:20 [IST]
 

ಸನ್ ತೆಕ್ಕೆಗೆ ಹೈದರಾಬಾದ್ ದೊಡ್ಡ ವಂಚನೆ
 

ಬೆಂಗಳೂರು, ಅ.26: ಹೈದರಾಬಾದಿನ ಐಪಿಎಲ್ ತಂಡವನ್ನು ಚೆನ್ನೈ ಮೂಲದ ಸನ್ ಟಿವಿ ಖರೀದಿಸಿರುವುದು ಐಪಿಎಲ್ ನ ಇದುವರೆಗಿನ ಅತಿ ದೊಡ್ಡ ಹಗರಣವಾಗಿದೆ ಎಂದು ಐಪಿಎಲ್ ನ ಮಾಜಿ ಚೇರ್ಮನ್ ಲಲಿತ್ ಮೋದಿ ಹೇಳಿದ್ದಾರೆ.

ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರು ಸನ್ ಟಿವಿಗೆ ಹೈದರಾಬಾದಿನ ಐಪಿಎಲ್ ತಂಡ ಡೆಕ್ಕನ್ ಚಾರ್ಜರ್ಸ್ ಸಿಗುವಂತೆ ಮಾಡುವಲ್ಲಿ ಸಾಕಷ್ಟು ತಂತ್ರಗಾರಿಕೆ ಹೂಡಿದ್ದಾರೆ.

ಶ್ರೀನಿವಾಸನ್ ಅವರ ಕುತಂತ್ರದ ಬಗ್ಗೆ ಮೂರು ತಿಂಗಳ ಹಿಂದೆ ಟ್ವೀಟ್ ಮಾಡಿದ್ದೆ ಐಪಿಎಲ್ ತಂಡವನ್ನು ಶ್ರೀನಿವಾಸನ್ ಅವರ ಗೆಳೆಯರಿಗೆ ಗಿಫ್ಟ್ ಆಗಿ ಬಿಸಿಸಿಐ ನೀಡಲಿದೆ ಎಂದು ಈ ಮುಂಚೆ ಹೇಳಿದ್ದು ಈಗ ನಿಜವಾಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಡೆಕ್ಕನ್ ಚಾರ್ಜರ್ಸ್ ತಂಡವನ್ನು ವಾರ್ಷಿಕ 85.05 ಕೋಟಿ ರು ನಂತೆ ನೀಡಿ ಸನ್ ಟಿವಿ ಖರೀದಿಸಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಗುರುವಾರ(ಅ.25) ಪ್ರಕಟಿಸಿತ್ತು.

ಇದಕ್ಕೂ ಮುನ್ನ ಡೆಕ್ಕನ್ ಚಾರ್ಜರ್ಸ್ ಹಾರಾಜು ಪ್ರಕ್ರಿಯೆ ನಡೆದಿದ್ದರೂ ಯಾವುದೇ ಸಂಸ್ಥೆ ಮಾರಾಟವಾಗಿರಲಿಲ್ಲ. ಕೇವಲ ಪಿವಿಪಿ ವೆಂಚರ್ಸ್ ಕಂಪನಿ ಮಾತ್ರ ಬಿಡ್ಡಿಂಗ್ ನಲ್ಲಿ ಉಳಿದಿತ್ತು. ಈಗ ಕೂಡಾ ಸನ್ ಟಿವಿ ಹಾಗೂ ಪಿವಿಪಿ ಸಂಸ್ಥೆ ಮಾತ್ರ ಬಿಡ್ಡಿಂಗ್ ನಲ್ಲಿತ್ತು. ಉಳಿದ ಸಂಸ್ಥೆಗಳು ಹೆಸರು ನೋಂದಾಯಿಸಿದ್ದರೂ ಬಿಡ್ಡಿಂಗ್ ಹಣ ಪಾವತಿಸಿರಲಿಲ್ಲ ಎಂದು ತಿಳಿದು ಬಂದಿದೆ.

ವಂಚನೆ ಹೇಗೆ? :ಮೋದಿ ಎತ್ತಿರುವ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿದೆ. 2010ರಲ್ಲಿ ಪುಣೆ ವಾರಿಯರ್ಸ್ ತಂಡ ಪಡೆಯಲು ಸಹಾರಾ ಸಂಸ್ಥೆ 1,702 ಕೋಟಿ ರು ಖರ್ಚು ಮಾಡಿತ್ತು. ಆದರೆ, ಅರ್ಧಕ್ಕಿಂತ ಕಮ್ಮಿ ಬೆಲೆಗೆ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಸನ್ ಟಿವಿಗೆ ಕೊಟ್ಟಿದ್ದು ಏಕೆ ಎಂದು ಮೋದಿ ಪ್ರಶ್ನಿಸಿದ್ದಾರೆ.

