Englishहिन्दीമലയാളംதமிழ்తెలుగు

ಗೋವಾ ರಣಜಿ ತಂಡಕ್ಕೆ ದೊಡ್ಡ ಗಣೇಶ್ ಕೋಚ್

Posted by:
Published: Tuesday, October 16, 2012, 17:31 [IST]
 

ಗೋವಾ ರಣಜಿ ತಂಡಕ್ಕೆ ದೊಡ್ಡ ಗಣೇಶ್ ಕೋಚ್
 

ಬೆಂಗಳೂರು, ಅ.16: ಭಾರತದ ಮಾಜಿ ವೇಗಿ ದೊಡ್ಡ ನರಸಯ್ಯ ಗಣೇಶ್ ಅವರು ಹಾಲಿ ರಣಜಿ ಋತುವಿನಲ್ಲಿ ಗೋವಾ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಈ ಸಂತಸದ ವಿಷಯವನ್ನು ಗಣೇಶ್ ಅವರು ದಟ್ಸ್ ಕ್ರಿಕೆಟ್ ಜೊತೆ ಹಂಚಿಕೊಂಡಿದ್ದಾರೆ.

ಪ್ರಸಕ್ತ ಋತುವಿನಲ್ಲಿ ಗೋವಾ ತರಬೇತುದಾರನಾಗಿ ಆಯ್ಕೆಯಾಗಿದ್ದಕ್ಕೆ ಸಂತೋಷವಾಗಿದೆ. ಈಗಾಗಲೇ ಅಭ್ಯಾಸ ಆರಂಭವಾಗಿದೆ. 20 ಜನ ಆಟಗಾರರು ಕ್ಯಾಂಪ್ ನಲ್ಲಿದ್ದಾರೆ. ಜಮ್ಮು ಕಾಶ್ಮೀರ ವಿರುದ್ಧ ನವೆಂಬರ್ 9 ರಂದು ಗೋವಾ ತನ್ನ ಮೊದಲ ಪಂದ್ಯವಾಡಲಿದೆ ಎಂದು ಮಂಗಳವಾರ(ಅ.16) ನಮ್ಮ ಪ್ರತಿನಿಧಿ ಜೊತೆ ಮಾತನಾಡುತ್ತಾ ಗಣೇಶ್ ಅವರು ಹೇಳಿದರು.

ಈ ಹಿಂದೆ 2006 ರಿಂದ 2009ರ ತನಕ ಗೋವಾ ತಂಡದ ಕೋಚ್ ಆಗಿದ್ದ ಗಣೇಶ್ ಅವರು ಗೋವಾ ಟ್ರೋಫಿ ಪ್ಲೇಟ್ ಡಿವಿಷನ್ ನ ಸೆಮಿಫೈನಲ್ ತನಕ ತಂಡವನ್ನು ಕೊಂಡೊಯ್ದ ಸಾಧನೆ ಮೆರೆದಿದ್ದರು.

39 ವರ್ಷದ ಬೆಂಗಳೂರು ಮೂಲದ ಗಣೇಶ್ ಅವರು 2007ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದರು. ಗಣೇಶ್ ಅವರು ಭಾರತದ ಪರ ನಾಲ್ಕು ಟೆಸ್ಟ್ ಹಾಗೂ 1 ಏಕದಿನ ಅಂತಾರಾಷ್ಟ್ರೀಯ ಪಂದ್ಯ (ಜಿಂಬಾಬ್ವೆ ವಿರುದ್ಧ 1996-97) ವಾಡಿದ್ದಾರೆ.

ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯ ಆಡಿದ ಅನುಭವವುಳ್ಳ ಗಣೇಶ್ ಕರ್ನಾಟಕದ ಹೆಮ್ಮೆಯ ಬಲಗೈ ವೇಗದ ಬೌಲರ್ ಆಗಿದ್ದರು.

ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 365ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ,. ದೊಡ್ಡ ಗಣೇಶ್ ಅವರಿಗೆ ದಟ್ಸ್ ಕ್ರಿಕೆಟ್ ಶುಭ ಹಾರೈಸುತ್ತದೆ. (ದಟ್ಸ್ ಕ್ರಿಕೆಟ್)

English summary
Former India fast bowler Dodda Ganesh has taken charge as the coach of Goa team for the current Ranji Trophy season.
ಅಭಿಪ್ರಾಯ ಬರೆಯಿರಿ