Englishहिन्दीമലയാളംதமிழ்తెలుగు

ಸಚಿನ್ ತೆಂಡೂಲ್ಕರ್ ಗೆ ಆಸ್ಟ್ರೇಲಿಯಾದ ಗೌರವ

Posted by:
Updated: Tuesday, October 16, 2012, 15:47 [IST]
 

ಸಚಿನ್ ತೆಂಡೂಲ್ಕರ್ ಗೆ ಆಸ್ಟ್ರೇಲಿಯಾದ ಗೌರವ
 

ನವದೆಹಲಿ, ಅ.16: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಆಸ್ಟ್ರೇಲಿಯಾದ ಅತ್ಯುನ್ನತ ಗೌರವ ಪಾತ್ರವಾಗಲಿದೆ. ಆಸ್ಟ್ರೇಲಿಯಾದ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಅವರು ಮಂಗಳವಾರ(ಅ.16) ಆರ್ಡರ್ ಆಫ್ ಆಸ್ಟ್ರೇಲಿಯಾ ಸದಸ್ಯತ್ವವನ್ನು ಸಚಿನ್ ತೆಂಡೂಲ್ಕರ್ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಘೋಷಿಸಿದ್ದಾರೆ.

ಭಾರತ ಪ್ರವಾಸದಲ್ಲಿರುವ ಜೂಲಿಯಾ ಗಿಲ್ಲಾರ್ಡ್ ಅವರು ಆಸ್ಟ್ರೇಲಿಯಾ ಪ್ರಜೆ ಹೊರತುಪಡಿಸಿ ಭಾರತೀಯ ಕ್ರೀಡಾಪಟು ಒಬ್ಬರಿಗೆ ಘೋಷಿಸಿರುವುದು ಇದೆ ಮೊದಲು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಸಂಬಂಧ ಇದರಿಂದ ಇನ್ನಷ್ಟು ಹೆಚ್ಚಲಿದೆ ಎಂದು ಜೂಲಿಯಾ ಗಿಲ್ಲಾರ್ಡ್ ಹೇಳಿದ್ದಾರೆ.

39 ವರ್ಷದ ಕ್ರಿಕೆಟರ್ ತೆಂಡೂಲ್ಕರ್ ಈಗ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ‌ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಸಚಿನ್ ಅವರಿಗೂ ಮುಂಚೆ ಮಾಜಿ ಅಟರ್ನಿ ಜನರಲ್ ಸೋಲಿ ಸೊರಾಬ್ಜಿ ಅವರಿಗೆ ಆರ್ಡರ್ ಆಫ್ ಆಸ್ಟ್ರೇಲಿಯಾ ಗೌರವ ಪ್ರಾಪ್ತಿಯಾಗಿತ್ತು.

ಭಾರತ ಹಾಗೂ ಆಸ್ಟ್ರೇಲಿಯಾ ಉಭಯ ದೇಶಗಳ ಕಾನೂನು ಸಂಬಂಧ ಸುಧಾರಣೆಗೆ ಸೊರಾಬ್ಜಿ ಅವರು ನೀಡಿದ ಕೊಡುಗೆ ಪರಿಗಣಿಸಿ 2006ರಲ್ಲಿ ಆರ್ಡರ್ ಆಫ್ ಆಸ್ಟ್ರೇಲಿಯಾ ಗೌರವ ನೀಡಲಾಗಿತ್ತು.

ಆಸ್ಟ್ರೇಲಿಯಾದ ಪ್ರಜೆ ಹಾಗೂ ಮಿಲಿಟರಿ ವಲಯದ ಸಾಧಕರಿಗೆ ಸಿಗುವ ಆರ್ಡರ್ ಆಫ್ ಆಸ್ಟ್ರೇಲಿಯಾ ಗೌರವ ಪ್ರಪ್ರಥಮ ಬಾರಿಗೆ ಭಾರತದ ಕ್ರಿಕೆಟರ್ ಗೆ ಸಲ್ಲುತ್ತಿದೆ. ಆಸ್ಟ್ರೇಲಿಯಾದ ಕ್ಯಾಬಿನೆಟ್ ಸಚಿವ ಸೈಮನ್ ಕ್ರೆಯನ್ ಅವರು ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸಚಿನ್ ಅವರಿಗೆ ಈ ಗೌರವ ನೀಡಿ ಸನ್ಮಾನಿಸುವ ಸಾಧ್ಯತೆಯಿದೆ.

ಸಚಿನ್ ಗೂ ಮೊದಲು ಕ್ರಿಕೆಟ್ ಜಗತ್ತಿನ ದಿಗ್ಗಜ ವೆಸ್ಟ್ ಇಂಡೀಸ್ ನ ಮಾಜಿ ನಾಯಕ ಕ್ಲೈವ್ ಲಾಯ್ಡ್ ಅವರಿಗೆ 1985ರಲ್ಲಿ ಈ ಗೌರವ ಸಿಕ್ಕಿದೆ. ಹಾಗೂ ಅದ್ಭುತ ಆಟಗಾರ ಬ್ರಿಯಾನ್ ಲಾರಾ ಅವರಿಗೆ 2009ರಲ್ಲಿ ಈ ಗೌರವ ನೀಡಲಾಗಿದೆ.

ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಜಗತ್ತಿನಲ್ಲಿ ದೇವರಂತೆ ಕಾಣಲಾಗುತ್ತದೆ. 190 ಟೆಸ್ಟ್ ಗಳಲ್ಲಿ ಸುಮಾರು 15,533 ರನ್ ಹಾಗೂ 463 ಏಕದಿನ ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದಾರೆ.

2008ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರೀಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಕೂಡಾ ಸಚಿನ್ ಅವರಿಗೆ ಲಭಿಸಿದೆ.

Story first published:  Tuesday, October 16, 2012, 15:32 [IST]
English summary
Sachin Tendulkar is set to another feather to his already crowded cap as Australian Prime Minister Julia Gillard on Tuesday announced that the iconic Indian cricketer will be conferred the membership of the Order of Australia, an honour "rarely" awarded to non-Australians.
ಅಭಿಪ್ರಾಯ ಬರೆಯಿರಿ