ಇಂಡಿಯಾ ಸಿಮೆಂಟ್ಸ್ ಹಾಗೂ ಸನ್ ಟಿವಿ ಷೇರುದಾರರ ಪಟ್ಟಿ ತೆಗೆಸಿ ನೋಡಬೇಕಾಗಿದೆ. ಶ್ರೀನಿವಾಸನ್ ಅವರಿಗೆ ಎಷ್ಟು ಪಾಲು ಸಿಗಲಿದೆ ಎಂಬುದು ಆಗ ತಿಳಿಯುತ್ತದೆ ಎಂದು ಮೋದಿ ಕಿಡಿಕಾರಿದ್ದಾರೆ.

ಐಪಿಎಲ್ 6 ನಲ್ಲಿ ಎಲ್ಲವೂ ಫಿಕ್ಸ್ ಆಗಿರುತ್ತದೆ. ಇಂಡಿಯಾ ಸಿಮೆಂಟ್ಸ್ ಕಡೆಗೆ ಹಣದ ಹೊಳೆ ಹರಿಯಲಿದೆ. ಇಂಡಿಯಾ ಸಿಮೆಂಟ್ಸ್ IPL ಆಗಲಿದೆ ಎಂದು ಮೋದಿ ಹೇಳಿದ್ದಾರೆ.

ಮುಂಬೈ ಮೂಲದ ರಿಯಲ್ ಎಸ್ಟೇಟ್ ಕಂಪನಿ ಕಮ್ಲಾ ಲ್ಯಾಂಡ್ ಮಾರ್ಕ್ ಸಂಸ್ಥೆ ಸುಮಾರು 1000 ಕೋಟಿ ರು ನೀಡಿ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಖರೀದಿಸುವ ಸಾಧ್ಯತೆಯಿತ್ತು. ನಂತರ, ಪಿವಿಪಿ ವೆಂಚರ್ಸ್ ಕಂಪನಿ 800 ರಿಂದ 900 ಕೋಟಿ ರು ನೀಡಲು ಮುಂದೆ ಬಂದಿತ್ತು. ಆದರೆ, ಡೆಕ್ಕನ್ ಕ್ರೋನಿಕಲ್ ಕನಸಿಗೆ ಬಿಸಿಸಿಐ ಕೊಡಲಿ ಪೆಟ್ಟು ನೀಡಿಬಿಟ್ಟಿತು. ಕೋರ್ಟ್ ಗಳು ಕೂಡಾ ಡೆಕ್ಕನ್ ವಿರುದ್ಧವಾಗಿ ಆದೇಶ ನೀಡಿದ್ದು ಬಿಸಿಸಿಐಗೆ ವರದಾನವಾಯಿತು.

ಸುಮಾರು 4,000 ಕೋಟಿ ಮೊತ್ತದ ಸಾಲ ಹೊತ್ತಿರುವ ಡೆಕ್ಕನ್ ಕ್ರೋನಿಕಲ್ ಹೋಲ್ಡಿಂಗ್ ಲಿಮಿಟೆಡ್(DHCL) ಸಂಸ್ಥೆ ತನ್ನ ಒಂದೊಂದೇ ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಸಾಲ ತೀರಿಸಲು ಯೋಜಿಸಿತ್ತು.

ಡೆಕ್ಕನ್ ಚಾರ್ಜರ್ಸ್ ಐಪಿಎಲ್ ತಂಡ, ತೆಲುಗು ದೈನಿಕ ಆಂಧ್ರಭೂಮಿ, ಆಂಗ್ಲ ಪತ್ರಿಕೆ ಡೆಕ್ಕನ್ ಕ್ರೋನಿಕಲ್, ರೀಟೈಲ್ ಮಳಿಗೆ ಒಡಿಸ್ಸಿ ಅಲ್ಲದೆ ವಿಮಾನಯಾನ ಮತ್ತಿ ಕೊರಿಯರ್ ಸೇವೆಯನ್ನು DHCL ಸಂಸ್ಥೆ ಒದಗಿಸುತ್ತಿದೆ.

Story first published:  Friday, October 26, 2012, 12:01 [IST]
English summary
Former Indian Premier League (IPL) chairman Lalit Modi has hit out at Board of Control for Cricket in India's (BCCI) President N Srinivasan over Sun TV buying the Hyderabad franchise and has called the move as a "big scam."
ಅಭಿಪ್ರಾಯ ಬರೆಯಿರಿ