Englishहिन्दीമലയാളംதமிழ்తెలుగు

ಇಂಗ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯಕ್ಕೆ ಯುವರಾಜ್

Posted by:
Published: Thursday, October 25, 2012, 11:54 [IST]
 

ಇಂಗ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯಕ್ಕೆ ಯುವರಾಜ್
 

ಮುಂಬೈ, ಅ.25: ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ದ್ವಿಶತಕ ದಾಖಲಿಸಿ, ಟೆಸ್ಟ್ ಕ್ರಿಕೆಟ್ ಆಡಲು ಸಿದ್ಧ ಎಂದು ಎಡಗೈ ಆಟಗಾರ ಯುವರಾಜ್ ಸಿಂಗ್ ಆಯ್ಕೆದಾರರಿಗೆ ಮನದಟ್ಟು ಮಾಡಿಕೊಟ್ಟಿದ್ದು ಫಲ ನೀಡಿದೆ. ಯುವರಾಜ್ ಸಿಂಗ್ ಅವರನ್ನು ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ.

ಇಂಗ್ಲೆಂಡ್ ವಿರುದ್ಧದ ಮೂರು ದಿನದ ಅಭ್ಯಾಸ ಪಂದ್ಯಕ್ಕೆ ಭಾರತ ಎ ತಂಡದಲ್ಲಿ ಯುವರಾಜ್ ಸಿಂಗ್ ಸ್ಥಾನ ಪಡೆದಿದ್ದಾರೆ. ಈ ಅಭ್ಯಾಸ ಪಂದ್ಯ ಮುಂಬೈಯಲ್ಲಿ ಅಕ್ಟೋಬರ್ 30 ರಂದು ಆರಂಭವಾಗಲಿದೆ.

ಕ್ಯಾನ್ಸರ್‌ನಿಂದ ಚೇತರಿಸಿಕೊಂಡು ಮೈದಾನಕ್ಕೆ ಇಳಿದಿದ್ದ ಯುವರಾಜ್ ಸಿಂಗ್ ಅವರು ಟಿ20 ಮಾದರಿಯಲ್ಲಿ ಉತ್ತಮ ಆಟ ಪ್ರದರ್ಶಿಸಿ ದೈಹಿಕ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು.

ಇತ್ತೀಚೆಗೆ ನಡೆದ ದುಲೀಪ್ ಟ್ರೋಫಿ ಪಂದ್ಯದಲ್ಲಿ ಉತ್ತರ ವಲಯ ಪರ ಆಡಿದ ಯುವರಾಜ್, ಕೇಂದ್ರ ವಲಯದ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದರು.
30 ವರ್ಷದ ಯುವರಾಜ್ ಸಿಂಗ್ ಅವರು ಭಾರತ ಎ ತಂಡದಲ್ಲಿ ಸುರೇಶ್ ರೈನಾ ನಾಯಕತ್ವದಡಿಯಲ್ಲಿ ಆಡಬೇಕಿದೆ.

ಈ ಇಬ್ಬರು ಎಡಗೈ ಆಟಗಾರರು ಭಾರತ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನ ಪಡೆಯಲು ಸತತ ಪ್ರಯತ್ನ ನಡೆಸಿದ್ದಾರೆ.

ಆಯ್ಕೆ ಸಮಿತಿಯ ನೂತನ ಅಧ್ಯಕ್ಷ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಸಭೆ ಸೇರಿದ್ದ ಆಯ್ಕೆ ಸಮಿತಿ ಭಾರತ ಎ ತಂಡಕ್ಕೆ ಆರು ಮಂದಿ ಬ್ಯಾಟ್
ಮನ್‌ಗಳನ್ನು ಆಯ್ಕೆ ಮಾಡಿದ್ದು ಇದರಲ್ಲಿ ಉದಯೋನ್ಮುಖ ಆಟಗಾರರಾದ ಶಿಖರ್ ಧವನ್, ಅಜಿಂಕ್ಯ ರೆಹಾನೆ ಮತ್ತು ಮನೋಜ್ ತಿವಾರಿ ಇದ್ದಾರೆ.

ವೃದ್ಧಿಮಾನ್ ಸಹ ತಂಡದಲ್ಲಿರುವ ಏಕೈಕ ವಿಕೆಟ್‌ಕೀಪರ್. ಬೌಲಿಂಗ್ ದಾಳಿಯ ಜವಾಬ್ದಾರಿಯನ್ನು ಇರ್ಫಾನ್ ಪಠಾಣ್ ಹೊತ್ತಿದ್ದಾರೆ. ಅವರಿಗೆ ಅಶೋಕ್ ದಿಂಡ ಮತ್ತು ವಿನಯ್ ಕುಮಾರ್ ನೆರವಾಗಲಿದ್ದಾರೆ. ಸ್ಪಿನ್ನರ್ ಗಳಿಗೆ ಮಣೆ ಹಾಕಿಲ್ಲದಿರುವುದು ವಿಶೇಷವಾಗಿದ್ದು, ಇಂಗ್ಲೆಂಡ್ ತಂಡಕ್ಕೆ ಸ್ಪಿನ್ ದಾಳಿಯ ಬಗ್ಗೆ ಸುಳಿವು ಬಿಟ್ಟು ಕೊಡಬಾರದು ಎಂಬು ಬಿಸಿಸಿಐ ಉದ್ದೇಶ ಇದ್ದ ಹಾಗಿದೆ.

ತಂಡ ಇಂತಿದೆ: ಸುರೇಶ್ ರೈನಾ (ನಾಯಕ), ಮುರಳಿ ವಿಜಯ್, ಶಿಖರ್ ಧವನ್,ಅಜಿಂಕ್ಯ ರೆಹಾನೆ, ಯುವರಾಜ್ ಸಿಂಗ್, ಮನೋಜ್ ತಿವಾರಿ, ವೃದ್ಧಿಮಾನ್ ಸಹ (ವಿಕೆಟ್‌ಕೀಪರ್), ಇರ್ಫಾನ್ ಪಠಾಣ್, ವಿನಯ್ ಕುಮಾರ್, ಪರ್ವಿಂದರ್ ಅವಾನ, ಅಶೋಕ್ ದಿಂಡ, ರಾಬಿನ್ ಬಿಸ್ಟ್, ಅಶೋಕ್ ಮೆನರಿಯ, ಅಭಿನವ್ ಮುಕುಂದ.

ಕೋಚ್ : ಲಾಲ್ ಚಂದ್ ರಜಪುತ್

ಆಟಗಾರರ ಪೈಕಿ ಶಿಖರ್ ಧವನ್ ಆಡುವುದು ಅನುಮಾನ ಎನ್ನಲಾಗಿದೆ. ಶಿಖರ್ ಧವನ್ ಅವರು ತಮ್ಮ ಕುಟುಂಬದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಧವನ್ ಬದಲಿಗೆ ಅಂಬಟಿ ರಾಯುಡು ಆಡಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಹೇಳಿದ್ದಾರೆ.

English summary
Comeback batsman Yuvraj Singh was picked in the India A squad which will play England XI in their opening three-day practice game scheduled from October 30 in Mumbai.
ಅಭಿಪ್ರಾಯ ಬರೆಯಿರಿ