Englishहिन्दीമലയാളംதமிழ்తెలుగు

ಭಾರತ ಪ್ರವಾಸಕ್ಕೆ ಕೆವಿನ್ ಪೀಟರ್ಸನ್ ಸೇರ್ಪಡೆ

Posted by:
Updated: Friday, October 19, 2012, 18:35 [IST]
 

ಭಾರತ ಪ್ರವಾಸಕ್ಕೆ ಕೆವಿನ್ ಪೀಟರ್ಸನ್ ಸೇರ್ಪಡೆ
 

ಬೆಂಗಳೂರು, ಅ.19: ಇಂಗ್ಲೆಂಡ್ ತಂಡದ ಪ್ರತಿಭಾವಂತ ಆಟಗಾರ ಕೆವಿನ್ ಪೀಟರ್ಸನ್ ಕೊನೆಗೂ ಇಸಿಬಿ ಜೊತೆ ರಾಜಿಯಾಗಿದ್ದಾರೆ. ಹೀಗಾಗಿ, ಭಾರತ ಪ್ರವಾಸಕ್ಕೆ ತೆರಳುವ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಕೆವಿನ್ ಪೀಟರ್ಸನ್ ಗೆ ಸ್ಥಾನ ಕಲ್ಪಿಸಲಾಗಿದೆ.

ಕೆವಿನ್ ಪೀಟರ್ಸನ್ ಹಾಗೂ ಸ್ಟ್ರಾಸ್ ಅನುಪಸ್ಥಿತಿಯಲ್ಲಿ ಭಾರತದ ವಿರುದ್ಧ ಟೆಸ್ಟ್ ಆಡಲಿರುವ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಶಕ್ತಿ ಕುಂದಲಿದೆ ಎಂದು ಟೀಕೆ, ಸಲಹೆಗಳು ಬಂದ ಮೇಲೆ ಕೆವಿನ್ ಜೊತೆ ಬೋರ್ಡ್ ನ ಸದಸ್ಯರು ಹಾಗೂ ನಾಯಕ ಕುಕ್ ಮತ್ತು ಹಿರಿಯ ಆಟಗಾರರು ಮಾತುಕತೆ ನಡೆಸಿ, ಕೆವಿನ್ ಆಯ್ಕೆಗೆ ಸಮ್ಮತಿಸಿದ್ದಾರೆ.

ಇಂಗ್ಲೆಂಡ್ ಟೆಸ್ಟ್ ಕಪ್ತಾನ ಆಂಡ್ರೂ ಸ್ಟ್ರಾಸ್ ಅವರನ್ನು ಟೀಕಿಸಿ ದಕ್ಷಿಣ ಆಫ್ರಿಕಾದ ಆಟಗಾರರಿಗೆ ಕೆಲವು ಸಂದೇಶಗಳನ್ನು ಕೆವಿನ್ ಕಳುಹಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದ ಇನ್ನೂ ಇತ್ಯರ್ಥವಾಗದ ಕಾರಣ ಕೆವಿನ್ ಅವರಿಗೆ ಆಯ್ಕೆದಾರರ ಕೃಪೆ ಇನ್ನೂ ಸಿಕ್ಕಿರಲಿಲ್ಲ.

ನಂತರ ನಾಯಕ ಆಂಡ್ರೂ ಸ್ಟ್ರಾಸ್ ನಿವೃತ್ತಿ ಘೋಷಿಸಿದ್ದರು. 31 ವರ್ಷದ ದಕ್ಷಿಣ ಆಫ್ರಿಕಾ ಮೂಲದ  ಪೀಟರ್ಸನ್ ಸ್ವಾಭಿಮಾನ ಬಲಿ ಕೊಟ್ಟು ಬೋರ್ಡ್ ಮುಂದೆ ನಿಂತು ಕ್ಷಮೆಯಾಚಿಸಿದ್ದರು. ಆದರೆ, ಇದ್ಯಾವುದನ್ನು ಪರಿಗಣಿಸದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತನ್ನ ಹಠಮಾರಿತನ ಮುಂದುವರೆಸಿ ಕೆಪಿಯನ್ನು ತಂಡದಿಂದ ಹೊರಗಿಟ್ಟಿತ್ತು.

ಇಂಗ್ಲೆಂಡ್ ಟೆಸ್ಟ್ ತಂಡ: ಅಲೆಸ್ಟರ್ ಕುಕ್(ನಾಯಕ) ಜೇಮ್ಸ್ ಆಂಡರ್ಸನ್, ಜಾನಿ ಬೈರ್ಸ್ಟೊ, ಇಯಾನ್ ಬೆಲ್, ಟಿಮ್ ಬ್ರೆಸ್ನನ್, ಸ್ಟುವರ್ಟ್ ಬ್ರಾಡ್, ನಿಕ್ ಕಾಂಪ್ಟನ್(ಹೊಸ ಮುಖ), ಸ್ಟೀವ್ ಫಿನ್, ಗ್ರಹಾಂ ಓನಿಯನ್ಸ್(ಹೊಸ ಮುಖ), ಮಾಂಟಿ ಪನೇಸರ್, ಸಮಿತ್ ಪಟೇಲ್, ಮ್ಯಾಟ್ ಪ್ರಿಯರ್, ಜೊ ರೂಟ್(ಹೊಸ ಮುಖ), ಗ್ರಹಾಂ ಸ್ವಾನ್, ಜೊನಾಥನ್ ಟ್ರಾಟ್

ನವೆಂಬರ್ 15, 2012ರಿಂದ ಜನವರಿ 27, 2013ರ ತನಕ ಭಾರತ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ ತಂಡ ಈ ಅವಧಿಯಲ್ಲಿ 4 ಟೆಸ್ಟ್, 2 ಟಿ20 ಹಾಗೂ 5 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.

Story first published:  Friday, October 19, 2012, 12:01 [IST]
English summary
The England selectors on Thursday announced that Kevin Pietersen has been added to the Test squad for the forthcoming tour of India.
ಅಭಿಪ್ರಾಯ ಬರೆಯಿರಿ