Englishहिन्दीമലയാളംதமிழ்తెలుగు

ರಣಜಿ ಆಟಗಾರ ರಾಜಾ ನಿಗೂಢ ಸಾವು

Posted by:
Published: Monday, October 22, 2012, 15:48 [IST]
 

ರಣಜಿ ಆಟಗಾರ ರಾಜಾ ನಿಗೂಢ ಸಾವು
 

ಭೋಪಾಲ್, ಅ.22: ರೈಲ್ವೆ ತಂಡದ ರಣಜಿ ಆಟಗಾರ ರಾಜಾ ಅಲಿ ಅವರು ಅನುಮಾಸ್ಪದವಾಗಿ ಅಪಘಾತಕ್ಕೀಡಾಗಿ ದುರಂತ ಸಾವನ್ನಪ್ಪಿದ್ದಾರೆ. ಇಲ್ಲಿನ ವಿಐಪಿ ರಸ್ತೆಯಲ್ಲಿ ತಮ್ಮ ಬೈಕ್ ನೊಂದಿಗೆ ರಸ್ತೆಯಲ್ಲಿ ರಾಜಾ ಅಲಿ ಅವರ ಶವ ಭಾನುವಾರ(ಅ.21) ತಡ ರಾತ್ರಿ ಪತ್ತೆಯಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟರ್ ಜೆಪಿ ಯಾದವ್ ಅವರೊಂದಿಗೆ ಆಡಿದ್ದ ರಾಜಾ ಅಲಿ ಅವರು ರಣಜಿಯಲ್ಲಿ ಉತ್ತಮ ಕ್ರಿಕೆಟರ್ ಆಗಿ ಬೆಳೆದಿದ್ದರು.

ಕಳೆದ ರಾತ್ರಿ ಖಾಸಗಿ ಕಾರ್ಯಕ್ರಮವನ್ನು ಮುಗಿಸಿಕೊಂಡು ತಡರಾತ್ರಿ ಮನೆಗೆ ಮರಳುವಾಗ ಮಾರ್ಗಮಧ್ಯದಲ್ಲಿ ಅಸ್ವಸ್ಥಗೊಂಡ ರಾಜಾ ಅವರು ಅಪಘಾತಕ್ಕೀಡಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ರಾಜಾ ಅವರನ್ನು ಸಾರ್ವಜನಿಕರು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಸಿದರೂ ಫಲಕಾರಿಯಾಗದೆ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ರಾಜಾ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ರಾಜಾ ಅವರಿಗೆ ಯಾವುದೇ ಕಾಯಿಲೆ ಇದ್ದ ಬಗ್ಗೆ ಕುಟುಂಬದವರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಭೋಪಾಲ್ ಪೊಲೀಸರು ಹೇಳಿದ್ದಾರೆ.

ವೈಯಕ್ತಿಕ ದ್ವೇಷದಿಂದ ರಾಜಾ ಅವರ ಮೇಲೆ ಹಲ್ಲೆ ನಡೆದಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

36 ವರ್ಷದ ರಾಜಾ ಅವರು ಮಧ್ಯಪ್ರದೇಶ ಹಾಗೂ ರೈಲ್ವೇಸ್ ಪರ ದೇಶಿ ಕ್ರಿಕೆಟ್ ನಲ್ಲಿ ಆಡಿದ್ದಾರೆ. ಎಡಗೈ ಬ್ಯಾಟ್ಸ್ ಮನ್ ಹಾಗೂ ಎಡಗೈ ಸಾಂಪ್ರದಾಯಿಕ ಶೈಲಿ ಬೌಲಿಂಗ್ ಮಾಡುತ್ತಿದ್ದ ರಾಜಾ ಅವರು 1996/97ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಪ್ರವೇಶಿಸಿದರು.

87 ರಣಜಿ ಪಂದ್ಯಗಳಲ್ಲಿ 9 ಶತಕ ಹಾಗೂ 22 ಅರ್ಧ ಶತಕ ಬಾರಿಸಿದ್ದರು. 38.38 ರನ್ ಸರಾಸರಿ ಹೊಂದಿದ್ದ 148 ರನ್ ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ. ಒಟ್ಟು 4337 ರನ್ ಕಲೆಹಾಕಿದ್ದರು. 54 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

English summary
Ranji Trophy cricketer Raja Ali found dead with his bike on VIP Road in Bhopal, capital of Madhya Pradesh on Oct.21.
ಅಭಿಪ್ರಾಯ ಬರೆಯಿರಿ