Englishहिन्दीമലയാളംதமிழ்తెలుగు

ತೆಂಡೂಲ್ಕರ್ ರಣಜಿ ಆಡುವುದು ಎಷ್ಟು ಸರಿ?

Posted by:
Updated: Wednesday, October 17, 2012, 14:18 [IST]
 

ತೆಂಡೂಲ್ಕರ್ ರಣಜಿ ಆಡುವುದು ಎಷ್ಟು ಸರಿ?
 

ಮುಂಬೈ, ಅ.17: ಜಗದೇಕ ದಾಖಲೆ ವೀರ ಸಚಿನ್ ತೆಂಡೂಲ್ಕರ್ ಅವರು ರಣಜಿ ಟ್ರೋಫಿಯಲ್ಲಿ ಆಡುತ್ತೇನೆ ಎಂದಿದ್ದು ತಕ್ಷಣಕ್ಕೆ ಖುಷಿ ಸಂಗತಿ ಎನಿಸಬಹುದು. ಆದರೆ, ಸಚಿನ್ ಆಡುವುದು ಎಷ್ಟು ಸರಿ? ಎಂಬ ಪ್ರಶ್ನೆ ಮೂಡುತ್ತದೆ.

ಬಹು ಕಾಲದ ನಂತರ ಅಪ್ರತಿಮ ಆಟಗಾರ ಸಚಿನ್ ಮತ್ತೊಮ್ಮೆ ರಣಜಿ ತಂಡಕ್ಕೆ ಮರಳಿರುವುದು ಮುಂಬೈ ತಂಡಕ್ಕೆ ಆನೆ ಬಲ ತಂದಿದೆ.

ದೇಶಿ ಕ್ರಿಕೆಟ್ ನ ಉದ್ಧಾರ ಮಾಡುವ ಇಚ್ಛೆಯಿಂದ ಸಚಿನ್ ಅವರು ಮತ್ತೆ ರಣಜಿ ತಂಡಕ್ಕೆ ಮರಳಿದ್ದಾರೆ. ಜೊತೆಗೆ ಮತ್ತೆ ಲಯಕ್ಕೆ ಮರಳುತ್ತಿರಲು ಯತ್ನಿಸುತ್ತಿರುವ ಸ್ಟ್ರೈಕ್ ಬೌಲರ್ ಜಹೀರ್ ಕೂಡಾ ಮುಂಬೈ ಪರ ಆಡುತ್ತಿದ್ದಾರೆ ಎಂಬುದು ಸಂತಸದ ಸಂಗತಿ.

ಅದರೆ, ವಿಷಯ ಅದಲ್ಲ. ಅನುಭವಿ ಹಾಗೂ ಹಿರಿಯ ಆಟಗಾರ ಸಚಿನ್ ಅವರು ಆಡುವುದರಿಂದ ಉದಯೋನ್ಮುಖ ಯುವ ಪ್ರತಿಭೆಗೆ ಅವಕಾಶ ಸಿಗುವುದಿಲ್ಲ.

ಆಸ್ಟ್ರೇಲಿಯಾ ಸರಣಿಯಲ್ಲಿ ಕ್ಲೀನ್ ಬೋಲ್ಡ್ ದಾಖಲೆ ಮಾಡಿದ ಸಚಿನ್ ತಮ್ಮ ಫುಟ್ ವರ್ಕ್ ಹಾಗೂ ಹೆಚ್ಚು ಕಾಲ ಕ್ರೀಸ್ ನಲ್ಲಿರಲು ಬೇಕಾದ ತಯಾರಿ ನಡೆಸಲು ಒಂದು ಸೂಕ್ತ ವೇದಿಕೆ ಬೇಕಿತ್ತು ಅದಕ್ಕೆ ತಕ್ಕಂತೆ ರಣಜಿ ತಂಡಕ್ಕೆ ಬುಲಾವ್ ಬಂತು.

ಹಾಗೆ ರಣಜಿ ಕ್ರಿಕೆಟ್ ಉದ್ಧಾರ ಮಾಡಬೇಕಿದ್ದರೆ, ಸಚಿನ್ ಅವರು ಬಲಿಷ್ಠ ಮುಂಬೈ ತಂಡಕ್ಕೆ ಆಡಬೇಕಾದ ಅವಶ್ಯಕತೆ ಇರಲಿಲ್ಲ. ದೇಶದ ಯಾವುದೇ ದುರ್ಬಲ ತಂಡದಲ್ಲಿ ಆಡಬಹುದಿತ್ತು. ಈ ಕಿವಿಮಾತು ಬಿಸಿಸಿಐ ಕೂಡಾ ಊದಬಹುದಿತ್ತು.

ಆದರೆ, ಸಚಿನ್ ಗೆ ಸಲಹೆ ನೀಡುವವರು ಯಾರು? ನವೆಂಬರ್ 2 ರಿಂದ 5 ರ ತನಕ ವಾಂಖೆಡೆ ಸ್ಟೇಡಿಯಂನ ರೈಲ್ವೇಸ್ ವಿರುದ್ಧದ ಮೊದಲ ರಣಜಿ ಪಂದ್ಯದಲ್ಲಿ ಸಚಿನ್ ಹಾಗೂ ಜಹೀರ್ ಆಡಲಿದ್ದಾರೆ ಎಂದು ಎಂಸಿಎ ಜಂಟಿ ಕಾರ್ಯದರ್ಶಿ ನಿತಿನ್ ದೇಸಾಯಿ ಹರ್ಷದಿಂದ ಹೇಳಿಕೊಂಡಿದ್ದಾರೆ.


39 ವರ್ಷದ ಸಚಿನ್ ತೆಂಡೂಲ್ಕರ್ ಅವರು ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಚಾಂಪಿಯನ್ಸ್ ಲೀಗ್ ನಲ್ಲಿ ಮುಂಬೈ ತಂಡದ ಪರ ಆಡುತ್ತಿದ್ದಾರೆ.

ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಬೋಲ್ಡ್ ಆದ ಕಹಿ ನೆನಪು ಕಾಡದಿರಲು ರಣಜಿ ಬಳಸಿಕೊಳ್ಳುತ್ತಿದ್ದಾರೆ. ನವೆಂಬರ್ 15 ರಿಂದ ಇಂಗ್ಲೆಂಡ್ ವಿರುದ್ಧ ಆಡಲು ಇದು ಸೂಕ್ತ ವೇದಿಕೆಯಾಗಲಿದೆ.

Story first published:  Wednesday, October 17, 2012, 13:26 [IST]
English summary
Sachin Tendulkar is all set to play for Mumbai in the Ranji Trophy 2012-13 season opener against Railways next month. But, Sachin playing Ranji is debatable it will snatch opportunity of young player
ಅಭಿಪ್ರಾಯ ಬರೆಯಿರಿ